For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ವಿವೇಕ್‌ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

  |

  ತಮಿಳು ಸಿನಿ ಇಂಡಸ್ಟ್ರಿಯ ಖ್ಯಾತ ಹಾಸ್ಯ ನಟ ವಿವೇಕ್ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

  ವಿವೇಕ್ ಅವರ ಆರೋಗ್ಯ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಪಿಆರ್‌ಓ ಮಾಹಿತಿ ನೀಡಿರುವುದಾಗಿ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವೆಬ್‌ಸೈಟ್ ವರದಿ ಮಾಡಿದೆ.

  ವಿವೇಕ್ ಅವರ ಹೃದಯಾಘಾತಕ್ಕೆ ನಿಖರವಾರ ಕಾರಣ ತಿಳಿದು ಬಂದಿಲ್ಲ. ಆಸ್ಪತ್ರೆ ಕಡೆಯಿಂದಲೂ ಯಾವುದೇ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿಲ್ಲ.

  ಸದ್ಯದ ಮಾಹಿತಿಯ ಪ್ರಕಾರ ಗುರುವಾರ ನಟ ವಿವೇಕ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದರು. ಹಾಗೂ ಸಾರ್ವಜನಿಕರಿಗೂ ಕೊರೊನಾ ಲಸಿಕೆ ಪಡೆಯುವಂತೆ ಮನವಿ ಮಾಡಿದ್ದರು.

  ಬಳಿಕ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದ ವಿವೇಕ್ ಕೋವಿಡ್ ಲಸಿಕೆ ನೀಡಿದ ಆಸ್ಪತ್ರೆಯ ಸಿಬ್ಬಂದಿ, ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ, ವೈದ್ಯರಿಗೆ ಧನ್ಯವಾದ ತಿಳಿಸಿದ್ದರು.

  ಪುನೀತ್ ನಟಿಸುವ ಹೊಸ ಸಿನಿಮಾದಲ್ಲಿ ನೀವು ಕೂಡ ನಟಿಸಬೇಕು ಅಂದ್ರೆ ಹೀಗ್ ಮಾಡಿ | Filmibeat Kannada

  ನಟ ವಿವೇಕ್ ಕೊನೆಯದಾಗಿ 'ಧಾರಳ ಪ್ರಭು' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಈ ಸಿನಿಮಾ ತೆರೆಕಂಡಿತ್ತು. ಕಮಲ್ ಹಾಸನ್ ಅಭಿನಯಿಸುತ್ತಿರುವ 'ಇಂಡಿಯನ್-2' ಚಿತ್ರದಲ್ಲಿ ವಿವೇಕ್ ನಟಿಸುತ್ತಿದ್ದು, ಸಿನಿಮಾ ಸದ್ಯಕ್ಕೆ ನಿಂತಿದೆ.

  English summary
  Tamil actor-comedian Vivek hospitalised after a heart-attack, said to be critical.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X