''ಒವಿಯಾ ತಂಗದ ಹೋಟೆಲ್‌ಗಳಿಲ್ಲ, ನಟಿ ಸದಾಫ್ ಸಿಗರೇಟು ಸೇದಿ ಹಾಳಾದಳು''

By ಫಿಲ್ಮಿಬೀಟ್ ಡೆಸ್ಕ್

'ಜಯಂ' ನಟಿ ಸದಾಫ್, 'ಕಿರಾತಕ' ನಟಿ ಒಲಿಯಾ, ನಟಿ ಅಭಿರಾಮಿ, 'ಚಂದು' ಸಿನಿಮಾದ ನಾಯಕಿ ಸೋನಿಯಾ ಅಗರ್ವಾಲ್, ಕಮಲ್ ಹಾಸನ್ ಜೊತೆ ನಟಿಸಿರುವ ಅಭಿರಾಮಿ ಇನ್ನೂ ಹಲವು ನಟಿಯರ ಬಗ್ಗೆ ನಟ, ಯೂಟ್ಯೂಬರ್ ಬಯಿಲ್ವನ್ ರಂಗನಾಥನ್ ಖಾಸಗಿ ವಿಷಯಗಳನ್ನು ಮಾತನಾಡಿದ್ದಾರೆ.

ಕೆಲವು ಸಿನಿಮಾಗಳಲ್ಲಿ ಪೋಷಕ ನಟನಾಗಿ ನಟಿಸಿರುವ ಬಯಿಲ್ವನ್ ರಂಗನಾಥನ್, ಥಾಂಡೋರಾ ವಾಯ್ಸ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ನಟಿಯರ ಖಾಸಗಿ ವಿಷಯ, ಸಿನಿಮಾರಂಗದ ಡರ್ಟಿ ಸತ್ಯಗಳ ಬಗ್ಗೆ ಮಾತನಾಡಿದ್ದಾರೆ.

ಕನ್ನಡದ 'ಮೊನಾಲಿಸಾ', 'ಮೋಹಿನಿ', 'ಹುಡುಗಾ-ಹುಡುಗಿ', 'ಮೈಲಾರಿ' ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಸದಾಫ್‌ ಬಗ್ಗೆ ಮಾತನಾಡುತ್ತಾ, ''ಸದಾಫ್ ಒಳ್ಳೆಯ ನಟಿ ಆದರೆ ಸಿಗರೇಟು ಸೇದಿ ಆಕೆ ಹಾಳಾದಳು. ಆಕೆ ವಿಪರೀತ ಸಿಗರೇಟು ಸೇದುತ್ತಾಳೆ. ನಾನೂ ಹಲವು ಬಾರಿ ನೋಡಿದ್ದೇನೆ. ಸಿಗರೇಟು ಆಕೆಯ ಮುಖ ಚಹರೆಯೇ ಬದಲಾಗಿ ಹೋಯ್ತು'' ಎಂದಿದ್ದಾರೆ.

'ಕಿರಾತಕ' ನಟಿ ಒವಿಯಾ ಬಗ್ಗೆ ಕೀಳು ಆರೋಪ

'ಕಿರಾತಕ' ನಟಿ ಒವಿಯಾ ಬಗ್ಗೆ ಕೀಳು ಆರೋಪ

'ಕಿರಾತಕ' ಸಿನಿಮಾದಲ್ಲಿ ನಟಿಸಿದ್ದ ನಟಿ ಒವಿಯಾ ಬಗ್ಗೆ ಮಾತನಾಡುತ್ತಾ, ''ಒವಿಯಾರನ್ನು ನಟಿ ಎನ್ನಬೇಕೊ ಬೇಡವೊ ಗೊತ್ತಿಲ್ಲ. ಆಕೆ ವಿಪರೀತ ಮದ್ಯ ಸೇವಿಸುತ್ತಾಳೆ. ಪಬ್‌ಗಳಿಗೆ ಹೋಗುತ್ತಾಳೆ. ಬಾಯ್‌ಫ್ರೆಂಡ್‌ಗಳನ್ನು ಬದಲಿಸುತ್ತಳೇ ಇರುತ್ತಾಳೆ. ಇದನ್ನೆಲ್ಲ ಆಕೆ ಬಹಿರಂಗವಾಗಿಯೂ ಹೇಳಿಕೊಳ್ಳುತ್ತಾಳೆ. ಮಹಾಬಲಪುರಂನಲ್ಲಿ ಆಕೆ ತಂಗದ ಹೋಟೆಲ್‌ಗಳೇ ಇಲ್ಲ. ಬಾಯ್‌ಫ್ರೆಂಡ್ ಅಲ್ಲದವರ ಜೊತೆಗೂ ಹೋಟೆಲ್‌ಗಳಲ್ಲಿ ಆಕೆ ತಂಗಿದ್ದಾಳೆ. ನಟಿಯಾಗಿ ಹಣ ಸಂಪಾದಿಸುವ ಜೊತೆಗೆ ಬೇರೆ ರೂಪದಲ್ಲಿಯೂ ಆಕೆ ಸಂಪಾದನೆ ಮಾಡಿದಳು, ಅದಕ್ಕೆ ಆಕೆಗೆ ಅವಕಾಶ ಕಡಿಮೆ ಆಯಿತು'' ಎಂದಿದ್ದಾರೆ ರಂಗನಾಥನ್.

''ಸೋನಿಯಾ ಕುಡಿತದ ಚಟದಿಂದ ಹಾಳಾದಳು''

''ಸೋನಿಯಾ ಕುಡಿತದ ಚಟದಿಂದ ಹಾಳಾದಳು''

ಸುದೀಪ್ ನಟನೆಯ 'ಚಂದು' ಸಿನಿಮಾ ಮೂಲಕ ನಟನೆ ಆರಂಭಿಸಿ ತಮಿಳಿನ ಖ್ಯಾತ ನಟಿಯಾದ ಸೋನಿಯಾ ಅಗರ್ವಾಲ್ ಬಗ್ಗೆ ಮಾತನಾಡಿ, ''ಸೋನಿಯಾ ಬಹಳ ಒಳ್ಳೆಯ ನಟಿ. ಆದರೆ ಆಕೆಗೆ ಕುಡಿಯುವ ಹಾಗೂ ಸಿಗರೇಟು ಸೇದುವ ಕೆಟ್ಟ ಚಟವಿತ್ತು. ಆಕೆಯನ್ನು ಮದುವೆಯಾದ ನಿರ್ದೇಶಕ ಸೆಲ್ವರಾಗವನ್‌ಗೂ ಇದೆಲ್ಲ ಗೊತ್ತಿತ್ತು. ಆದರೆ ಮದುವೆ ಆದ ಮೇಲೆ ಸರಿಹೋಗುತ್ತಾಳೆ ಎಂದುಕೊಂಡಿದ್ದ ಆದರೆ ಸೋನಿಯಾ ನಾನು ಇರುವುದೇ ಹೀಗೆ ಎಂದಳು. ಹಾಗಾಗಿ ಅವರ ಮದುವೆ ಮುರಿದು ಬಿತ್ತು'' ಎಂದಿದ್ದಾರೆ.

''ಕಮಲ್‌ಹಾಸನ್ ಕಿರುಕುಳಕ್ಕೆ ಇಂಡಸ್ಟ್ರಿ ಬಿಟ್ಟು ಓಡಿ ಹೋದರು''

''ಕಮಲ್‌ಹಾಸನ್ ಕಿರುಕುಳಕ್ಕೆ ಇಂಡಸ್ಟ್ರಿ ಬಿಟ್ಟು ಓಡಿ ಹೋದರು''

''ಕಮಲ್‌ ಹಾಸನ್ ಜೊತೆಗೆ 'ವೀರಮಾಂಡಿ' ಸಿನಿಮಾದಲ್ಲಿ ನಟಿಸಿದ್ದ ಅಭಿರಾಮಿ ಬಹಳ ಒಳ್ಳೆಯ ನಟಿ ಆದರೆ ಕಮಲ್ ಹಾಸನ್ ಕೊಟ್ಟ ಕಾಟದಿಂದ ಆಕೆ ಚಿತ್ರರಂಗ ಬಿಟ್ಟು ಓಡಿ ಹೋದರು. ಕಮಲ್ ಹಾಸನ್ ಕೊಟ್ಟ ಕಿರುಕುಳಕ್ಕೆ ಹಲವು ನಟಿಯರು ಚಿತ್ರರಂಗ ಬಿಟ್ಟು ಓಡಿಹೋಗಿದ್ದಾರೆ'' ಎಂದಿದ್ದಾರೆ ರಂಗನಾಥನ್. ಅಭಿರಾಮಿ ಕನ್ನಡದಲ್ಲಿ 'ರಕ್ತ ಕಣ್ಣೀರು', 'ಲಾಲಿ ಹಾಡು', 'ಶ್ರೀರಾಮ್', 'ಚೌಕ' ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

''ಕಾದಲ್' ಸಂಧ್ಯಾಗೆ ನಟನೆಯೇ ಬರುತ್ತಿರಲಿಲ್ಲ''

''ಕಾದಲ್' ಸಂಧ್ಯಾಗೆ ನಟನೆಯೇ ಬರುತ್ತಿರಲಿಲ್ಲ''

ಕನ್ನಡಕ್ಕೆ 'ಚೆಲುವಿನ ಚಿತ್ತಾರ' ಆಗಿ ರೀಮೇಕ್ ಆದ ತಮಿಳಿನ ಸೂಪರ್ ಹಿಟ್ ಸಿನಿಮಾ 'ಕಾದಲ್'ನಲ್ಲಿ ನಟಿಸಿದ್ದ ನಟಿ ಸಂಧ್ಯಾ ಬಗ್ಗೆ ಮಾತನಾಡಿ, ಆಕೆಯ ಮೊದಲ ಸಿನಿಮಾ ಬಿಟ್ಟರೆ ಇನ್ನಾವ ಸಿನಿಮಾವೂ ಹಿಟ್ ಆಗಲಿಲ್ಲ. ಆಕೆಗೆ ನಟನೆ ಬರುತ್ತಿರಲಿಲ್ಲ. ಮುಖವೂ ಚೆನ್ನಾಗಿರಲಿಲ್ಲ, ಆಕೆಗೆ ಮೈಮಾಟವೂ ಇರಲಿಲ್ಲ. ಆಕೆ ನಟನೆಯೂ ಬರುತ್ತಿರಲಿಲ್ಲ, ಜೊತೆಗೆ ಆಕೆ ದೇಹ ತೂಕ ಸಹ ಇದ್ದಕ್ಕಿದ್ದಂತೆ ಜಾಸ್ತಿಯಾಗಿಬಿಟ್ಟಿತು ಹಾಗಾಗಿ ಆಕೆಗೆ ಚಿತ್ರರಂಗದಲ್ಲಿ ಅವಕಾಶಗಳು ಸಿಗಲಿಲ್ಲ'' ಎಂದಿದ್ದಾರೆ. ಸಂಧ್ಯಾ ಸಹ ಕನ್ನಡದ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಂಧ್ಯಾ ನಟನೆಗೆ ಎರಡು ಫಿಲಂಫೇರ್ ಪ್ರಶಸ್ತಿಗಳು ಧಕ್ಕಿವೆ.

ಹಲವು ನಟಿಯರ ಬಗ್ಗೆ ಮಾತನಾಡಿರುವ ರಂಗನಾಥನ್

ಹಲವು ನಟಿಯರ ಬಗ್ಗೆ ಮಾತನಾಡಿರುವ ರಂಗನಾಥನ್

ಮಂದ್ರ, ಶಿರಿನ್, ಸುನೈನಾ, ಪೂಜಾ ಇನ್ನೂ ಕೆಲವು ನಟಿಯರ ಬಗ್ಗೆ ರಂಗನಾಥನ್ ಮಾತನಾಡಿದ್ದಾರೆ. ವಿಡಿಯೋದ ಕೊನೆಯಲ್ಲಿ ನಾನು ಹೇಳಿರಿವುದೆಲ್ಲ ಸತ್ಯ ಎಂದು ರಂಗನಾಥನ್ ಹೇಳಿದ್ದಾರೆ. ರಂಗನಾಥನ್ ಈ ಮುಂಚೆಯೂ ಹಲವು ವಿಡಿಯೋಗಳನ್ನು ಪ್ರಕಟಿಸಿದ್ದು, ಅವುಗಳಲ್ಲಿ ನಟರ ಕೆಲವು ಖಾಸಗಿ ವಿಷಯಗಳನ್ನು ಸಹ ಮಾತನಾಡಿದ್ದಾರೆ. ಆದರೆ ರಂಗನಾಥನ್ ಮಾಡಿರುವ ಯಾವ ಹೇಳಿಕೆಗೂ ಸಾಕ್ಷ್ಯ ಒದಗಿಸಿಲ್ಲ. ಇದೀಗ ನಟಿ ಒವಿಯಾ, ರಂಗನಾಥನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಭರಿತ ಪೋಸ್ಟ್ ಹಾಕಿದ್ದಾರೆ.

More from Filmibeat

English summary
Actor You Tuber Ranganathan made derogatory comments on many actresses like Oviya, Abhirami, Sonia Agarwal, Sadaf and many.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X