ಕೊನೆಗೂ ಭಾವಿ ಪತಿಯನ್ನು ಪರಿಚಯಿಸಿದ 'ಹುಡುಗರು' ಸಿನಿಮಾ ನಟಿ ಅಭಿನಯ

ತಮಿಳು ನಟಿ ಅಭಿನಯ ಇತ್ತೀಚೆಗೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ನಟ ವಿಶಾಲ್ ಹಾಗೂ ಅಭಿನಯ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಗುಲ್ಲಾಗಿತ್ತು. ಆದರೆ ಅದಕ್ಕೆಲ್ಲಾ ಫುಲ್‌ಸ್ಟಾರ್ ಇಟ್ಟು ತಮ್ಮ ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಹುಡುಗ ಯಾರು? ಎನ್ನುವ ಬಗ್ಗೆ ಸುಳಿವು ನೀಡಿರಲಿಲ್ಲ.

ದೇವಸ್ಥಾನದಲ್ಲಿ ಅಭಿನಯ ಹಾಗೂ ವೇಗೇಶನಾ ಕಾರ್ತಿಕ್ ಮದುವೆ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ಇಬ್ಬರೂ ದೇವಸ್ಥಾನದಲ್ಲಿ ಒಟ್ಟಿಗೆ ಗಂಟೆ ಬಾರಿಸುತ್ತಿರುವ ಫೋಟೊವನ್ನು ಅಭಿನಯ ಹಂಚಿಕೊಂಡಿದ್ದರು. ಅದರಲ್ಲಿ ತಾವು ಕೈ ಹಿಡಿಯಲಿರುವ ಹುಡುಗ ಯಾರು ಎನ್ನುವುದು ಗೊತ್ತಾಗದಂತೆ ಗುಟ್ಟು ಕಾಯ್ದುಕೊಂಡಿದ್ದರು. 20 ದಿನಗಳ ಬಳಿಕ ತಮ್ಮ ಎಂಗೇಜ್ಮೆಂಟ್ ಫೋಟೊಗಳನ್ನು ಅಭಿನಯ ಪೋಸ್ಟ್ ಮಾಡಿದ್ದಾರೆ.

Actress Abhinaya introduces fiance Vegesana Karthik says The easiest yessss

ಮಾರ್ಚ್ 9ರಂದು ನಮ್ಮ ನಿಶ್ಚಿತಾರ್ಥ ನಡೆಯಿತು ಎಂದು ಬರೆದು ಭಾವಿ ಪತಿಯ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು, ಆಪ್ತರು ಲೈಕ್ಸ್ ಕಾಮೆಂಟ್ಸ್ ಮಾಡಿ ಅಭಿನಂದನೆ ತಿಳಿಸುತ್ತಿದ್ದಾರೆ. ಕನ್ನಡದ 'ಹುಡುಗರು' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಸಹೋದರಿ ಪಾತ್ರದಲ್ಲಿ ಅಭಿನಯ ನಟಿಸಿದ್ದರು. ಬಳಿಕ 'ಕಿಚ್ಚು' ಹಾಗೂ 'ಆಟೋ ರಾಮಣ್ಣ' ಎಂಬ ಮತ್ತೆರಡು ಸಿನಿಮಾಗಳಲ್ಲಿ ಆಕೆ ನಟಿಸಿದ್ದರು.

ಮಾತು ಬಾರದ, ಕಿವಿ ಕೇಳದ ವಿಶೇಷ ಚೇತನ ನಟಿ ಅಭಿನಯ. ಆದರೆ ಅದನ್ನೆಲ್ಲಾ ಮೀರಿ ತಮ್ಮ ಅದ್ಭುತ ನಟನೆಯಿಂದ ಮೋಡಿ ಮಾಡಿದ್ದಾರೆ. ತಮಿಳು ಸಿನಿಮಾಗಳಲ್ಲಿ ನಾಯಕಿಯಾಗಿಯೂ ನಟಿಸಿದ್ದಾರೆ. ತಮಿಳು, ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಕೂಡ ಅಭಿನಯ ಮಿಂಚಿದ್ದಾರೆ. ಅಭಿನಯ ಹೈದರಾಬಾದ್ ಮೂಲದ ಉದ್ಯಮಿಯ ಕೈ ಹಿಡಿಯುತ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಆ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಕ್ಕಿದೆ.

ನಟಿ ಅಭಿನಯ ಕೈಹಿಡಿಯಲಿರುವ ಹುಡುಗ ವೇಗೇಶನಾ ಕಾರ್ತಿಕ್‌ಗೆ ಸನ್ನಿ ವರ್ಮಾ ಎಂಬ ಮುದ್ದು ಹೆಸರು ಇದೆ. ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಕಾರ್ತಿಕ್ ಕೆಲಸ ಮಾಡುತ್ತಿದ್ದಾರೆ. ತಮ್ಮ ಬಾಲ್ಯದ ಸ್ನೇಹಿತನ ಜೊತೆ ರಿಲೇಷನ್‌ಶಿಪ್‌ನಲ್ಲಿ ಇರುವುದಾಗಿ ಇತ್ತೀಚೆಗೆ ನಟಿ ಅಭಿನಯ ಹೇಳಿದ್ದರು. ನಮ್ಮಿಬ್ಬರದು 15 ವರ್ಷಗಳ ಲವ್ ಸ್ಟೋರಿ ಎಂದು ಆಕೆ ತಿಳಿಸಿದ್ದರು. ಆ ಬಾಲ್ಯದ ಗೆಳೆಯ ಕಾರ್ತಿಕ್ ಎನ್ನುವುದು ಈಗ ಸ್ಪಷ್ಟವಾಗಿದೆ.

ಚೆನ್ನೈನಲ್ಲಿ ಹುಟ್ಟಿ ಬೆಳೆದ ಅಭಿನಯ ಕೆಲ ತೆಲುಗು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದರು. ಬಳಿಕ 'ನಾಡೋಡಿಗಳ್' ಚಿತ್ರದಲ್ಲಿ ನಾಯಕನ ಸಹೋದರಿ ಪಾತ್ರ ಮಾಡಿ ಗೆದ್ದರು. ಆಕೆಯ ನಟನೆಗೆ ಫಿಲ್ಮ್‌ಫೇರ್ ಪ್ರಶಸ್ತಿ ಕೂಡ ಸಿಕ್ಕಿತ್ತು. ಬಳಿಕ ಆ ಸಿನಿಮಾ ಕನ್ನಡಕ್ಕೆ ರೀಮೆಕ್ ಆಗಿತ್ತು. ಅದೇ ಪುನೀತ್ ರಾಜ್‌ಕುಮಾರ್ ನಟನೆಯ 'ಹುಡುಗರು'. ಈ ಚಿತ್ರದಲ್ಲಿ ಪುನೀತ್ ಸಹೋದರಿ ಪವಿತ್ರಾ ಪಾತ್ರದಲ್ಲಿ ಗಮನ ಸೆಳೆದಿದ್ದರು. ಕನ್ನಡದಲ್ಲಿ ಕೂಡ ಅತ್ಯುತ್ತಮ ಪೋಷಕ ನಟಿ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿತ್ತು.

'ನಾಡೋಡಿಗಳ್' ಸಿನಿಮಾ ತೆಲುಗಿಗೆ ರೀಮೆಕ್ ಆಗಿದ್ದಾಗ ಅಲ್ಲಿ ಕೂಡ ಅಭಿನಯ ಈ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. 'ಧಮ್ಮು', 'ಡಮರುಕಂ', 'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು', 'ವೀರಂ', 'ಪೂಜೈ', 'ಥನಿ ಒರುವನ್', 'ಧ್ರುವ', 'ಸೀತಾ ರಾಮಂ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯ ನಟಿಸಿದ್ದಾರೆ.

ಸನ್ನೆ ಭಾಷೆಯನ್ನು ನಟಿ ಅಭಿನಯ ಕಲಿತ್ತಿದ್ದಾರೆ. ಇದೇ ಭಾಷೆ ಕಲಿತ ಸಹಾಯಕಿಯನ್ನು ತಮ್ಮ ಜೊತೆ ಕರೆದುಕೊಂಡು ಹೋಗುತ್ತಾರೆ. ಸಂದರ್ಶನಗಳಲ್ಲಿ ಅಭಿನಯ ಸನ್ನೆ ಭಾಷೆಯನ್ನು ಹೇಳುವುದನ್ನು ಆಕೆ ಅರ್ಥ ಮಾಡಿಕೊಂಡು ಹೇಳುತ್ತಾರೆ. ಅದೇ ರೀತಿ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಕೂಡ ಆಕೆಯ ಸಹಾಯದಿಂದ ನಟಿ ಅಭಿನಯ ನಟಿಸುತ್ತಾ ಬರ್ತಿದ್ದಾರೆ.

More from Filmibeat

English summary
Tamil Actress Abhinaya shares her engagement photos, recently she gets engaged to Vegesana Karthik
Read more about: actress kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X