ಸೈನ್ಯ ಸೇರಿದ ಸಿನಿಮಾ ನಟಿ ಅಖಿಲಾ ನಾರಾಯಣನ್
ಸಿನಿಮಾ ತಾರೆಯರು ಕೇವಲ ತೆರೆಯ ಮೇಲಷ್ಟೆ ನಾಯಕರಾಗಿರುತ್ತಾರೆ, ನಿಜ ಜೀವನದ ನಾಯಕರು ನಮ್ಮ ರೈತರು, ಸೈನಿಕರು ಎಂದು ಹೇಳುವ ಹಲವು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನು ನೋಡಿರುತ್ತೇವೆ. ಇದು ಬಹುತೇಕ ನಿಜವೂ ಹೌದು.
ಆದರೆ ಇಲ್ಲೊಬ್ಬ ನಟಿ ತಾನು ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ 'ನಾಯಕಿ' ಎಂದು ತೋರಿಸಿದ್ದಾರೆ. ಸಿನಿಮಾದಲ್ಲಿ ನಟಿಸುತ್ತಿದ್ದಾಕೆ ಈಗ ಸೈನ್ಯ ಸೇರಿ ದೇಶದ ಘನತೆ ಹೆಚ್ಚಿಸಿದ್ದಾರೆ.
ತಮಿಳಿನಲ್ಲಿ 'ಕಡಂಪರೈ' ಹೆಸರಿನ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದ ಅಖಿಲಾ ನಾರಾಯಣನ್ ಮೂಲತಃ ಅಮೆರಿಕ ನಾಗರೀಕರಾಗಿದ್ದು ಅಲ್ಲಿಯೇ ಶಿಕ್ಷಣ ಪಡೆದು, ಕಠಿಣ ತರಬೇತಿ ಮುಗಿಸಿ ಅಮೆರಿಕ ಸೈನ್ಯ ಸೇರಿದ್ದಾರೆ.
ಅಮೆರಿಕ ಸೈನ್ಯಕ್ಕೆ ವಕೀಲೆಯಾಗಿ ಅಖಿಲಾ ನಾರಾಯಣನ್ ಸೇವೆ ಸಲ್ಲಿಸಲಿದ್ದು, ಇದಕ್ಕಾಗಿ ಕಠಿಣ ತರಬೇತಿ, ಪರೀಕ್ಷೆಗಳನ್ನು ಅಖಿಲಾ ಮುಗಿಸಿದ್ದಾರೆ. ಬಹು ವರ್ಷಗಳಿಂದ ತಂದೆ-ತಾಯಿಯೊಟ್ಟಿಗೆ ಅಮೆರಿಕದಲ್ಲಿಯೇ ನೆಲೆಸಿರುವ ಅಖಿಲಾ, ಸೈನ್ಯಕ್ಕೆ ಸೇರಬೇಕೆಂಬ ಕನಸನ್ನು ಬಹಳ ವರ್ಷಗಳಿಂದಲೂ ಹೊಂದಿದ್ದರಂತೆ.

ಸೈನ್ಯಕ್ಕೆ ಸೇರಿರುವ ಅಖಿಲಾ, ಅಮೆರಿಕದಲ್ಲಿ ಆನ್‌ಲೈನ್ ಸಂಗೀತ ಶಾಲೆಯೊಂದನ್ನು ಸಹ ನಡೆಸುತ್ತಾರೆ. ಅಖಿಲಾರ ಆನ್‌ಲೈನ್ ಸಂಗೀತ ಶಾಲೆಗೆ 'ನೈಟಿಂಗೇಲ್ ಸ್ಕೂಲ್ ಆಫ್ ಮ್ಯೂಸಿಕ್' ಎಂದು ಹೆಸರು.
ಅಖಿಲಾ ನಟಿಸಿದ್ದ 'ಕಡಂಪರೈ' ತಮಿಳು ಸಿನಿಮಾ ಕಳೆದ ವರ್ಷವಷ್ಟೆ ಬಿಡುಗಡೆ ಆಗಿತ್ತು. ಹಾರರ್ ಸಿನಿಮಾ ಆಗಿದ್ದ 'ಕಡಂಪರೈ' ಅನ್ನು ಅರುಲ್ ನಿರ್ದೇಶನ ಮಾಡಿದ್ದರು. ಸಿನಿಮಾದಲ್ಲಿ ಕಾಶಿಮಾ ರಫಿ ಸಹ ನಟಿಸಿದ್ದರು.


Click it and Unblock the Notifications











