ಅಮಲೇರಿಸುವ ಬೆಡಗಿ ಅಮಲಾ ಪೌಲ್ ಬಿಕಿನಿ ಫೋಟೋ ವೈರಲ್
ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾದಲ್ಲಿ ಮಿಂಚಿದ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಅಮಲಾ ಪೌಲ್ ಸೀಕ್ರೆಟ್ ಆಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಇತ್ತೀಚಿಗೆ ವೈರಲ್ ಆಗಿತ್ತು. ಯಾರಿಗೂ ಹೇಳದೆ ಗುಟ್ಟಾಗಿ ದೂರದ ವಿದೇಶದಲ್ಲಿ ಬಹುಕಾಲದ ಗೆಳೆಯ ಭವ್ನಿಂದರ್ ಸಿಂಗ್ ಜೊತೆ ಹಸೆಮಣೆ ಏರಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
Recommended Video
ಈ ಬಗ್ಗೆ ಇತ್ತೀಚಿಗೆ ಮಾತನಾಡಿದ್ದ ಅಮಲಾ ಪೌಲ್ ಮದುವೆಗೆ ಇನ್ನು ಸಮಯವಿದೆ, ಮದುವೆ ಬಗ್ಗೆ ಗಾಳಿ ಸುದ್ದಿ ಹಬ್ಬಿಸಬೇಡಿ ಎಂದು ಹೇಳುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದರು. ಸಿನಿಮಾಗಳ ಜೊತೆಗೆ ವಿವಾದಗಳ ಮೂಲಕವೂ ಸಾಕಷ್ಟು ಸುದ್ದಿಯಲ್ಲಿರುವ ಅಮಲಾ ಇತ್ತೀಚಿಗೆ ಆಡೈ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.
ಮೋಸ್ಟ್ ಸ್ಟೈಲಿಶ್ ನಟಿ ಅಮಲಾ ಸಾಮಾಜಿಕ ಜಾಲತಾಣದಲ್ಲಿಯೂ ಸಖತ್ ಆಕ್ಟೀವ್ ಆಗಿದ್ದಾರೆ. ಆಗಾಗ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಇತ್ತೀಚಿಗೆ ನಟಿ ಅಮಲಾ ಪೌಲ್ ಬಿಕಿನಿ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅಮಲಾ ಫೋಟೋಗೆ ಅಭಿಮಾನಿಗಳ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ಅಭಿಮಾನಿಗಳು ತರಹೇವಾರಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಫೋಟೋ ಜೊತೆಗೆ ಅಮಲಾ "ಕೆಲವು ಜನರು ತಮ್ಮ ಅಮೂಲ್ಯವಾದ ವರ್ಷವನ್ನು ಶಾಂತಿಯಿಂದ ಬದಲು ಏಕೆ ಪ್ರಯತ್ನಿಸುವುದಿಲ್ಲ" ಎಂದು ಕ್ಯಾಪ್ಷನ್ ಹಾಕಿದ್ದಾರೆ.
28 ವರ್ಷದ ವರ್ಷದ ನಟಿ ಅಮಲಾ ಇತ್ತೀಚಿಗೆ ಹಿಂದಿ ವೆಬ್ ಸೀರಿಸ್ ನಲ್ಲಿ ನಟಿಸಲು ಸಹಿ ಮಾಡಿದ್ದಾರೆ. ಬಾಲಿವುಡ್ ನಟಿ ಪರ್ವಿನ್ ಬಾಬಿ ಜೀವನಾಧಾರಿತ ಸೀರಿಸ್ ಇದಾಗಿದೆ. ಅಮಲಾ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











