Amala Paul: "ಗಂಡ ಬೆಡ್‌ರೂಂನಲ್ಲಿ ಸಿಂಹದಂತಿರಬೇಕು..ಕಟ್ಟುಮಸ್ತಾಗಿರಬೇಕು": 2ನೇ ಮದ್ವೆ ಬಗ್ಗೆ 'ಹೆಬ್ಬುಲಿ' ನಟಿ ಹೇಳಿದ್ದಿಷ್ಟು
ಮಲಯಾಳಿ ನಟಿಯರು ಅಂದ ಹಾಗೂ ಅಭಿನಯ ಎರಡರಲ್ಲೂ ಮೋಡಿ ಮಾಡುತ್ತಾರೆ. ಕೇರಳದ ಸಾಕಷ್ಟು ನಟಿಯರು ತೆಲುಗು, ಕನ್ನಡ, ತಮಿಳು ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಆ ಸಾಲಿಗೆ ನಟಿ ಅಮಲಾ ಪೌಲ್ ಕೂಡ ಸೇರುತ್ತಾರೆ. ಕನ್ನಡದ 'ಹೆಬ್ಬುಲಿ' ಚಿತ್ರದಲ್ಲಿ ಆಕೆ ನಟಿಸಿದ್ದರು. ಬೋಲ್ಡ್ ಪಾತ್ರಗಳಲ್ಲಿ ನಟಿಸಿ ಈ ಎರ್ನಾಕುಲಂ ಬೆಡಗಿ ಗಮನ ಸೆಳೆದಿದ್ದಾರೆ.
2014ರಲ್ಲಿ ತಮಿಳು ನಿರ್ದೇಶಕ ಎ. ಎಲ್ ವಿಜಯ್ ಕೈಹಿಡಿದಿದ್ದ ಅಮಲಾ ಪೌಲ್ 2017ರಲ್ಲಿ ಡಿವೋರ್ಸ್ ಪಡೆದಿದ್ದರು. 2 ವರ್ಷದ ಹಿಂದೆ ಗಾಯಕ ಭವಿಂದರ್ ಸಿಂಗ್ ಜೊತೆ ಅಮಲಾ 2ನೇ ಮದುವೆ ಆಗಿರುವುದಾಗಿ ಹೇಳಲಾಗಿತ್ತು. ಆದರೆ ಈ ಬಗ್ಗೆ ವದಂತಿ ಕೇಳಿಬಂದಿತ್ತು. ಇಬ್ಬರು ಮದುವೆ ಮಾಡಿಕೊಂಡಿರುವಂತೆ ಫೋಟೊಗಳು ವೈರಲ್ ಆಗಿತ್ತು. ಆದರೆ ನಾವಿಬ್ಬರು ಮದುವೆ ಆಗಿಲ್ಲ ಎಂದು ಆಕೆ ಹೇಳಿದ್ದರು. ನನ್ನ ಮಾಜಿ ಪ್ರಿಯಕರ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ ಎಂದು ಆಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ಅಮಲಾ ಪೌಲ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಆಕೆಯ ಮಾಜಿ ಬಾಯ್‌ಫ್ರೆಂಡ್ ಭವಿಂದರ್ ಸಿಂಗ್‌ನ ಪೊಲೀಸರು ಬಂಧಿಸಿದ್ದರು. ಇನ್ನು ಇತ್ತೀಚೆಗೆ ಆಕೆ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಚೆಲುವೆ ಹಾಟ್ ಹಾಟ್ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳ ಜೊತೆ ಮಾತನಾಡುತ್ತಿರುತ್ತಾರೆ. ಇತ್ತೀಚೆಗೆ ತಮ್ಮ 2ನೇ ಮದುವೆ ಮದುವೆ ಬಗ್ಗೆ ಆಕೆ ಹೇಳಿಕೆ ಸಖತ್ ವೈರಲ್ ಆಗ್ತಿದೆ.
ನನಗೆ ಮತ್ತೆ ಮದುವೆ ಆಗಬೇಕು ಎನಿಸುತ್ತಿದೆ. ನನ್ನ ಕೂ ಹಿಡಿಯುವವನಿಗೆ ದಯೆ ಇರಬೇಕು, ಪ್ರೀತಿಸುವವನಾಗಿರಬೇಕು, ಫನ್ನಿಯಾಗಿಯೂ ಇರಬೇಕು. ಅಷ್ಟೇ ಅಲ್ಲ ಆತ ಬೆಡ್‌ರೂಮ್‌ನಲ್ಲಿ ಸಿಂಹದಂತೆ ಇರಬೇಕು. ಬಾಡಿ ಬಿಲ್ಡ್ ಮಾಡಿ ಬಹಳ ಕಟ್ಟುಮಸ್ತಾಗಿರಬೇಕು" ಎಂದು ಅಮಲಾ ಪೌಲ್ ಹೇಳಿದ್ದಾರೆ. ಮಾತು ಮುಂದುವರೆಸಿರುವ ಚೆಲುವೆ "ನನಗೆ ನಮ್ಮ ತಂದೆಯೇ ಆದರ್ಶ. ನನ್ನ ತಂದೆಯಂತೆ ದಯೆ, ಪ್ರೀತಿ, ಫನ್ನಿಯಾಗಿ ಮಾತನಾಡುವವನ್ನು ಮದುವೆ ಆಗುತ್ತೇನೆ. ನಮ್ಮ ಅಪ್ಪನಂಥ ಲಕ್ಷಣಗಳೇ ಅವನಿಗೆ ಇರಬೇಕು. ಆಗ ಅವನು ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾನೆ" ಎಂದು ಹೆಬ್ಬುಲಿ ಚೆಲುವೆ ಹೇಳಿದ್ದಾರೆ.
ಅಮಲಾ ಪೌಲ್ ತಮ್ಮ ಹಿಂದಿನ ಮದುವೆ ಹಾಗೂ ಅಫೇರ್‌ಗಳ ಬಗ್ಗೆ ಕೂಡ ಬೋಲ್ಡ್ ಕಾಮೆಂಟ್ಸ್ ಮಾಡಿದ್ದಾರೆ. ಮದುವೆಗೂ ಮೊದ್ಲು ನಾನು ಡೇಟಿಂಗ್ ಮಾಡಿದ್ದೇನೆ, ಮದುವೆ ನಂತರ ಕೂಡ ಡೇಟಿಂಗ್ ಮಾಡಿದ್ದೀನಿ. ಅದಕ್ಕೆ ನನಗೆ ಮದುವೆ ಅಂದರೆ ದೊಡ್ಡ ಫೀಲಿಂಗ್ ಏನು ಇಲ್ಲ. ಸಿನಿಮಾಗಳ ಬಗ್ಗೆ ಮಾತನಾಡುತ್ತಾ, ನನಗೆ ಲವ್ ಸ್ಟೋರಿ ಸಿನಿಮಾಗಳ ಜೊತೆಗೆ ಥ್ರಿಲ್ಲರ್ ಸಿನಿಮಾಗಳು ನಟಿಸುವ ಆಸೆ ಇದೆ.
'ಅರುಂಧತಿ' ಚಿತ್ರದಲ್ಲಿನ ಅನುಷ್ಕಾ ಶೆಟ್ಟಿ ರೀತಿಯ ಪವರ್‌ಫುಲ್ ಪಾತ್ರದಲ್ಲಿ ನಟಿಸಬೇಕು ಎನ್ನುವುದು ನನ್ನ ಕನಸು" ಎಂದು ಅಮಲಾ ಪೌಲ್ ಹೇಳಿಕೊಂಡಿದ್ದಾರೆ. ಸದ್ಯ 'ಆಡುಜೀವಿತಂ' ಹಾಗೂ 'ಡಿವಿಜ' ಎನ್ನುವ ಸಿನಿಮಾಗಳಲ್ಲಿ ಹೆಬ್ಬುಲಿ ಚೆಲುವೆ ನಟಿಸುತ್ತಿದ್ದಾರೆ. ಧನುಷ್ ನಿರ್ದೇಶಿಸಿ ನಟಿಸುತ್ತಿರುವ ಹೊಸ ಚಿತ್ರಕ್ಕೂ ಆಯ್ಕೆ ಆಗಿದ್ದಾರೆ.
ಅಮಲಾ ಪೌಲ್ ಇತ್ತೀಚೆಗೆ ತಮ್ಮ ಫಾರಿನ್ ವಕೇಷನ್ ಫೋಟೊ, ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಹಂಚಿಕೊಂಡಿದ್ದರು. ಮಣ್ಣಿನಿಂದ ಮಡಿಕೆ, ಪುಟ್ಟ ಪುಟ್ಟ ಗೊಂಬೆಗಳನ್ನು ಮಾಡಿದ್ದ ಫೋಟೊಗಳನ್ನು ಪೋಸ್ಟ್ ಮಾಡಿದ್ದರು. ಇತ್ತೀಚೆಗೆ ಸೀರೆಯಲ್ಲಿ ಕಂಗೊಳಿಸಿದ್ದ ಚೆಲುವೆ ಓಣಂ ಶುಭಾಶಯ ಕೋರಿದ್ದರು.


Click it and Unblock the Notifications











