ಹಳೆ ಬಾಯ್‌ಫ್ರೆಂಡ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟಿ ಅಮಲಾ ಪೌಲ್

ನಟಿ ಅಮಲಾ ಪೌಲ್ ತಮ್ಮ ಹಳೆಯ ಬಾಯ್‌ಫ್ರೆಂಡ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ನಟಿ ಅಮಲಾ ಪೌಲ್ ಇದೇ ವರ್ಷದ ಮಾರ್ಚ್‌ ತಿಂಗಳಲ್ಲಿ ಗಾಯಕ ಭವಿಂದರ್ ಸಿಂಗ್ ಜೊತೆ ಮದುವೆಯಾಗಿದ್ದಾರೆ ಎನ್ನಲಾಗಿತ್ತು. ಮದುವೆಯ ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು, ಈಗ ಅದೇ ಭವಿಂದರ್ ವಿರುದ್ಧ ಅಮಲಾ ಪೌಲ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

'ಭವೀಂದರ್, ನನ್ನ ಅನುಮತಿ ಇಲ್ಲದೆ ನನ್ನ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ನನ್ನೊಂದಿಗೆ ಮದುವೆ ಆಗಿರುವುದಾಗಿ ಸುಳ್ಳು ಹರಡಿದ್ದಾರೆ' ಎಂದು ಅಮಲಾ ಪೌಲ್ ಆರೋಪಿಸಿದ್ದಾರೆ.

ಮದ್ರಾಸ್ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ

ಮದ್ರಾಸ್ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ

ಮದ್ರಾಸ್ ಹೈಕೋರ್ಟ್‌ನಲ್ಲಿ ಭವಿಂದರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಅನುಮತಿಯನ್ನು ಅಮಲಾ ಪೌಲ್ ಕೋರಿದ್ದರು. ಅಂತೆಯೇ ನ್ಯಾಯಮೂರ್ತಿ ಸತೀಶ್ ಕುಮಾರ್, ಭವೀಂದರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಅನುಮತಿ ನೀಡಿದ್ದಾರೆ.

ಮದುವೆ ಚಿತ್ರಗಳು ವೈರಲ್ ಆಗಿದ್ದವು

ಮದುವೆ ಚಿತ್ರಗಳು ವೈರಲ್ ಆಗಿದ್ದವು

ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಅಮಲಾ ಪೌಲ್ ಹಾಗೂ ಭವೀಂದರ್ ಮದುವೆ ಆಗಿರುವ ಚಿತ್ರಗಳು ಹರಿದಾಡಿದ್ದವು. ಇಬ್ಬರೂ, ಗೌಪ್ಯ ಸಮಾರಂಭವೊಂದರಲ್ಲಿ ಮದುವೆ ಆಗಿದ್ದಾರೆ ಎನ್ನಲಾಗಿತ್ತು. ಭವೀಂದರ್ ಸಹ ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಮದುವೆ ಆಗಿರುವುದನ್ನು ನಿರಾಕರಿಸಿದ ಅಮಲಾ ಪೌಲ್

ಮದುವೆ ಆಗಿರುವುದನ್ನು ನಿರಾಕರಿಸಿದ ಅಮಲಾ ಪೌಲ್

ಆದರೆ ಮದುವೆ ಆಗಿರುವುದನ್ನು ನಿರಾಕರಿಸಿರುವ ಅಮಲಾ ಪೌಲ್, ಆ ಚಿತ್ರಗಳನ್ನು ವೃತ್ತಿಯ ಉದ್ದೇಶದಿಂದ ತೆಗೆಯಲಾಗಿತ್ತು, ಆದರೆ ಭವೀಂದರ್ ಆ ಚಿತ್ರಗಳನ್ನು ದುರುದ್ದೇಶಪೂರ್ವಕವಾಗಿ ಹಂಚಿಕೊಂಡಿದ್ದಾರೆ. ಇಬ್ಬರೂ ಮದುವೆ ಆಗಿರುವುದಾಗಿ ಸುಳ್ಳು ಹರಡಿದ್ದಾರೆ ಎಂದು ಅಮಲಾ ಪೌಲ್ ಆರೋಪಿಸಿದ್ದಾರೆ.

Recommended Video

ACT-1978 : ಇದು ನನ್ ಸಿನಿಮಾನ ಅಂತ ನಂಗೆ ಕನ್ಫ್ಯೂಸ್ ಆಯ್ತು | Director Mansore | Filmibeat Kannada
2014 ರಲ್ಲಿ ಅಮಲಾ ಪೌಲ್ ಮೊದಲ ಮದುವೆ

2014 ರಲ್ಲಿ ಅಮಲಾ ಪೌಲ್ ಮೊದಲ ಮದುವೆ

ನಟಿ ಅಮಲಾ ಪೌಲ್ 2014 ರಲ್ಲಿಯೇ ನಿರ್ದೇಶಕ ವಿಜಯ್ ಜೊತೆಗೆ ಮದುವೆಯಾಗಿದ್ದರು, ನಂತರ ಎರಡೇ ವರ್ಷದಲ್ಲಿ ಇಬ್ಬರೂ ವಿಚ್ಛೇಧನ ಪಡೆದುಕೊಂಡರು. 2018 ರಿಂದಲೂ ಭವೀಂದರ್ ಜೊತೆಗೆ ಅಮಲಾ ಪೌಲ್ ಹೆಸರು ಕೇಳಿಬಂದಿತ್ತು.

More from Filmibeat

English summary
Actress Amala Paul filed defamation case against former boyfriend Bhavindar Singh for misusing her private pictures.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X