For Quick Alerts
  ALLOW NOTIFICATIONS  
  For Daily Alerts

  'ಹೆಬ್ಬುಲಿ' ಸಿನಿಮಾ ನಟಿ ಅಮಲಾ ಪೌಲ್ 2ನೇ ಮದುವೆ ಗುಟ್ಟು ರಟ್ಟು?

  |

  'ಹೆಬ್ಬುಲಿ' ಚಿತ್ರದಲ್ಲಿ ನಟಿಸಿದ್ದ ತಮಿಳು ನಟ ಅಮಲಾ ಪೌಲ್ ಇತ್ತೀಚೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಕೆಲ ದಿನಗಳಿಂದ ನನ್ನ ಮಾಜಿ ಬಾಯ್‌ಫ್ರೆಂಡ್ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ದಾಖಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಆಕೆಯ ಮಾಜಿ ಬಾಯ್‌ಫ್ರೆಂಡ್ ಭವಿಂದರ್ ಸಿಂಗ್‌ನ ಪೊಲೀಸರು ಬಂಧಿಸಿದ್ದರು. ಇದೀಗ ಆಟ ಬೇಲ್‌ಗಾಗಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾನೆ. 2017ರಲ್ಲಿ ನನಗೂ ಅಮಲಾ ಪೌಲ್‌ಗೂ ವಿವಾಹವಾಗಿದೆ ಎಂದು ಅದಕ್ಕೆ ಸಾಕ್ಷಾಧಾರಗಳನ್ನು ಸಲ್ಲಿಸಿದ್ದಾರೆ. ಇದರಿಂದ ಅಮಲಾ 2ನೇ ಮದುವೆ ಆಗಿರುವುದು ನಿಜಾನಾ ಎನ್ನುವ ಅನುಮಾನ ಮೂಡಿದೆ.

  ಅಮಲಾ ಪೌಲ್ 2014ರಲ್ಲಿ ತಮಿಳು ಸಿನಿಮಾ ನಿರ್ದೇಶಕ ವಿಜಯ್‌ನ ಪ್ರೀತಿಸಿ ಮದುವೆ ಆಗಿದ್ದರು. ಆದರೆ 3 ವರ್ಷಗಳ ನಂತರ ಕೆಲ ಭಿನ್ನಾಭಿಪ್ರಾಯಗಳಿಂದ ಡೈವೋರ್ಸ್ ತೆಗೆದುಕೊಂಡು ದೂರಾಗಿದ್ದರು. ಆ ನಂತರ ಅಮಲಾ ಪುದುಚೇರಿಗೆ ಹೋಗಿ ವಾಸ್ತವ್ಯ ಹೂಡಿದ್ದರು. ಗಾಯಕ ಭವಿಂದರ್ ಸಿಂಗ್‌ ಪ್ರೀತಿಲಿ ಬಿದ್ದಿರುವುದಾಗಿ ಚರ್ಚೆ ನಡೆದಿತ್ತು. ಇದ್ದಕ್ಕಿಂತ ಇಬ್ಬರು ಮದುವೆ ಮಾಡಿಕೊಂಡಂತೆ ಒಂದಷ್ಟು ಫೋಟೊಗಳು ವೈರಲ್ ಆಗಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ನಟಿ ಅದು ಬರೀ ಫೋಟೋಶೂಟ್ ಅಷ್ಟೆ. ನಾವಿಬ್ಬರು ಮದುವೆ ಆಗಿಲ್ಲ ಎಂದಿದ್ದರು.

  ಖಾಸಗಿ ವಿಡಿಯೋ ಲೀಕ್ ಮಾಡುವ ಬೆದರಿಕೆ: ಬಾಯ್‌ಫ್ರೆಂಡ್ ವಿರುದ್ಧ ಹೆಬ್ಬುಲಿ ನಟಿ ದೂರುಖಾಸಗಿ ವಿಡಿಯೋ ಲೀಕ್ ಮಾಡುವ ಬೆದರಿಕೆ: ಬಾಯ್‌ಫ್ರೆಂಡ್ ವಿರುದ್ಧ ಹೆಬ್ಬುಲಿ ನಟಿ ದೂರು

  ಸದ್ಯ 5 ವರ್ಷಗಳ ಹಿಂದೆಯೇ ನಾವಿಬ್ಬರು ಮದುವೆ ಆಗಿದ್ದೀವಿ ಎಂದು ಭವಿಂದರ್ ಸಿಂಗ್‌ ಕೋರ್ಟ್‌ನಲ್ಲಿ ಸಾಕ್ಷಾಧಾರವನ್ನು ಒದಗಿಸಿದ್ದಾರೆ. ಆತನಿಗೆ ಬೇಲ್ ಕೂಡ ಸಿಕ್ಕಿದೆ. ಹಾಗಾದ್ರೆ, ಭವಿಂದರ್ ಜೊತೆ ಅಮಲಾ ಪೌಲ್ 5 ವರ್ಷಗಳ ಹಿಂದೆಯೇ 2ನೇ ಮದುವೆ ಆಗಿದ್ದು ನಿಜಾನಾ ಅನ್ನುವ ಚರ್ಚೆ ಶುರುವಾಗಿದೆ. ಆಕೆ ಈ ವಿಚಾರವನ್ನು ಇಷ್ಟು ದಿನ ಮುಚ್ಚಿಟ್ಟಿದ್ದು ಯಾಕೆ ಎನ್ನುವುದು ಈಗ ಹಾಟ್ ಟಾಪಿಕ್ ಆಗಿದೆ. ಲೈಂಗಿಕ ಕಿರುಕುಳ ಆರೋಪ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡರೆ ಈ ಬಗ್ಗೆ ಅಮಲಾ ಸ್ಪಷ್ಟನೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.

  2017ರಲ್ಲಿ ಅಮಲಾ ಪೌಲ್ ಹಾಗೂ ಭವಿಂದರ್ ಸಿಂಗ್‌ ಪರಿಚಯವಾಗಿತ್ತು. ಇಬ್ಬರು ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದ್ದರು. ಆದರೆ ಸಿನಿಮಾ ನಿರ್ಮಾಣ ವ್ಯವಹಾರದಲ್ಲಿ ವೈಮನಸ್ಸು ಉಂಟಾಗಿ ಇಬ್ಬರೂ ದೂರಾಗಿದ್ದರು. ಕೆಲವೇ ದಿನಗಳ ಹಿಂದೆ ಮಾಜಿ ಬಾಯ್‌ಫ್ರೆಂಡ್ ವಿರುದ್ಧ ನಟಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು.

  Actress Amala Paul secretly married to Boyfriend Bhavninder Singh

  ಇನ್ನು ಅಮಲಾ ಪೌಲ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಇಬ್ಬರು ಸೇರಿ ಸಿನಿಮಾಗಳನ್ನು ನಿರ್ಮಿಸುತ್ತಿದ್ದರು. ಆದರೆ ಸಂಸ್ಥೆಯ ಡೈರೆಕ್ಟರ್ ಸ್ಥಾನದಿಂದ ತನ್ನನ್ನು ಕಿತ್ತು ಹಾಕಿದ್ದಾನೆ. ಭವಿಂದರ್ ಸ್ನೇಹಿತರು ಕೂಡ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. 2017ರಲ್ಲಿ ಸುದೀಪ್ ನಟನೆಯ ಕನ್ನಡದ 'ಹೆಬ್ಬುಲಿ' ಅಮಲಾ ಪೌಲ್ ಚಿತ್ರದಲ್ಲಿ ನಟಿಸಿದ್ದರು.

  English summary
  Actress Amala Paul secretly married to Boyfriend Bhavninder Singh. Know More.
  Friday, September 9, 2022, 8:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X