For Quick Alerts
  ALLOW NOTIFICATIONS  
  For Daily Alerts

  ನಕಾರಾತ್ಮಕ ಟೀಕೆಗಳಿಂದ ಬೇಸತ್ತು ಟ್ವಿಟ್ಟರ್ ಖಾತೆ ಡಿಲೀಟ್ ಮಾಡಿದ ಖ್ಯಾತ ನಟಿ

  |

  ನಟಿ ಮತ್ತು ರಾಜಕಾರಣಿ ಖುಷ್ಬೂ ಸುಂದರಂ ಟ್ವಿಟ್ಟರ್ ಗೆ ಗುಡ್ ಬೈ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗುತ್ತಿರುವ ನಕಾರಾತ್ಮಕ ಟೀಕೆಗಳ ಹಿನ್ನಲೆ ಖುಷ್ಬೂ ಟ್ವಿಟ್ಟರ್ ಖಾತೆಯನ್ನೆ ಡಿಲಿಟ್ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಸದಾ ಸಕ್ರೀಯರಾಗಿದ್ದ ನಟಿ ಖುಷ್ಬೂ, ಟ್ವಿಟ್ಟರ್ ನಲ್ಲಿ ಸುಮಾರು ಒಂದು ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಹೊಂದಿದ್ದರು.

  ಖುಷ್ಬೂ ಮಹಿಳಾ ನಿಂದನೆ ಮತ್ತು ಇಸ್ಲಾಮ್ ಧ್ವೇಷಿ ಟೀಕೆಗಳಿಗೆ ಗುರಿಯಾಗಿದ್ದರು. ಈ ಹಿನ್ನಲೆಯಲ್ಲಿ ತನ್ನತನವನ್ನು ಕಾಪಾಡಿಕೊಳ್ಳುವ ಅವಶ್ಯಕತೆ ಇದ್ದರಿಂದ ಟ್ವಿಟ್ಟರ್ ನಿಂದ ಹೊರ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.

  ರಾಮ್ ಚರಣ್ ಪತ್ನಿ ಬಳಿಕ ಮೋದಿ ವಿರುದ್ಧ ಖುಷ್ಬೂ ಅಸಮಾಧಾನರಾಮ್ ಚರಣ್ ಪತ್ನಿ ಬಳಿಕ ಮೋದಿ ವಿರುದ್ಧ ಖುಷ್ಬೂ ಅಸಮಾಧಾನ

  ದಿ ನ್ಯೂಸ್ ಮಿನಿಟ್ ವರದಿ ಮಾಡಿದ ಪ್ರಕಾರ, ಖುಷ್ಬೂ "ಟ್ವಿಟ್ಟರ್ ನಲ್ಲಿ ನಕರಾತ್ಮಕ ಟೀಕೆಗಳು ನನ್ನನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದ್ದವು. ನಾನು ನಾನಲ್ಲದ ವ್ಯಕ್ತಿಯಾಗಿ ರೂಪುಗೊಂಡೆ. ಈ ಹಿನ್ನಲೆಯಲ್ಲಿ ನನ್ನ ಕಾಪಾಡಿಕೊಳ್ಳುವ ಉದ್ದೇಶದಿಂದ ನಾನು ಈ ನಿರ್ಧಾರ ಮಾಡಿದ್ದೀನಿ" ಎಂದು ಹೇಳಿಕೊಂಡಿದ್ದಾರೆ.

  ಕಾಂಗ್ರೆಸ್ ವಕ್ತಾರೆಯಾಗಿರುವ ಖುಷ್ಬೂ, ಸಾಕಷ್ಟು ಬಾರಿ ಟ್ರಾಲಿಗರಿಂದ ದಾಳಿಗೆ ಒಳಗಾಗಿದ್ದಾರೆ. ಪ್ರಜಾಪ್ರಬುತ್ವ ಇದೆ ಎನ್ನುವ ಮಾತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಾಯಿಗೆ ಬಂದ ಹಾಗೆ ಮಾತನಾಡುವ ಹಕ್ಕು ಇದೆ ಎಂದಲ್ಲ. ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿರುವ ದೌರ್ಜನ್ಯ ತಡೆಗೆ ನಿಯಮಾವಳಿಗಳ ಅವಶ್ಯಕತೆ ಇದೆ. ನಾನು ಸೆಲೆಬ್ರಿಟಿ, ರಾಜಕಾರಣಿ ಎಂದ ಮಾತ್ರಕ್ಕೆ ಇದನ್ನು ಕೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  ಇನ್ನು ಟ್ವಿಟ್ಟರ್ ನಿಂದ ಹೊರ ಬಂದ ಮಾತ್ರ ಜನರ ಜೊತೆ ಸಂಪರ್ಕದಲ್ಲಿ ಇರಲ್ಲ ಅಂತಲ್ಲ. ಸಂದರ್ಶನಗಳ ಮೂಲಕ ಮತ್ತು ಮಾಧ್ಯಮಗಳ ಮೂಲಕ ಜನರ ಜೊತೆ ಸಂಪರ್ಕದಲ್ಲಿ ಇರುತೇನೆ ಎಂದು ಹೇಳಿದ್ದಾರೆ.

  Read more about: kushboo ಖುಷ್ಬೂ
  English summary
  Actress and politician Kushboo quits twitter over the growing negativity on the social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X