"ಒಬ್ಬ ನನ್ನ ಟೀ ಶರ್ಟ್ ಒಳಗೆ ಕೈಬಿಟ್ಟ, ಏನು ಮಾಡಬೇಕೋ ಗೊತ್ತಾಗಲಿಲ್ಲ"; ಆಂಡ್ರಿಯಾ

ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಮೀಟು ಅಭಿಯಾನದ ಅಡಿ ಸಾಕಷ್ಟು ನಟ-ನಟಿಯರು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವ ಬಿಚ್ಚಿಡುತ್ತಿದ್ದಾರೆ. ಕಾಸ್ಟಿಂಗ್ ಕೌಚ್ ಎನ್ನುವ ಚಿತ್ರರಂಗದ ಕರಾಳ ಮುಖದ ಬಗ್ಗೆ ಮಾತನಾಡುತ್ತಿದ್ದಾರೆ. ಬಣ್ಣದ ಲೋಕದಲ್ಲಿ ಮಾತ್ರವಲ್ಲ ಚಿಕ್ಕಂದಿನಿಂದಲೂ ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಕೆಲವರು ಮೌನ ಮುರಿದಿದ್ದಾರೆ.

ಸಾಕಷ್ಟು ಸಂದರ್ಭಗಳಲ್ಲಿ ಮಹಿಳೆಯರು ಲೈಂಗಿಕ ದೌರ್ಜನ್ಯ ನಡೆದಾಗ ಏನು ಮಾಡಬೇಕೆಂದು ಗೊತ್ತಿಲ್ಲದೇ ಎಲ್ಲವನ್ನು ಮುಚ್ಚಿಟ್ಟು ನೋವು ಅನುಭವಿಸುತ್ತಾರೆ. ಚಿಕ್ಕಂದಿನಲ್ಲೇ ಕೆಲವರಿಗೆ ಇಂತಹ ಕಹಿ ಅನುಭವ ಆಗಿರುತ್ತದೆ. ಆದರೆ ಯಾರಿಗೆ ಹೇಳಬೇಕು? ಹೇಳಿದರೆ ಏನಾಗುತ್ತೋ? ಎಂದು ಹೆದರುವಂತಾಗುತ್ತದೆ. ಇಂತದ್ದೇ ಪರಿಸ್ಥಿತಿಯನ್ನು ಎದುರಿಸಿರುವ ಕೆಲ ನಟಿಯರು ಇದ್ದಾರೆ. ಇತ್ತೀಚೆಗೆ ಆ ಬಗ್ಗೆ ಮಾತನಾಡುತ್ತಿದ್ದಾರೆ.

Actress Andrea Jeremiah recalls her bad experience at a young age

ಬಹುಭಾಷಾ ನಟಿ ಆಂಡ್ರಿಯಾ ಜೆರೆಮಿಯಾಗೂ ಚಿಕ್ಕಂದಿನಲ್ಲಿ ಇಂತಹ ಅನುಭವ ಆಗಿತ್ತಂತೆ. ಸಂದರ್ಶನವೊಂದರಲ್ಲಿ ಆಕೆ ಈ ಬಗ್ಗೆ ಮಾತನಾಡಿದ್ದ ವಿಡಿಯೋ ವೈರಲ್ ಆಗುತ್ತಿದೆ. ಒಮ್ಮೆ ಬಸ್‌ನಲ್ಲಿ ತಂದೆ ಜೊತೆ ಪ್ರಯಾಣಿಸುವಾಗ ಯಾರೋ ನನ್ನ ಟೀಶರ್ಟ್ ಒಳಗೆ ಕೈಬಿಟ್ಟಿದ್ದರು. ಆ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ ಎಂದು ಆಕೆ ಹೇಳಿದ್ದಾರೆ.

"ನಾನು ಒಮ್ಮೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ. ನನ್ನೊಟ್ಟಿಗೆ ನಮ್ಮ ಅಪ್ಪ ಇದ್ದರು. ನಾನು ಒಂದು ಟೀ ಶರ್ಟ್, ಜೀನ್ಸ್ ಪ್ಯಾಂಟ್ ತೊಟ್ಟಿದ್ದೆ. ನನಗೆ ಆಗ 11 ವರ್ಷ ವಯಸ್ಸು ಇರಬಹುದು. ದಿಢೀರನೆ ಒಂದು ಕೈ ನನ್ನ ಹಿಂದೆ ಟೀ ಶರ್ಟ್ ಒಳಗೆ ಇಟ್ಟಂತೆ ಆಯ್ತು. ಗೊತ್ತಿಲ್ಲದೇ ಅಪ್ಪನ ಕೈ ತಾಗಿರಬಹುದು ಎಂದುಕೊಂಡೆ. ಟೀ ಶರ್ಟ್ ಒಳಗೆ ಕೈ ಹೋಗುತ್ತಿದೆ. ನನ್ನ ಪಕ್ಕದಲ್ಲೇ ಅಪ್ಪು ಕುಳಿತಿದ್ದರು. ಅವರ ಎರಡೂ ಕೈ ಮುಂದಿಟ್ಟುಕೊಂಡಿದ್ದಾರೆ. ನಾನು ನಮ್ಮ ಅಪ್ಪನಿಗೆ ಏನೂ ಹೇಳಲಿಲ್ಲ"

"ನನ್ನ ಅಮ್ಮನಿಗೂ ಏನು ಹೇಳಲಿಲ್ಲ. ಸುಮ್ಮನೆ ಮುಂದೆ ಜರುಗಿ ಕುಳಿತುಕೊಂಡೆ. ನಾನು ಯಾಕೆ ಅವತ್ತು ಮಾತನಾಡಲಿಲ್ಲ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ನಾನು ಹೇಳಲಿಲ್ಲ. ನನಗೆ ಗೊತ್ತು. ಆ ಕ್ಷಣದಲ್ಲಿ ಏನೋ ತಪ್ಪು ನಡೆಯುತ್ತಿದೆ ಎಂದು. ಯಾರದ್ದೋ ಕೈ ನನ್ನ ಟೀ ಶರ್ಟ್ ಒಳಗೆ ಯಾಕೆ ಹೋಗುತ್ತದೆ? ಅಪ್ಪ ಯಾರೋ ಹೀಗೆ ಮಾಡ್ತಿದ್ದಾರೆ ಎಂದು ಅವತ್ತು ಹೇಳಿದ್ದರೆ, ಏನಾದರೂ ಮಾಡುತ್ತಿದ್ದರು. ನಾನು ಹೇಳಲಿಲ್ಲ"

Actress Andrea Jeremiah recalls her bad experience at a young age

"ಕಾಲೇಜು ದಿನಗಳಲ್ಲಿ ಕೂಡ ಗುಂಪಲ್ಲಿ ಓಡಾಡುವಾಗ ನನ್ನನ್ನು ತಳ್ಳುವುದು, ಮುಟ್ಟುವುದು ಮಾಡಿದ್ದಾರೆ. ಏನು ಮಾಡುವುದಕ್ಕೆ ಆಗುವುದಿಲ್ಲ. ಕಾಲೇಜಿಗೆ ಹೋಗುವಾಗ ಸಾಕಷ್ಟು ಸ್ನೇಹಿತೆಯರು ಇದೇ ರೀತಿ ದೌರ್ಜನ್ಯ ಎದುರಿಸಿದ ಬಂದು ಅಳುತ್ತಿದ್ದರು. ಮರುದಿನ ಅದೇ ಬಸ್‌ನಲ್ಲಿ ಪ್ರಯಾಣಿಸಬೇಕಿತ್ತು. ಬೇರೆ ಮಾರ್ಗ ಇರಲಿಲ್ಲ. ಇಂತಹ ಸಾಕಷ್ಟು ನೋವನ್ನು ಹೆಣ್ಣುಮಕ್ಕಳು ಅನುಭವಿಸುತ್ತಾರೆ" ಎಂದು ಆಂಡ್ರಿಯಾ ಹೇಳಿದ್ದಾರೆ.

ಚೆನ್ನೈಯಲ್ಲಿ ಹುಟ್ಟಿ ಬೆಳೆದ ಆಂಡ್ರಿಯಾ ಒಳ್ಳೆ ಗಾಯಕಿ ಕೂಡ ಹೌದು. ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ನಟಿಸಲು ಆರಂಭಿಸಿದ ಆಕೆ 'ಕಂದ ನಾಲ್ ಮುದಲ್' ಎನ್ನುವ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದರು. 2005ರ ಬಳಿಕ ನಿಧಾನವಾಗಿ ಸಿನಿಮಾಗಳಲ್ಲಿ ಬಣ್ಣ ಹಚ್ಚಲು ಆರಂಭಿಸಿದರು. ಬಳಿಕ ತೆಲುಗು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ಮಿಂಚಿದರು.

ಆಂಡ್ರಿಯಾ ಕನ್ನಡ ಚಿತ್ರದಲ್ಲಿ ನಟಿಸದೇ ಇದ್ದರೂ 'ಉಲ್ಲಾಸ ಉತ್ಸಾಹ' ಚಿತ್ರದ ಹಾಡೊಂದನ್ನು ಹಾಡಿದ್ದರು. ಗಣೇಶ್ ನಟನೆಯ ಈ ಚಿತ್ರಕ್ಕೆ ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದರು. "ಜೀವನದಲ್ಲಿ ನಾನು ಮದುವೆ ಮಾಡಿಕೊಳ್ಳುವುದೇ ಇಲ್ಲ" ಎಂದು ಹೇಳಿ ಇತ್ತೀಚೆಗೆ ಆಂಡ್ರಿಯಾ ಸುದ್ದಿ ಆಗಿದ್ದರು.

More from Filmibeat

English summary
Actress Andrea Jeremiah opens up about her unpleasant experience in childwood;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X