ಖ್ಯಾತ ನಟ ವಿಜಯ್ ಸೇತುಪತಿಗೆ ನಾಯಕಿಯಾದ ಕನ್ನಡದ ಸುಂದರಿ
ತಮಿಳು ಚಿತ್ರರಂಗದ ಖ್ಯಾತ ನಟ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು ಮತ್ತು ತೆಲುಗು ಜೊತೆಗೆ ಹಿಂದಿ ಭಾಷೆಯಲ್ಲಿಯೂ ಅಭಿನಯಿಸುತ್ತಿರುವ ಸೇತುಪತಿ ದಕ್ಷಿಣ ಭಾರತದ ಬಹುಬೇಡಿಕೆಯ ನಟರಲ್ಲಿ ಒಬ್ಬರು. ಸೇತುಪತಿ ಸದ್ಯ ದಳಪತಿ ವಿಜಯ್ ನಾಯಕನಾಗಿ ನಟಿಸುತ್ತಿರುವ ಮಾಸ್ಟರ್ ಸಿನಿಮಾದ ರಿಲೀಸ್ ಗೆ ಕಾಯುತ್ತಿದ್ದಾರೆ.
Recommended Video
ಮಾಸ್ಟರ್ ಸಿನಿಮಾದಲ್ಲಿ ವಿಜಯ್ ಸೇತುಪತಿ ಮತ್ತು ದಳಪತಿ ವಿಜಯ್ ನಡುವೆ ಕಾಳಗ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ನಡುವೆ ಸೇತುಪತಿ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಕೈತುಂಬ ಸಿನಿಮಾಗಳಿದ್ದರೂ ವಿಜಯ್ ಮತ್ತಷ್ಟು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹಾಗಾದರೆ ಯಾವ ಸಿನಿಮಾ..ನಾಯಕಿ ಯಾರು? ಮುಂದೆ ಓದಿ...

ವಿಜಯ್ ಸೇತುಪತಿಗೆ ನಾಯಕಿಯಾದ ಅನುಷ್ಕಾ
ನಿರ್ದೇಶಕ ಎಲ್ ವಿಜಯ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಸೇತುಪತಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ ವಿಜಯ್ ಸತುಪತಿಗೆ ಖ್ಯಾತ ನಟಿ ಅನುಷ್ಕಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಮೊದಲ ಬಾರಿಗೆ ವಿಜಯ್ ಸೇತುಪತಿಗೆ ನಟಿ ಅನುಷ್ಕಾ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಿರ್ದೇಶಕ ವಿಜಯ್ ಜೊತೆ ಅನುಷ್ಕಾ 3ನೇ ಸಿನಿಮಾ
ಇಬ್ಬರು ಅದ್ಭುತ ಕಲಾವಿದರನ್ನು ಒಟ್ಟಿಗೆ ತೆರೆಮೇಲೆ ನೋಡಲು ಸಿನಿಪ್ರಿಯರು ಕಾತರರಾಗಿದ್ದಾರೆ. ಅಂದ್ಹಾಗೆ ನಟಿ ಅನುಷ್ಕಾ ಎ.ಎಲ್ ವಿಜಯ್ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ದೇವಿತಿರುಮಗಲ್ ಮತ್ತು ತಾಂಡವಂ ಸಿನಿಮಾದಲ್ಲಿ ನಿರ್ದೇಶಕ ವಿಜಯೆ ಜೊತೆ ಕೆಲಸ ಮಾಡಿದ್ದಾರೆ. ಈಗ ಮೂರನೇ ಸಿನಿಮಾ ಮೂಲಕ ಇಬ್ಬರು ಒಂದಾಗಿದ್ದಾರೆ. ಆದರೆ ಸೇತುಪತಿ ಮೊದಲ ಬಾರಿಗೆ ಅನುಷ್ಕಾ ಮತ್ತು ನಿರ್ದೇಶಕ ವಿಜಯ್ ಜೊತೆ ಕೆಲಸ ಮಾಡುತ್ತಿದ್ದಾರೆ.

'ನಿಶಬ್ದಂ' ನಂತರ ಅಧಿಕೃತವಾಗಿ ಸಿನಿಮಾ ಅನೌನ್ಸ್ ಮಾಡದ ಅನುಷ್ಕಾ
ಅನುಷ್ಕಾ ಕೊನೆಯದಾಗಿ 'ಬಾಗಮತಿ' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆನಂತರ ನಿಶಬ್ದಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೆ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ವೈರಸ್ ಹಾವಳಿಯ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಈ ಸಿನಿಮಾ ನಂತರ ಅನುಷ್ಕಾ ಅಧಿಕೃತವಾಗಿ ಯಾವ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ.

ವಿಜಯ್ ಸೇತುಪತಿ ಬಳಿ ಇರುವ ಸಿನಿಮಾಗಳು
ವಿಜಯ್ ಸೇತುಪತಿ ಬಳಿ ಕೈತುಂಬ ಸಿನಿಮಾಗಳಿವೆ. 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ. ತಮಿಳು ಮತ್ತು ತೆಲುಗು ಸಿನಿಮಾಗಳ ಜೊತೆಗೆ ಹಿಂದಿಯಲ್ಲಿ ಆಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ. ಬಹುನಿರೀಕ್ಷೆಯ ಮಾಸ್ಟರ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದಾರೆ.


Click it and Unblock the Notifications











