ಚೆನ್ನಾಗಿದ್ದೀವಿ ಅಂತ ಫೋಟೊ ಹಾಕ್ತಾ ಕೂರೋಕ್ಕಾಗಲ್ಲ; ಮೌನ ಮುರಿದ ಭಾವನಾ
ಮಲಯಾಳಂ ನಟಿ ಭಾವನಾ ಮೆನೆನ್ ಕೆಲ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಕನ್ನಡ ನಿರ್ಮಾಪಕ ನವೀನ್ ಅವರನ್ನು ಕೈಹಿಡಿದು ಬೆಂಗಳೂರಿನಲ್ಲೇ ನೆಲೆಸಿದ್ದಾರೆ. 7 ವರ್ಷಗಳ ಹಿಂದೆ ಕೊಚ್ಚಿಯ ತ್ರಿಶೂರ್‌ನಲ್ಲಿರುವ ಭಾವನಾ ಸ್ವಗೃಹದಲ್ಲಿ ಇಬ್ಬರ ಮದುವೆ ಸರಳವಾಗಿ ನೆರವೇರಿತ್ತು.
ಮದುವೆ ಬಳಿಕ ಕೂಡ ಭಾವನಾ ಮೆನನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಜಾಕಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಭಾವನಾ ಮುಂದೆ ಜಾಕಿ ಭಾವನಾ ಅಂತ್ಲೇ ಕನ್ನಡ ಸಿನಿರಸಿಕರಿಗೆ ಹತ್ತಿರವಾಗಿಬಿಟ್ಟರು. ಸದ್ಯ ಕನ್ನಡದ 'ಪಿಂಕ್ ನೋಟ್' ಹಾಗೂ 'ಉತ್ತರಕಾಂಡ' ಸಿನಿಮಾಗಳಲ್ಲಿ ಭಾವನಾ ಬಣ್ಣ ಹಚ್ಚಿದ್ದಾರೆ.

ಕನ್ನಡದಲ್ಲಿ ಭಾವನಾ 'ರೋಮಿಯೋ' ಎಂಬ ಚಿತ್ರದಲ್ಲಿ ಗಣೇಶ್ ಜೋಡಿಯಾಗಿ ನಟಿಸಿದ್ದರು. ಆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು ಉದ್ಯಮಿ ನವೀನ್. ಸಿನಿಮಾ ಚಿತ್ರೀಕರಣದ ಸಮಯದಲ್ಲೇ ಶುರುವಾಗಿದ್ದ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು. ಬಳಿಕ ಇಬ್ಬರೂ ಪೋಷಕರನ್ನು ಒಪ್ಪಿಸಿ ಹಸೆಮಣೆ ಏರಿದ್ದರು. ಸೆಲೆಬ್ರೆಟಿಗಳ ಡಿವೋರ್ಸ್ ಬಗ್ಗೆ ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ವದಂತಿ ಹರಿದಾಡುತ್ತದೆ.
ಭಾವನಾ- ನವೀನ್ ದೂರಾಗುತ್ತಾರೆ ಎನ್ನುವ ಅರ್ಥದಲ್ಲಿ ಕೂಡ ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ಸ್ ಹರಿದಾಡಿತ್ತು. ಇಂತಹ ವದಂತಿಗಳ ಬಗ್ಗೆ ನಟಿ ಭಾವನಾ ಮೆನನ್ ಇದೀಗ ಪ್ರತಿಕ್ರಿಯಿಸಿದ್ದಾರೆ. ತಮಿಳಿನ 'ಗಲಾಟ ತಮಿಳ್' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಭಾವನಾ ಮಾತನಾಡಿದ್ದಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಅಂತರಾಳ ತೆರೆದಿಟ್ಟಿದ್ದಾರೆ.
ಡಿವೋರ್ಸ್ ವದಂತಿಗಳು ಕೇಳಿ ಬಂದಾಗ ಅದನ್ನು ಹೇಗೆ ಸ್ವೀಕರಿಸುತ್ತೀರಾ? ಎನ್ನುವ ಪ್ರಶ್ನೆಗೆ ಭಾವನಾ ಉತ್ತರಿಸಿದ್ದಾರೆ. "ದಿನಾ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಾಕುವಂತಹ ಜೋಡಿ ನಾವಲ್ಲ. ನೀನು ನನ್ನ ಪ್ರೀತಿ, ಮುದ್ದು ಅಂತೆಲ್ಲಾ ಕ್ಯಾಪ್ಷನ್ ಕೊಡಲ್ಲ. ಬಹಳ ವಿಚಿತ್ರವಾಗಿರುತ್ತದೆ. ಅಪ್ಪಿ ತಪ್ಪಿ ನಾನು ಯಾವುದಾದರೂ ಫೋಟೊ ಹಾಕಿದರೆ ಅಯ್ಯೋ ಇದು ಹಳೇ ಫೋಟೊ, ಈಗ ಇಬ್ಬರ ನಡುವೆ ಏನೋ ಪ್ರಾಬ್ಲಂ ಇದೆ ಎಂತೆಲ್ಲಾ ಕಾಮೆಂಟ್ ಮಾಡ್ತಾರೆ. ನಾನೇ ರಿಪ್ಲೇ ಮಾಡಿ, ಅಯ್ಯೋ ನಾವು ದಿನ ಫೋಟೊ ತಗೋಳ್ಳಲ್ಲ ಎನ್ನುತ್ತೇನೆ"

"ತಾಯಿ, ಅಣ್ಣ, ತಮ್ಮ ಹೀಗೆ ಎಲ್ಲರ ಜೊತೆ ದಿನಾ ಫೋಟೊ ತೆಗೆದುಕೊಂಡು ಕೂರೋಕೆ ಆಗುತ್ತಾ? ಎಲ್ಲವನ್ನು ಸೋಶಿಯಲ್ ಮೀಡಿಯಾ, ಅಥವಾ ಪಬ್ಲಿಕ್‌ನಲ್ಲಿ ಹೇಳಿಕೊಳ್ಳುವಂತಹ ವ್ಯಕ್ತಿ ನಾನಲ್ಲ. ಆ ರೀತಿ ಕಾಮೆಂಟ್ ಮಾಡುವುದು ಅವರ ಸ್ವಾತಂತ್ರ್ಯ, ಏನು ಮಾಡೋಕೆ ಆಗೊಲ್ಲ. ನಾನು, ನವೀನ್ ಚೆನ್ನಾಗಿದ್ದೀವಿ. ಸದ್ಯಕ್ಕೆ ಎಲ್ಲವೂ ಚೆನ್ನಾಗಿ ನಡೀತಿದೆ. ನಾವು ಚೆನ್ನಾಗಿದ್ದೀವಿ ಎಂದು ಅದನ್ನು ಸಾಬೀತುಪಡಿಸೋಕೆ ಫೋಟೊ ಹಾಕುತ್ತಾ ಕೂರುವುದಕ್ಕೆ ಆಗಲ್ಲ" ಎಂದು ಭಾವನಾ ಸ್ಪಷ್ಟಪಡಿಸಿದ್ದಾರೆ.
ಜೀವನದಲ್ಲಿ ಯಾರನ್ನು ಸುಲಭವಾಗಿ ನಂಬಬಾರದು ಎಂದು ನಾನು ಕಲಿತ್ತಿದ್ದೇನೆ ಜೀವನವೇ ಅಂತಹ ಪಾಠಗಳನ್ನು ಕಲಿಸಿದೆ. ಜೀವನದಲ್ಲಿ ನಡೆ ಕಹಿ ಘಟನೆಗಳಿಂದ ಪಾಠ ಕಲಿಯಬೇಕು, ಈ ವಿಚಾರದಲ್ಲಿ ಬೇರೆಯವರಿಗೆ ಸಲಹೆ ಕೊಡುವುದಕ್ಕೆ ಸಾಧ್ಯವಿಲ್ಲ. ಅವರವರ ಜೀವನ ಬೇರೆ ಬೇರೆ ರೀತಿ ಇರುತ್ತದೆ. ಅದಕ್ಕೆ ತಕ್ಕಂತೆ ಅವರು ಅದನ್ನು ನಿಭಾಯಿಸಬೇಕು ಎಂದು ಭಾವನಾ ತಿಳಿಸಿದ್ದಾರೆ.
16 ವರ್ಷಗಳಿಂದ ನಾನು ತಮಿಳು ಚಿತ್ರದಲ್ಲಿ ನಟಿಸಿಲ್ಲ. ಅದ್ಯಾಕೋ ಸಾಧ್ಯವಾಗಲಿಲ್ಲ. ಒಳ್ಳೆ ಅವಕಾಶ ಸಿಕ್ಕರೆ ನಟಿಸುತ್ತೇನೆ. ಕಾರಣಾಂತರಗಳಿಂದ ಕೆಲ ಸಿನಿಮಾ ಅವಕಾಶಗಳ ಕೈತಪ್ಪಿವೆ. ತಮಿಳಿನಲ್ಲಿ ಜಯಂ ರವಿ ನನ್ನ ಫೇವರಿಟ್ ಕೋ ಸ್ಟಾರ್ ಎಂದು ಭಾವನಾ ತಿಳಿಸಿದ್ದಾರೆ. ಕಾಲಿವುಡ್‌ನಲ್ಲಿ ಸಾಕಷ್ಟು ಸ್ನೇಹಿತರಿದ್ದಾರೆ. ಆದರೆ ನಾನು ಸ್ವಪ್ಲ ಸೋಂಬೇರಿ ಯಾರೊಟ್ಟಿಗೂ ಹೆಚ್ಚು ಸಂಪರ್ಕದಲ್ಲಿ ಇರಲ್ಲ ಎಂದು ಭಾವನಾ ವಿವರಿಸಿದ್ದಾರೆ.


Click it and Unblock the Notifications











