ದಕ್ಷಿಣದ ಸ್ಟಾರ್ ನಟರ ಬಗ್ಗೆ ಮಾತನಾಡಿ ನಟಿ ಜ್ಯೋತಿಕಾ ಎಡವಟ್ಟು; ಫುಲ್ ಟ್ರೋಲ್
ತಮಿಳು ನಟಿ, ನಿರ್ಮಾಪಕಿ ಜ್ಯೋತಿಕಾ ಮತ್ತೆ ಟ್ರೋಲ್ ಆಗುತ್ತಿದ್ದಾರೆ. ಮದುವೆ ಬಳಿಕ ಸಿನಿಮಾಗಳಿಂದ ಕೊಂಚ ದೂರಾಗಿದ್ದ ಆಕೆ ಈಗ ಮತ್ತೆ ಬ್ಯುಸಿಯಾಗಿದ್ದಾರೆ. ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಕಳೆದ ವರ್ಷ ಆಕೆ ನೀಡಿದ್ದ ಹೇಳಿಕೆ ಟೀಕೆಗೆ ಗುರಿಯಾಗಿತ್ತು.
ದಕ್ಷಿಣದ ಸ್ಟಾರ್ ನಟರ ಬಗ್ಗೆ ಜ್ಯೋತಿಕಾ ಹೇಳಿಕೆ ಚರ್ಚೆ ಹುಟ್ಟುಹಾಕಿತ್ತು. ವೈರಲ್ ಸಿನಿಮಾ ಸೋಶಿಯಲ್ ಮೀಡಿಯಾದ ತರಹೇವಾರಿ ಕಾಮೆಂಟ್ಸ್ ಬಂದಿದ್ದವು. ಕೆಲವರು ಆಕೆಯ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಬಹುತೇಕರು ಅದನ್ನು ವಿರೋಧಿಸಿದ್ದರು. ಸುಖಾಸುಮ್ಮನೆ ಆರೋಪ ಮಾಡಬೇಡಿ ಎಂದಿದ್ದರು. ಅದೇ ವೀಡಿಯೋ ಮತ್ತೆ ವೈರಲ್ ಆಗಿದ್ದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

'ಶೈಥಾನ್' ಸಿನಿಮಾ ಪ್ರಚಾರದ ಭಾಗವಾಗಿ ಮಾತನಾಡಿದ್ದ ಜ್ಯೋತಿಕಾ "ನಾನು ದಕ್ಷಿಣದ ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದೇನೆ. ಆದರೆ ದಕ್ಷಿಣದ ಚಿತ್ರರಂಗದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲ್ಲ. ಸಿನಿಮಾ ಪೋಸ್ಟರ್‌ಗಳಲ್ಲಿ ಕೂಡ ಅದು ಎದ್ದು ಕಾಣುತ್ತದೆ. ಆದರೆ ಮಮ್ಮುಟ್ಟಿ ಮತ್ತು ಅಜಯ್ ದೇವಗನ್ ಸಿನಿಮಾಗಳಲ್ಲಿ ಆ ರೀತಿ ಮಾಡಲ್ಲ. ಮಹಿಳೆಯರಿಗೂ ಹೆಚ್ಚಿನ ಅವಕಾಶ ಸಿಗುತ್ತದೆ" ಎಂದು ಜ್ಯೋತಿಕಾ ಮೆಚ್ಚಿಕೊಂಡಿದ್ದರು.
ತಮ್ಮ ಸಹ ಕಲಾವಿದರನ್ನು ಜ್ಯೋತಿಕಾ ಹಾಡಿ ಹೊಗಳುವುದು ತಪ್ಪಲ್ಲ. ಆದರೆ ಅದಕ್ಕಾಗಿ ಬೇರೆ ನಟರೊಂದಿಗೆ ಹೋಲಿಸಿ ಟೀಕಿಸುವುದು ಸರಿಯಲ್ಲ. ಸಾಕಷ್ಟು ಸಿನಿಮಾಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ. ಬೇಕಿದ್ದರೆ ಈ ಸಿನಿಮಾ ಪೋಸ್ಟರ್‌ಗಳನ್ನು ನೋಡಿ ಎಂದು ಜ್ಯೋತಿಕಾ ಅಭಿನಯದ ಸಿನಿಮಾಗಳ ಪೋಸ್ಟರ್‌ಗಳನ್ನು ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದಾರೆ.

ನೀವು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೀರಾ. ತಮಿಳು ನಟ ಸೂರ್ಯ ಅವರನ್ನು ಮದುವೆ ಆಗಿದ್ದೀರಾ. ಇಷ್ಟೆಲ್ಲಾ ಸಾಲದೇ? ಸುಮ್ಮನೆ ಬೇರೆ ನಟರ ಮೇಲೆ ಆರೋಪ ಯಾಕೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ನಟಿ ಜ್ಯೋತಿಕಾ ಈಗ ಬಾಲಿವುಡ್ ಸಿನಿಮಾಗಳ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
ಮುಂಬೈನಲ್ಲಿ ಹುಟ್ಟಿ ಬೆಳೆದ ಜ್ಯೋತಿಕಾ ಬಳಿಕ ಸೂರ್ಯ ಅವರನ್ನು ಮದುವೆ ಆಗಿ ಚೆನ್ನೈನಲ್ಲಿ ಬಂದು ನೆಲೆಸಿದ್ದರು. ಆದರೆ ಕಳೆದ ಎರಡ್ಮೂರು ವರ್ಷಗಳಿಂದ ದಂಪತಿ ಮುಂಬೈನಲ್ಲಿ ನೆಲೆಸಿದ್ದಾರೆ. ಅಲ್ಲಿ ಬಂಗಲೆ ಖರೀದಿಸಿ ಮಕ್ಕಳ ಜೊತೆಗೆ ಸೂರ್ಯ- ಜ್ಯೋತಿಕಾ ವಾಸ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಏನು ಎನ್ನುವುದನ್ನು ಕೂಡ ಹಿಂದೆ ನಟ ಸೂರ್ಯ ಹೇಳಿದ್ದಾರೆ. ಸೂರ್ಯ ಅಭಿಮಾನಿಗಳು ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
2002ರಲ್ಲಿ ಉಪೇಂದ್ರ ನಟಿಸಿದ 'ನಾಗರಹಾವು' ಸಿನಿಮಾ ಮೂಲಕ ನಟಿ ಜ್ಯೋತಿಕಾ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಆಕೆ ನಟಿಸಿದ್ದ '123' ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬಂದಿತ್ತು. ಇದೇ ವರ್ಷ 'ಡಬ್ಬಾ ಕಾರ್ಟಲ್' ಎಂಬ ಹಿಂದಿ ವೆಬ್ ಸೀರಿಸ್‌ನಲ್ಲಿ ಜ್ಯೋತಿಕಾ ನಟಿಸಿದ್ದರು. ಇನ್ನು ಹೆಸರಿಡದ ಮತ್ತೊಂದು ಚಿತ್ರದಲ್ಲಿ ಆಕೆ ಬಣ್ಣ ಹಚ್ಚಿದ್ದಾರೆ. ನೇರವಾಗಿ ಪ್ರೈಂ ವೀಡಿಯೋಗೆ ಈ ಸಿನಿಮಾ ಬರಲಿದೆ.
'ವಾಲಿ', 'ರಿದಂ', 'ಖುಷಿ', 'ಠಾಗೂರ್', 'ಮಾಸ್', 'ಪೂವೆಲ್ಲಾಂ ವುನ್ ವಾಸಂ', 'ಚಂದ್ರಮುಖಿ', 'ಕಾಕಾ ಕಾಕಾ', 'ವೇಟೆಯಾಡು ವೆಲಿಯಾಡು', '36 ವಯದನಿಲೈ', 'ರಾಚ್ಚಾಸಿ' ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ಜ್ಯೋತಿಕಾ ನಟಿಸಿದ್ದಾರೆ.


Click it and Unblock the Notifications











