ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಸೂರ್ಯ ಪತ್ನಿ ಜ್ಯೋತಿಕಾ? ಈ ಬಗ್ಗೆ ನಟಿ ಹೇಳಿದ್ದೇನು?
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಜ್ಯೋತಿಕಾ ದೀರ್ಘಕಾಲದ ಬ್ರೇಕ್ ನ ಬಳಿಕ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ನಟ ಸೂರ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟನಂತರ ಜ್ಯೋತಿಕಾ ಬಣ್ಣದ ಲೋಕದಿಂದ ದೂರಿದಿದ್ದರು. ಪತಿ, ಮಕ್ಕಳು ಅಂತ ಕುಟುಂಬದ ಕಡೆ ಬ್ಯುಸಿಯಾಗಿದ್ದ ಜ್ಯೋತಿಕಾ 2015ರಲ್ಲಿ ಮತ್ತೆ ಬಣ್ಣಹಚ್ಚುವ ಮೂಲಕ ಚಿತ್ರರಂಗಕ್ಕೆ ವಾಪಸ್ ಆಗಿದ್ದಾರೆ.
Recommended Video
36 ವಯಧಿನಿಲೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ಜ್ಯೋತಿಕಾ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಪೊನ್ಮಗಲ್ ವಂಧಲ್ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಎಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಜ್ಯೋತಿಕಾ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ ಎನ್ನುವ ಅನುಮಾನ ಎಲ್ಲರನ್ನೂ ಕಾಡುತ್ತಿತ್ತು. ಆದರೀಗ ಈ ಬಗ್ಗೆ ಜ್ಯೋತಿಕಾ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ..

ಸಹೋದರಿ ನಗ್ಮಾ ಹಾಗೆ ರಾಜಕೀಯಕ್ಕೆ ಬರ್ತಾರಾ ಜ್ಯೋತಿಕಾ?
ಜ್ಯೋತಿಕಾ ಸಹೋದರಿ ಮತ್ತು ಖ್ಯಾತ ನಟಿ ನಗ್ಮಾ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಸಿನಿಮಾ ನಂತರ ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ನಗ್ಮಾ ನಂತರ ಸಿನಿಮಾರಂಗದಿಂದ ದೂರ ಸರಿದಿದ್ದಾರೆ. ನಗ್ಮಾ ಹಾಗೆಯೆ ನಟಿ ಜ್ಯೋತಿಕಾ ಸಹ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಎನ್ನುವ ಅನುಮಾನ ಎಲ್ಲರನ್ನೂ ಕಾಡುತ್ತಿದೆ.

ರಾಜಕೀಯ ಎಂಟ್ರಿ ತಳ್ಳಿ ಹಾಕಿದ ಜ್ಯೋತಿಕಾ
ರಾಜಕೀಯ ಎಂಟ್ರಿ ಬಗ್ಗೆ ನಟಿ ಜ್ಯೋತಿಕಾ ಪ್ರತಿಕ್ರಿಯೆ ನೀಡಿದ್ದಾರೆ. ವೆಬ್ ಪೋರ್ಟಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಜ್ಯೋತಿಕಾ ರಾಜಕೀಯ ಎಂಟ್ರಿಯನ್ನು ತಳ್ಳಿಹಾಕಿದ್ದಾರೆ. ರಾಜಕೀಯಕ್ಕೆ ಎಂಟ್ರಿ ಕೊಟ್ಟು ಜನ ಸೇವೆ ಮಾಡಬೇಕೆಂದೇನು ಇಲ್ಲ. ಕಲಾವಿದರಾಗಿಯೂ ಮಾಡಬಹುದೆಂದು ಜ್ಯೋತಿಕಾ ಹೇಳಿದ್ದಾರೆ.
ತಮಿಳು ಚಿತ್ರರಂಗ: ಸೂರ್ಯ ಒಂದು ದಾರಿ, ಧನುಶ್-ವಿಜಯ್ ಮತ್ತೊಂದು ದಾರಿ

ಜ್ಯೋತಿಕಾ ಪ್ರತಿಕ್ರಿಯೆ
"ರಾಜಕೀಯದಲ್ಲಿಲ್ಲದ್ದಿದ್ದರೂ ಸಹ ನೀವು ಜನಸಾಮಾನ್ಯರಿಗೆ ಹೆಚ್ಚಿನ ಕೆಲಸ ಮಾಡಬಹುದು ಎಂಬುದು ನನ್ನ ಅಭಿಪ್ರಾಯ. ಪ್ರತಿಯೊಬ್ಬ ನಟನಿಗೂ ಸಾಮಾಜಿಕ ಜವಾಬ್ದಾರಿ ಇದೆ. ಯಾವಾಗಲು ಸರ್ಕಾರವನ್ನು ಅವಲಂಬಿಸಬಾರದು. ನಗರವನ್ನು ಸ್ವಚ್ಛಗೊಳಿಸಲು ಹೊರಡುವ ಮುನ್ನ ನೀವು ನಿಮ್ಮ ಮನೆ ಸ್ವಚ್ಛವಾಗಿದೆಯಾ ಎಂದು ನೋಡಬೇಕು, ಅಲ್ಲವೆ?" ಎಂದು ರಾಜಕೀಯ ಎಂಟ್ರಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ ಜ್ಯೋತಿಕಾ ಸಿನಿಮಾ
ಜ್ಯೋತಿಕಾ ಅಭಿನಯದ ಪೊನ್ಮಗಲ್ ವಂಧಲ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ವಿಶೇಷ ಅಂದರೆ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಇದೆ ತಿಂಗಳು 29ರಂದು ಸಿನಿಮಾ ತೆರೆಗೆ ಬರುತ್ತಿದೆ. ತಮಿಳು ಮತ್ತು ತೆಲುಗು ಎರಡರಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ.


Click it and Unblock the Notifications











