'ಅಣ್ಣಾವ್ರು' ಚಿತ್ರದ ನಾಯಕಿ ಮುಖಕ್ಕೆ ಏನಾಯ್ತು? ಫೋಟೊ ವೈರಲ್

ತಮಿಳು ನಟಿ ಕನಿಕಾ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಕನ್ನಡದ 'ಅಣ್ಣಾವ್ರು' ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ನಟಿಸಿದ್ದರು. ಸಾಕಷ್ಟು ಜಾಹೀರಾತು ಹಾಗೂ ಕಿರುತೆರೆ ಕಾರ್ಯಕ್ರಮಗಳಲ್ಲಿ ಕೂಡ ಆಗಿ ನಟಿಸಿದ್ದಾರೆ.

ಮಧುರೆಯಲ್ಲಿ ಹುಟ್ಟಿ ಬೆಳೆದ ಕನಿಕಾ ಗಾಯಕಿಯಾಗಿ, ಕಂಠದಾನ ಕಲಾವಿದೆಯಾಗಿ, ನಿರೂಪಕಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ. 22 ವರ್ಷಗಳ ಹಿಂದೆ ತಮಿಳಿನ ಫೈವ್‌ ಸ್ಟಾರ್ ಎನ್ನುವ ಚಿತ್ರದಲ್ಲಿ ಮೊದಲಿಗೆ ಆಕೆ ಬಣ್ಣ ಹಚ್ಚಿದ್ದರು. ಬಳಿಕ ಒಂದು ತೆಲುಗು ಸಿನಿಮಾದಲ್ಲಿ ನಟಿಸಿ ಕನ್ನಡ ಚಿತ್ರದ ಅವಕಾಶ ಪಡೆದಿದ್ದರು.

Actress Kanika burnt mark Makeup on face during Vijay GOAT film shoot

'ಅಣ್ಣಾವ್ರು' ಬಳಿಕ ಕನ್ನಡದಲ್ಲಿ ಕಿಚ್ಚ ಸುದೀಪ್ ಜೋಡಿಯಾಗಿ 'ಸೈ' ಚಿತ್ರದಲ್ಲಿ ಮಿಂಚಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್ ಸಹೋದರ ಬಾಲಾಜಿ ನಟನೆಯ 'ರಾಜಕುಮಾರಿ' ಚಿತ್ರದಲ್ಲಿ ಕೂಡ ನಾಯಕಿಯಾಗಿದ್ದರು. ಇತ್ತೀಚೆಗೆ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಪಾತ್ರ ಕನಿಕಾ ನಟಿಸುತ್ತಿದ್ದಾರೆ. ಕಳೆದ ವಾರ ಬಿಡುಗಡೆಯಾದ 'ಗೋಟ್'(GOAT) ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದಾರೆ.

ವೆಂಕಟ್ ಪ್ರಭು ನಿರ್ದೇಶನದ ಸೈನ್ಸ್ ಫಿಕ್ಷನ್ ಥ್ರಿಲ್ಲರ್ 'ಗೋಟ್' ಸಿನಿಮಾ ಸಖತ್ ಸದ್ದು ಮಾಡ್ತಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಆದರೂ ದಳಪತಿ ವಿಜಯ್ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗಿದೆ. ಹಾಗಾಗಿ ಮಿಶ್ರಪ್ರತಿಕ್ರಿಯೆ ನಡುವೆಯೂ ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದೆ. ಗಣೇಶ ಹಬ್ಬದ ವೀಕೆಂಡ್ ಕೂಡ ಚಿತ್ರಕ್ಕೆ ಪ್ಲಸ್ ಆಗಿದೆ.

ಸದ್ಯ ಕನಿಕಾ ಮಾಡಿರುವ ಪೋಸ್ಟ್ ಸಖತ್ ವೈರಲ್ ಆಗ್ತಿದೆ. ಮುಖ ಸುಟ್ಟಂತೆ ಇರುವ ಫೋಟೊಗಳನ್ನು ಆಕೆ ಹಂಚಿಕೊಂಡಿದ್ದಾರೆ. ಎರಡು ದಿನಗಳಿಂದ ಈ ಫೋಟೊ ಸದ್ದು ಮಾಡ್ತಿದೆ. ಕೆಲವರು ಆಕೆಯ ಮುಖಕ್ಕೆ ಏನಾಯ್ತು ಎಂದು ಹುಬ್ಬೇರಿಸುತ್ತಿದ್ದಾರೆ. ಆದರೆ ಇದು 'ಗೋಟ್' ಚಿತ್ರದಲ್ಲಿ ಆಕೆಯ ಸಂಬಂಧಿಸಿದ ಫೋಟೊ ಇದು. ಚಿತ್ರದಲ್ಲಿ ಕನಿಹಾ ಸಣ್ಣ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ.

'ಗೋಟ್‌' ಚಿತ್ರದಲ್ಲಿ ನಟ ಕೋಕಿಲ ಮೋಹನ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಆತನ ಮಡದಿ ಅಭಿ ಎನ್ನುವ ಪಾತ್ರದಲ್ಲಿ ಕನಿಕಾ ಕಾಣಿಸಿಕೊಂಡಿದ್ದಾರೆ. ಅದೇ ಪಾತ್ರಕ್ಕಾಗಿ ಹೀಗೆ ಮುಖ ಸುಟ್ಟಂತೆ ಮೇಕಪ್ ಹಾಕಿಕೊಂಡು ನಟಿಸಿದ್ದಾರೆ. ಸಿನಿಮಾ ಬಿಡುಗಡೆ ಬೆನ್ನಲ್ಲೇ ಆಗ ಕ್ಲಿಕ್ಕಿಸಿದ್ದ ಫೋಟೊಗಳನ್ನು ಹಂಚಿಕೊಂಡು ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.

"ನಾನು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ ಆ ಒಂದು ದೃಶ್ಯದ ಹಿಂದೆ ಏನು ನಡೆಯುತ್ತದೆ ? ಎನ್ನುವುದು ಹಲವರಿಗೆ ತಿಳಿದಿರುವುದಿಲ್ಲ. ಅದು ಏನು ಎನ್ನುವುದು ಇಲ್ಲಿದೆ ನೋಡಿ. ನಟಿಯಾಗಿರುವುದನ್ನು ಪಾತ್ರವಾಗಿ ಬದಲಾಗುವುದು, ಪಾತ್ರದೊಳಗೆ ಇಳಿಯುವುದು, ಚಿಕ್ಕದೋ ದೊಡ್ಡದೋ ಆ ಪಾತ್ರಕ್ಕೆ ಜೀವ ತುಂಬುವುದನ್ನು ನಾನು ಬಹಳ ಎಂಜಾಯ್ ಮಾಡುತ್ತೇನೆ. ವೆಂಕಟ್ ಪ್ರಭು ಮತ್ತು ತಂಡಕ್ಕೆ ಅಭಿನಂದನೆ" ಎಂದು ಬರೆದುಕೊಂಡಿದ್ದಾರೆ.

ಚಿಕ್ಕಂದಿನಿಂದ ಗಾಯನ ಕಲಿತು ಬೆಳೆದ ಕನಿಕಾ ಮುಂದೆ ಬಣ್ಣದ ಲೋಕದತ್ತ ಮುಖ ಮಾಡಿದ್ದರು. ಅಂದಹಾಗೆ ಆಕೆಯ ಮೂಲ ಹೆಸರು ದಿವ್ಯಾ ವೆಂಕಟಸುಬ್ರಮಣ್ಯಂ ಅಯ್ಯರ್. ಚಿತ್ರರಂಗಕ್ಕೆ ಬಂದ ಬಳಿಕ ಕನಿಕಾ ಎಂದು ಬದಲಿಸಿಕೊಂಡಿದ್ದರು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಹಾಟ್ ಹಾಟ್ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 2008ರಲ್ಲಿ ಶ್ಯಾಮ್ ರಾಧಕೃಷ್ಣನ್ ಕೈ ಹಿಡಿದ ಕನಿಕಾಗೆ ಒಬ್ಬ ಮಗ ಕೂಡ ಇದ್ದಾನೆ.

ಮದುವೆ ಬಳಿಕ ಚಿತ್ರರಂಗಕ್ಕೆ ಗುಡ್‌ಬೈ ಹೇಳಿ ಯೂಎಸ್‌ನಲ್ಲಿ ಸೆಟ್ಲ್ ಆಗಲು ಕನಿಕಾ ನಿರ್ಧರಿಸಿದ್ದರು. ಆದರೆ ಬಳಿಕ ಮತ್ತೆ ಕಂಬ್ಯಾಕ್ ಮಾಡಿದ್ದರು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದರು. ಇದೇ ವರ್ಷ ಕನಿಕಾ ನಟಿಸಿದ 'ವೆಪನ್' ಎನ್ನುವ ತಮಿಳು ಸಿನಿಮಾ ಸಹ ತೆರೆಗೆ ಬಂದಿತ್ತು.

More from Filmibeat

English summary
Kollywood actress shares a glimpse into her GOAT film Look;
Read more about: tamil kollywood actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X