For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೆ ವಿದಾಯ ಹೇಳಿದ 'ಬೃಂದಾವನ' ನಟಿ ಕಾರ್ತಿಕಾ: ಮುಂದೇನು?

  |

  ಕೆಲವು ನಟ-ನಟಿಯರು ಚಿತ್ರರಂಗದಲ್ಲಿ ಬಹಳ ದೊಡ್ಡ ಆರಂಭ ಪಡೆದಿರುತ್ತಾರೆ. ಆಂಭದಲ್ಲಿಯೇ ದೊಡ್ಡ್ ಬ್ಯಾನರ್ ಸಿನಿಮಾಗಳು, ದೊಡ್ಡ ನಟರೊಟ್ಟಿಗೆ ತೆರೆ ಹಂಚಿಕೊಳ್ಳುತ್ತಾರೆ ಆದರೆ ಕೆಲವೇ ವರ್ಷದಲ್ಲಿ ಚಿತ್ರರಂಗದಿಂದಲೇ ಕಣ್ಮರೆ ಆಗುತ್ತಾರೆ.

  ಹಲವಾರು ನಟ-ನಟಿಯರು ಹೀಗೆ ಕೆಲವು ವರ್ಷ ಚೆನ್ನಾಗಿ ಮಿಂಚಿ ಮರೆಯಾಗಿಬಿಟ್ಟಿದ್ದಾರೆ ಚಿತ್ರರಂಗದಲ್ಲಿ. ಈಗ ಸರದಿ ನಟಿ ಕಾರ್ತಿಕಾ ನಾಯರ್‌ ಅವರದ್ದು.

  ಖ್ಯಾತ ನಟಿ ರಾಧಿಕಾ ಮಗಳಾಗಿರುವ ಕಾರ್ತಿಕಾ ನಾಯರ್ ನಟನೆ ಆರಂಭ ಮಾಡಿದ್ದೆ ಬಹಳ ದೊಡ್ಡ ಬ್ಯಾನರ್‌ನ ದೊಡ್ಡ ಬಜೆಟ್ ಸಿನಿಮಾದೊಟ್ಟಿಗೆ. ಅದರ ನಂತರ ಹಲವು ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡರು, ಹಿಟ್ ಸಿನಿಮಾಗಳನ್ನು ಸಹ ನೀಡಿದರು ಆದರೆ ಈಗ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಿದ್ದಾರೆ.

  ದೊಡ್ಡ ನಟರೊಟ್ಟಿಗೆ ತೆರೆ ಹಂಚಿಕೊಂಡ ನಟಿ

  ದೊಡ್ಡ ನಟರೊಟ್ಟಿಗೆ ತೆರೆ ಹಂಚಿಕೊಂಡ ನಟಿ

  ಕಾರ್ತಿಕಾ ನಾಯರ್ ನಟನೆ ಆರಂಭಿಸಿದ್ದು ನಾಗಾರ್ಜುನ ಪುತ್ರ ನಾಗಚೈತನ್ಯ ನಟನೆಯ ಮೊದಲ ಸಿನಿಮಾ 'ಜೋಷ್' ಮೂಲಕ ಭಾರಿ ಬಜೆಟ್‌ನ ಈ ಸಿನಿಮಾದಲ್ಲಿ ನಾಯಕಿಯಾಗಿದ್ದ ಕಾರ್ತಿಕಾ ಪ್ರತಿಭೆ ಗುರುತಿಸಿ ತಮಿಳಿನ 'ಕೋ' ಸಿನಿಮಾದಲ್ಲಿ ಪಾತ್ರ ನೀಡಲಾಯಿತು. ಆ ಸಿನಿಮಾ ಸಹ ಸೂಪರ್ ಡೂಪರ್ ಹಿಟ್ ಆಯಿತು.

  ಮಲಯಾಳಂ ಸಿನಿಮಾದಲ್ಲಿ ಉತ್ತಮವಾಗಿ ನಟಿಸಿದ್ದರು

  ಮಲಯಾಳಂ ಸಿನಿಮಾದಲ್ಲಿ ಉತ್ತಮವಾಗಿ ನಟಿಸಿದ್ದರು

  ನಂತರ ಮಲಯಾಳಂನ 'ಮಕರಮಂಜು' ಸಿನಿಮಾದಲ್ಲಿ 'ಊರ್ವಶಿ'ಯ ಪಾತ್ರದಲ್ಲಿ ನಟಿಸಿದರು. ಆ ಸಿನಿಮಾದಲ್ಲಿನ ನಟನೆಗೆ ಕಾರ್ತಿಕಾಗೆ ಭಾರಿ ಪ್ರಶಂಸೆ ದೊರೆತಿತ್ತು. ಆಸ್ಕರ್ ಪ್ರಶಸ್ತಿ ವಿಜೇತ ಡ್ಯಾನಿ ಬೋಯ್ಲ್‌ ಕಾರ್ತಿಕಾ ನಟನೆ ನೋಡಿ ಮೆಚ್ಚಿಕೊಂಡರಂತೆ.

  'ಬೃಂದಾವನ' ಸಿನಿಮಾದ ಬಳಿಕ ಅವಕಾಶಗಳು ಕಡಿಮೆಯಾದವು

  'ಬೃಂದಾವನ' ಸಿನಿಮಾದ ಬಳಿಕ ಅವಕಾಶಗಳು ಕಡಿಮೆಯಾದವು

  ನಂತರ ತೆಲುಗಿನ ಸೂಪರ್ ಸ್ಟಾರ್ ನಟ ಜೂ.ಎನ್‌ಟಿಆರ್ ಜೊತೆಗೆ 'ದಮ್ಮು' ಸಿನಿಮಾದಲ್ಲಿ ನಟಿಸಿದರು. ನಂತರ ಮಮ್ಮುಟಿ ಜೊತೆಗೆ ಮಲಯಾಳಂ ಸಿನಿಮಾ. ನಂತರ ಕನ್ನಡದಲ್ಲಿ ದರ್ಶನ್ ಜೊತೆಗೆ 'ಬೃಂದಾವನ' ಸಿನಿಮಾದಲ್ಲಿ ನಟಿಸಿದರು ಕಾರ್ತಿಕಾ. ಆದರೆ ಆ ನಂತರ ಅವರಿಗೆ ಅವಕಾಶಗಳು ಕಡಿಮೆ ಆದವು. 2016 ರಲ್ಲಿ ಅವರು ನಟಿಸಿದ್ದ ತಮಿಳಿನ 'ವಾ ದಿಲ್' ಅವರ ಕೊನೆಯ ಸಿನಿಮಾ ಆ ನಂತರ ಯಾವ ಸಿನಿಮಾದಲ್ಲಿಯೂ ನಟಿಸಿಲ್ಲ ಕಾರ್ತಿಕಾ.

  June 28ಕ್ಕೆ ಪ್ರತಿಭಟನೆಗೆ ಸಜ್ಜಾಗುತ್ತಿರುವ ಕಲಾವಿದರ ಸಂಘ!! | Filmibeat Kannada
  ಹೋಟೆಲ್ ಉದ್ದಿಮೆ ನೋಡಿಕೊಳ್ಳಲಿದ್ದಾರೆ

  ಹೋಟೆಲ್ ಉದ್ದಿಮೆ ನೋಡಿಕೊಳ್ಳಲಿದ್ದಾರೆ

  ಕೆಲವು ವರ್ಷಗಳು ಕಾದ ನಂತರ ಸೂಕ್ತ ಅವಕಾಶಗಳು ದೊರೆಯದೇ ಹೋದ ಕಾರಣಕ್ಕೆ ನಟನೆಗೆ ಗುಡ್‌ಬೈ ಹೇಳಿರುವ ನಟಿ ಕಾರ್ತಿಕಾ, ಉದ್ದಿಮೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಆಕೆ ಯುಟಿಎಸ್ (uday samudra leisure) ಗ್ರೂಫ್ ಆಫ್ ಹೋಟೆಲ್‌ನ ಮುಖ್ಯಸ್ಥೆ ಆಗಿದ್ದು ಹೋಟೆಲ್ ಉದ್ದಿಮೆಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದ್ದಾರೆ.

  English summary
  Actress Karthika Nair said good bye to movie industry. Her last movie was released on 2016. She will continue her business.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X