ಪ್ರೇಮಲೋಕದ ಪಾರಿಜಾತವೇ.. ಯಾಕೆ ನೀನು..

By ಫಿಲ್ಮಿಬೀಟ್ ಡೆಸ್ಕ್

ತಮಿಳು ನಟಿ ಕಸ್ತೂರಿ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ತಮ್ಮ ನೇರಾನೇರ ಮಾತುಗಳಿಂದ ಆಕೆ ಸದಾ ಸುದ್ದಿಯಲ್ಲಿ ಇರ್ತಾರೆ. ಒಂದ್ಕಾಲದಲ್ಲಿ ನಾಯಕಿಯಾಗಿ ಕಮಾಲ್ ಮಾಡಿದ್ದ ಚೆಲುವೆ ಈಗ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆ ಧಾರಾವಾಹಿ, ರಿಯಾಲಿಟಿ ಶೋಗಳಲ್ಲೂ ದರ್ಶನ ಕೊಡುತ್ತಿದ್ದಾರೆ. ದಿನಕ್ಕೊಂದು ಹಾಟ್ ಫೋಟೊ ಶೇರ್ ಮಾಡುವ ಮೂಲಕ ಕಸ್ತೂರಿ ಗಮನ ಸೆಳೆಯುತ್ತಿದ್ದಾರೆ.

ಕೆಲ ವರ್ಷಗಳ ಹಿಂದೆ ಕಸ್ತೂರಿ ಮಾಡಿಸಿದ್ದ ಅರೆ ಬೆತ್ತಲೆ ಫೋಟೂಶೂಟ್ ಭಾರೀ ಸುದ್ದಿ ಆಗಿತ್ತು. ತಾಯಂದಿರ ದಿನದ ಸಂಭ್ರಮದಲ್ಲಿ ಮತ್ತೊಮ್ಮೆ ಆಕೆ ಆ ಫೋಟೊ ಶೇರ್ ಮಾಡಿ ಶುಭಾಶಯ ಕೋರಿದ್ದಾರೆ. ಮತ್ತೊಮ್ಮೆ ಆ ಫೋಟೊಗಳು ವೈರಲ್ ಆಗುತ್ತಿದೆ. ಇನ್ನು ತಮ್ಮದೇ ಹಳೇ ಸಿನಿಮಾಗಳ ಹಾಟ್ ಹಾಟ್ ಫೋಟೊಗಳನ್ನು ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ತೇಲಿ ಬಿಡುತ್ತಿದ್ದಾರೆ. ಆ ಫೋಟೊಗಳನ್ನು ನೋಡಿ ಪಡ್ಡೆ ಹುಡುಗರು ಫಿದಾ ಆಗುತ್ತಿದ್ದಾರೆ. ಸದ್ಯ 'ನಾಂಗ' ಚಿತ್ರದ ಹಾಟ್ ಸಾಂಗ್‌ ಶೂಟಿಂಗ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

Actress Kasthuri Shankar shares Naanga movie Song Shooting Hot throwback pictures

ಸ್ಟ್ರಾಪ್‌ಲೆಸ್‌ ಡ್ರೆಸ್‌ನಲ್ಲಿ ಕಸ್ತೂರಿ ಮಾದಕ ಮೈಮಾಟ ನೋಡಿದ ಅಭಿಮಾನಿಗಂತೂ ಫಿದಾ ಆಗೋಗಿದ್ದಾರೆ. ಕೊಲ್ಲುವ ಕಣ್ಣೋಟ, ಹುಡುಗರ ನಿದ್ದೆ ಕೆಡಿಸುವ ಸೌಂದರ್ಯ, ಬಿಳಿ ಮಣಿ ಸರದಲ್ಲಿ ಕಸ್ತೂರಿ ಸಿಕ್ಕಾಪಟ್ಟೆ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. 2012ರಲ್ಲಿ ಬಂದಿದ್ದ 'ನಾಂಗ' ಚಿತ್ರದಲ್ಲಿ ನಟ ಉದಯ್ ಜೊತೆ ಬಿಂದಾಸ್ ಸಾಂಗ್‌ನಲ್ಲಿ ಮಿಂಚಿದ್ದರು. ಕಮಲರ್‌ಫುಲ್‌ ಸೆಟ್‌ನಲ್ಲಿ ಈ ಸಾಂಗ್‌ ಶೂಟ್ ಮಾಡಲಾಗಿತ್ತು. ಆ ಕಾಲಕ್ಕೆ ಸಾಂಗ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದೇ ಸಾಂಗ್‌ನ ಫೋಟೊಗಳನ್ನು ಥ್ರೋಬ್ಯಾಕ್ ಪಿಕ್ಚರ್ಸ್ ಎಂದು ಕಸ್ತೂರಿ ಹಂಚಿಕೊಂಡಿದ್ದಾರೆ.

ಮತ್ತಷ್ಟು ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿರುವುದಾಗಿ ನಟಿ ಕಸ್ತೂರಿ ಲಿಂಕ್ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೊಗಳು ಮತ್ತೊಮ್ಮೆ ವೈರಲ್ ಆಗುತ್ತಿದೆ. ನೆಟ್ಟಿಗರು ಫೋಸ್ಟ್‌ಗೆ ಚಿತ್ರವಿಚಿತ್ರ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅಭಿಮಾನಿಗಳು ಮಾತ್ರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 1991ರಲ್ಲಿ ಬಂದ 'ಆತ ಉವ್ ಕೊಯಿಲಿಲೆ' ಎನ್ನುವ ಸಿನಿಮಾ ಮೂಲಕ ಕಸ್ತೂರಿ ಚಿತ್ರರಂಗಕ್ಕೆ ಬಂದಿದ್ದರು. ಮುಂದೆ ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ನಟಿಸಿದರು. ರವಿಚಂದ್ರನ್ ನಟಿಸಿದ 'ಜಾಣ' ಸಿನಿಮಾದಲ್ಲೂ ನಟಿಸಿ ಕನ್ನಡ ಸಿನಿರಸಿರಿಗೆ ಪರಿಚಿತರಾದರು.

Actress Kasthuri Shankar shares Naanga movie Song Shooting Hot throwback pictures

'ಇಬ್ಬರ ನಡುವೆ ಮುದ್ದಿನ ಆಟ', 'ತುತ್ತಾಮುತ್ತಾ', 'ಹಬ್ಬ', 'ಪ್ರೇಮಕ್ಕೆ ಸೈ' ಸೇರಿದಂತೆ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಚಿರಂಜೀವಿ ನಟನೆಯ 'ಗಾಡ್ ಫಾದರ್' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಇನ್ನು 1995ರಿಂದಲೂ ತಮಿಳು ಕಿರುತೆರೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಕಸ್ತೂರಿ ಮಿಂಚಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಚೆಲುವೆ ರೀಲ್ಸ್, ಫೋಟೊಶೂಟ್ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಾರೆ. ಕೆಲವೊಮ್ಮೆ ಈ ರೀತಿ ತಮ್ಮದೇ ಹಳೇ ಫೋಟೊಗಳನ್ನು ಶೇರ್ ಮಾಡುತ್ತಾರೆ.

49 ವರ್ಷ ವಯಸ್ಸಾದರೂ ತಮ್ಮ ಚೆಲುವಿನಿಂದ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಏಳೆಂಟು ವರ್ಷಗಳ ಹಿಂದೆ ಕಸ್ತೂರಿ ಸ್ಪೆಷಲ್ ಫೋಟೊಶೂಟ್‌ ಮಾಡಿಸಿದ್ದರು. ಅರೆಬೆತ್ತಲಾಗಿ ಮಗುವನ್ನು ಎದೆಗೆ ಅವುಚಿಟ್ಟುಕೊಂಡು ಕ್ಯಾಮರಾ ಮುಂದೆ ನಿಂತಿದ್ದರು. ಜೇಡ್ ಬೀಲ್ಸ್ ಬರೆದ 'ದಿ ಬಾಡೀಸ್ ಆಫ್ ಮದರ್' ಎನ್ನುವ ಪುಸ್ತಕಕ್ಕಾಗಿ ಈ ಫೋಟೊಶೂಟ್ ಮಾಡಿಸಿದ್ದರು. ಇದೀಗ ಮತ್ತೊಮ್ಮೆ ಈ ಫೋಟೊಗಳು ವೈರಲ್ ಆಗ್ತಿವೆ. ಕಾರಣ ತಾಯಂದಿರ ದಿನಕ್ಕೆ ಇದೇ ಫೋಟೊಗಳನ್ನು ಶೇರ್ ಮಾಡಿ ಕಸ್ತೂರಿ ಶುಭಾಶಯ ಕೋರಿದ್ದಾರೆ.

Actress Kasthuri Shankar shares Naanga movie Song Shooting Hot throwback pictures

ಕೆಲ ದಿನಗಳ ಹಿಂದೆ ಈ ಫೋಟೊಶೂಟ್‌ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಸ್ತೂರಿ "ಅಮೆರಿಕಾದ ಸಂಸ್ಥೆಗಾಗಿ ಆ ಫೋಟೊಶೂಟ್ ಮಾಡಬೇಕಾಯಿತು. ಆದರೆ ಅಲ್ಲಿ ಮಾಡಿದ ಫೋಟೊಶೂಟ್ ಫೋಟೊಗಳು ಇಲ್ಲಿಗೆ ಹೇಗೆ ಬಂತು ಗೊತ್ತಿಲ್ಲ. ಆ ಫೋಟೊಗಳು ಇಲ್ಲಿ ವೈರಲ್ ಆದಾಗ ಕೊಂಚ ಭಯವಾಗಿತ್ತು. ಅಮೆರಿಕಾದಲ್ಲಿ ಇದೆಲ್ಲಾ ಓಕೆ. ನಮ್ಮವರು ಒಪ್ಪಿಕೊಳ್ಳುವುದಿಲ್ಲವೇನೋ, ಟ್ರೋಲ್ ಮಾಡುತ್ತಾರೆ ಎಂದು ಆತಂಕಗೊಂಡಿದ್ದೆ. ಆದರೆ ಆ ಫೋಟೊಗಳ ಬಗ್ಗೆ ಒಂದೇ ಒಂದು ನೆಗೆಟಿವ್ ಕಾಮೆಂಟ್‌ಗಳು ಬರಲಿಲ್ಲ" ಎಂದು ಹೇಳಿಕೊಂಡಿದ್ದರು.

More from Filmibeat

English summary
Actress Kasthuri Shankar shares Naanga movie Song Shooting Hot throwback pictures. hot Beauty sizzling photos are breaking the internet. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X