"ಪ್ರಭಾಸ್ ರಾಮ ಅಲ್ಲ, ಕರ್ಣನ ತರ ಕಾಣಿಸುತ್ತಿದ್ದಾರೆ" ಎಂದ ಕಸ್ತೂರಿ: ಅಭಿಮಾನಿಗಳು ಗರಂ
ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ದಿನಕ್ಕೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಟೀಸರ್ ರಿಲೀಸ್ ಆದ ದಿನದಿಂದಲೂ ಕೆಲವರು ಚಿತ್ರವನ್ನು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಸಿನಿಮಾದಲ್ಲಿ ಶ್ರೀರಾಮನಾಗಿ ಪ್ರಭಾಸ್ ನಟಿಸಿದ್ದಾರೆ. ಗಡ್ಡ, ಮೀಸೆಯೊಂದಿಗೆ ಶ್ರೀರಾಮನಾಗಿ ಯಂಗ್ ರೆಬಲ್ ಸ್ಟಾರ್‌ನ ತೋರಿಸಲಾಗಿದೆ. ಈ ವಿಚಾರ ಕೂಡ ಚರ್ಚೆ ಹುಟ್ಟುಹಾಕಿತ್ತು. ಈ ಬಗ್ಗೆ ನಟಿ ಕಸ್ತೂರಿ ಟ್ವೀಟ್ ವೈರಲ್ಲಾಗಿದೆ.
550 ಕೋಟಿ ರೂ. ಬಜೆಟ್‌ನಲ್ಲಿ 'ಆದಿಪುರುಷ್' ಸಿನಿಮಾ ನಿರ್ಮಾಣವಾಗಿರುವುದಾಗಿ ಹೇಳಲಾಗ್ತಿದೆ. ಬಾಲಿವುಡ್ ನಿರ್ದೇಶಕ ಓಂ ರಾವುತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಟೀಸರ್ ನೋಡಿದಾಗ ರಾವಣ ಹಾಗೂ ಹನುಮಂತನ ವೇಷಭೂಷಣ, ಲುಕ್ ಬಗ್ಗೆ ಕೂಡ ಕೆಲವರು ಚಕಾರ ಎತ್ತಿದ್ದರು. ಇದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಸಿನಿಮಾ ಬಿಡುಗಡೆಗೆ ಬಿಡಲ್ಲ ಎಂದು ಕೆಲವರು ಆಕ್ರೋಶಗೊಂಡಿದ್ದರು.

ಇನ್ನು ಪ್ರಭಾಸ್ ಗಡ್ಡ, ಮೀಸೆಯಲ್ಲಿ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಕೆಲವರಿಗೆ ಇಷ್ಟವಾಗುತ್ತಿಲ್ಲ. ಆದರೆ ಎಲ್ಲದಕ್ಕೂ ಕಾರಣ ಇದೆ, ನೀವು ಸಿನಿಮಾ ನೋಡಿ ನಂತರ ಗೊತ್ತಾಗುತ್ತದೆ ಎಂದು ಚಿತ್ರತಂಡ ಹೇಳ್ತಾ ಬರ್ತಿದೆ. ಕೆಲವರು ನಾವು ರಾಮನನ್ನು ಫೋಟೊಗಳಲ್ಲಿ ನೋಡಿದ್ದೆ ನಿಜವಲ್ಲ, ರಾಮ ಲಕ್ಷ್ಮಣರು ಗಡ್ಡ, ಮೀಸೆಯ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿ ಪ್ರಸ್ತಾಪ ಇದೆ. ಹಾಗಾಗಿ ಚಿತ್ರದಲ್ಲಿ ತೋರಿಸುತ್ತಿರುವುದು ತಪ್ಪಲ್ಲ ಎಂದರು.
ಕಸ್ತೂರಿ ಟ್ವೀಟ್
ಇದೀಗ ತಮಿಳು ನಟಿ ಕಸ್ತೂರಿ 'ಆದಿಪುರುಷ್' ಚಿತ್ರದಲ್ಲಿ ರಾಮ, ಲಕ್ಷ್ಮಣರು ಗಡ್ಡ, ಮೀಸೆಯಲ್ಲಿ ಕಾಣಿಸಿಕೊಂಡಿರುವುದರ ಬಗ್ಗೆ ಟ್ವೀಟ್ ಮಾಡಿದ್ದಾರೆ. "ಯಾವ ಸಂಪ್ರದಾಯದಲ್ಲಿ ರಾಮ, ಲಕ್ಷ್ಮಣರು ಗಡ್ಡ, ಮೀಸೆಯಲ್ಲಿರುವಂತೆ ತೋರಿಸಿದ್ದಾರೆ. ಯಾಕೆ ಚಿತ್ರದಲ್ಲಿ ರಾಮ, ಲಕ್ಷ್ಮಣರನ್ನು ಹೀಗೆ ಚಿತ್ರಿಸಲಾಗಿದೆ. ಪ್ರಭಾಸ್ ಸ್ವಂತ ಇಂಡಸ್ಟ್ರಿ(ತೆಲುಗು ಇಂಡಸ್ಟ್ರಿ)ಯಲ್ಲಿ ಖ್ಯಾತನಾಮರು ಶ್ರೀರಾಮನ ಪಾತ್ರದಲ್ಲಿ ಬಹಳ ಚೆನ್ನಾಗಿ ನಟಿಸಿದ್ದಾರೆ. ಈಗ ಪ್ರಭಾಸ್‌ನ ನೋಡುತ್ತಿದ್ದರು ನನಗೆ ರಾಮ ನೆನಪಾಗುತ್ತಿಲ್ಲ, ಕರ್ಣ ನೆನಪಾಗುತ್ತಿದ್ದಾನೆ" ಎಂದು ಬರೆದುಕೊಂಡಿದ್ದಾರೆ.
ಕಾಮೆಂಟ್ ಬಾಕ್ಸ್‌ನಲ್ಲಿ ಚರ್ಚೆ
ನಟಿ ಕಸ್ತೂರಿ ಟ್ವೀಟ್‌ಗೆ ಕೆಲವರು ಕಾಮೆಂಟ್ ಬಾಕ್ಸ್‌ನಲ್ಲಿ ತಿರುಗೇಟು ನೀಡುತ್ತಿದ್ದಾರೆ. ಅವರಿಗೆ ಕಸ್ತೂರಿ ಕೂಡ ಪ್ರತ್ಯುತ್ತರ ನೀಡುತ್ತಿದ್ದಾರೆ. ಹಿಂದೂಗಳು ದೇವರನ್ನು ಯಾವ ರೂಪದಲ್ಲಿ ಬೇಕಾದರೂ ಆರಾಧಿಸಲು ಅವಕಾಶ ಇದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಟಿ "ಇದು ಅವತಾರಗಳಿಗೆ ಹೊಂದಿಕೆಯಾಗುವುದಿಲ್ಲ. ಅವತಾರಗಳು ಐತಿಹಾಸಿಕ ರೂಪ ಮತ್ತು ಸ್ವೀಕೃತ ಚಿತ್ರಣವನ್ನು ಹೊಂದಿವೆ" ಎಂದಿದ್ದಾರೆ.

ಭಾನುವಾರದಿಂದ ಟಿಕೆಟ್ ಬುಕ್ಕಿಂಗ್
ಬಹಳ ದೊಡ್ಡಮಟ್ಟದಲ್ಲಿ 'ಆದಿಪುರುಷ್' ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೀತಿದೆ. ಭಾನುವಾರದಿಂದ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ. ಮುಂದಿನ ಶುಕ್ರವಾರ ಸಿನಿಮಾ 5 ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಭಾರತದಲ್ಲಿ ಅಂದಾಜು 6000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ. ಮೊದಲ ದಿನವೇ ಸಿನಿಮಾ 160 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಲೆಕ್ಕಾಚಾರ ನಡೀತಿದೆ.
ಕರ್ನಾಟಕದಲ್ಲೂ 'ಆದಿಪುರುಷ್' ಹವಾ
ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರದ ಕರ್ನಾಟಕ ರೈಟ್ಸ್ ಕೊಂಡುಕೊಂಡಿದೆ. ರಾಜ್ಯದಲ್ಲೂ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಆಗುವ ಸುಳಿವು ಸಿಕ್ತಿದೆ. ಈಗಾಗಲೇ ರಾಮಾಯಣ ಕಾವ್ಯವನ್ನು ಹಲವು ರೂಪಗಳಲ್ಲಿ ನೋಡಿದ್ದೇವೆ. ಕಥೆ ಕೂಡ ಎಲ್ಲರಿಗೂ ಗೊತ್ತು. ಆದರೆ ಅದೇ ಕಥೆಯನ್ನು ಇವತ್ತಿನ ಆಧುನಿಕ ತಂತ್ರಜ್ಞಾನ ಬಳಸಿ ರೋಷಕವಾಗಿ ಕಟ್ಟಿಕೊಡಲಾಗಿದೆ. ತ್ರೀಡಿಯಲ್ಲಿ ಸಿನಿಮಾ ಅದ್ಭುತ ಅನುಭವ ನೀಡಲಿದೆ.


Click it and Unblock the Notifications











