Kausalya: ಆ ಕ್ರಿಕೆಟಿಗನೊಟ್ಟಿಗೆ ಅಫೇರ್? ಮದುವೆಯಾಗದೇ ಉಳಿಯಲು ಕಾರಣ ಬಿಚ್ಚಿಟ್ಟ ನಟಿ ಕೌಸಲ್ಯ
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಟಿ ಕೌಲಸ್ಯ ತಮಿಳು ಚಿತ್ರರಂಗದಲ್ಲಿ ನೆಲೆನಿಂತರು. ಒಂದಷ್ಟು ಕನ್ನಡ ಸಿನಿಮಾಗಳಲ್ಲೂ ಕೂಡ ಆಕೆ ನಟಿಸಿದರು. ವಯಸ್ಸು 40 ದಾಟಿದ್ರು, ಇನ್ನು ಆಕೆ ಮದುವೆ ಆಗಿಲ್ಲ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆ ಬಗ್ಗೆ ಕೌಸಲ್ಯ ಮೌನ ಮುರಿದಿದ್ದಾರೆ. ಮದುವೆ ಆಗದೇ ಉಳಿಯಲು ಕಾರಣ ಏನು? ಎನ್ನುವುದರ ಬಗ್ಗೆಯೂ ಮಾತನಾಡಿದ್ದಾರೆ.
ಗಾಸಿಪ್‌ಗಳ ಬಗ್ಗೆ ಮಾತನಾಡಿರುವ ನಟಿ ಕೌಸಲ್ಯ, "ನಿಜಕ್ಕೂ ಅದು ಗುಡ್.. ಏನೋ ಒಂದು ವಿಚಾರದ ಬಗ್ಗೆ ಜನ ಮಾತನಾಡುತ್ತಿದ್ದಾರಲ್ಲ. ಅದರ ಅರ್ಥ ಇನ್ನು ನನ್ನನ್ನು ನಟಿಯಾಗಿ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ ಎಂದು ಅರ್ಥ ಅಲ್ಲವೇ. ನನಗೆ ಅದರ ಬಗ್ಗೆ ಬೇಸರ ಇಲ್ಲ. ಏನೋ ಒಂದು ಗಾಸಿಪ್ ಮಾಡುತ್ತಿರುತ್ತಾರೆ. ಈಗೆಲ್ಲಾ ಟ್ರೋಲ್ ಮಾಡುತ್ತಾರಲ್ಲ. ಮೊದಲಿನಿಂದಲೂ ಅದು ಇದೆ. ಈಗ ಸೋಶಿಯಲ್ ಮೀಡಿಯಾ ವೇದಿಕೆ ಆಗಿದೆ ಅಷ್ಟೇ." ಎಂದಿದ್ದಾರೆ.

ಇನ್ನು ಮದುವೆ ಆಗದೇ ಇರಲು ಕಾರಣ ಏನು? ಎನ್ನುವ ಪ್ರಶ್ನೆಗೆ "ನಾನು ಮದುವೆ ವಿರೋಧಿ ಅಲ್ಲ. ಮದುವೆ ನಿಜಕ್ಕೂ ಒಳ್ಳೆ ಸಂಗತಿ, ಒಳ್ಳೆ ವ್ಯಕ್ತಿ ಸಿಕ್ಕರೆ. ಆದರೆ ನನ್ನ ಜೀವನದಲ್ಲಿ ಮದುವೆ ಬಗ್ಗೆ ಸಾಕಷ್ಟು ಆಲೋಚನೆಗಳು ಇದ್ದವು. ಕೆಲವೊಮ್ಮೆ ನನಗೆ ಅನ್ನಿಸುತ್ತಿತ್ತು. ಮದುವೆ ಎಲ್ಲಾ ನನಗೆ ಸೂಟ್ ಆಗಲ್ಲ ಅಂತ. ಕೆಲವೊಮ್ಮೆ ನನಗೆ ಸರಿಯಾದ ವ್ಯಕ್ತಿ ಸಿಗಲ್ಲ ಎನಿಸುತ್ತಿತ್ತು. ನಾನು ಕೂಡ ಸಂಗಾತಿಗಾಗಿ ಹುಡುಕಿದೆ. ಆದರೆ ಅದು ಮುರಿದು ಬಿತ್ತು"
"ಆಮೇಲೆ ಪೋಷಕರು ಜೊತೆ ಇದ್ದು ಬಿಡೋಣ ಎನ್ನಿಸಿತು. ಅಪ್ಪ- ಅಮ್ಮನ ಜೊತೆ ಇರುವುದಕ್ಕೆ ನನಗೆ ಇಷ್ಟ. ಬಹಳ ವರ್ಷಗಳಿಂದ ಅವರೊಟ್ಟಿಗೆ ಇದ್ದೀನಿ. ಅವರೊಟ್ಟಿಗೆ ಬೆಳೆದವರು. ಹಾಗಾಗಿ ಅವರೊಟ್ಟಿಗೆ ಹೆಚ್ಚಿನ ಅನುಬಂಧ ಇದೆ. ನಾನು ಒಬ್ಬರನ್ನು ಮದುವೆ ಆದ್ರೆ ಅವರೊಟ್ಟಿಗೆ ಹೇಗಿರುತ್ತೀನಿ ಗೊತ್ತಿಲ್ಲ. ಹೀಗೆ ಸಾಕಷ್ಟು ಆಲೋಚನೆಗಳು ತಲೆಯಲ್ಲಿ ಓಡುತ್ತಿತ್ತು. ಹಾಗಾಗಿ ನಾನು ಮದುವೆ, ರಿಲೇಷನ್‌ಶಿಪ್ ಯೋಚಿಸಲು ಆಗಲಿಲ್ಲ"

"ಬಳಿಕ ನಾನು ಅನಾರೋಗ್ಯಕ್ಕೆ ತುತ್ತಾದೆ. ಅದಕ್ಕಾಗಿ ನಾನು ಚಿತ್ರರಂಗದಿಂದ ಬ್ರೇಕ್ ಪಡೆದುಕೊಂಡೆ. ಮತ್ತೆ ವಾಪಸ್ ಬಂದೆ. ಒಂದೆರಡು ಸಿನಿಮಾಗಳಲ್ಲಿ ನಟಿಸಿದೆ. ಅವರು ಗೆಲ್ಲಲಿಲ್ಲ. ಹಾಗಾಗಿ ಅದೆಲ್ಲಾ ಮಿಕ್ಸ್ ಆಗಿ ಮದುವೆ ಆಗದೇ ಉಳಿದುಬಿಟ್ಟೆ" ಎಂದು ಕೌಸಲ್ಯ ವಿವರಿಸಿದ್ದಾರೆ. ನರಗಳ ಸಮಸ್ಯೆಯಿಂದ ಬಳಲಿದೆ. ಸರಿಯಾದ ವೈದ್ಯರು ಸಿಗದೇ, ಚೆನ್ನಾಗಿ ತಿಂದು ದಪ್ಪಗಾಗಿದ್ದೆ. ಹಾಗಾಗಿ ಚಿತ್ರರಂಗದಿಂದ ಕೆಲ ಸಮಯ ದೂರಾದೆ" ಎಂದು ಕೌಸಲ್ಯ ಹೇಳಿದ್ದಾರೆ.
"ಕ್ರಿಕೆಟಿಗನ ಜೊತೆಗೆ ಅಫೇರ್ ಇತ್ತು ಎಂದು ಒಮ್ಮೆ ಸುದ್ದಿ ಆಗಿತ್ತು. ಆದರೆ ಅದೆಲ್ಲಾ ಸುಳ್ಳು. ಆದರೆ ಆ ಸುದ್ದಿಯಿಂದ ಆ ಕ್ರಿಕೆಟರ್ ಡಿಸ್ಟರ್ಬ್ ಆಗಿದ್ದರು ಅದು ನನಗೆ ಬೇಸರ ಇದೆ" ಎಂದಿದ್ದಾರೆ. "ದಳಪತಿ ವಿಜಯ್ ಹಾಗೂ ಸೂರ್ಯ ನಟನೆ ಬಹಳ ಇಷ್ಟ" ಎಂದು ಕೌಸಲ್ಯ ಹೇಳಿದ್ದಾರೆ.
1996ರಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ಸಮಯದಲ್ಲಿ ಕೌಸಲ್ಯ ಮಲಯಾಳಂನ 'ಏಪ್ರಿಲ್ 19' ಚಿತ್ರಕ್ಕೆ ಆಯ್ಕೆ ಆಗಿದ್ದರು. ಬಳಿಕ ತಮಿಳು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಅದೇ ಸಮಯದಲ್ಲಿ ಕನ್ನಡದ 'ಸ್ವಾರಿ' ಚಿತ್ರದಲ್ಲಿ ಬಣ್ಣ ಹಚ್ಚಿದರು. ಬಹಳ ವರ್ಷಗಳ ನಂತರ 'ರೀ ಸ್ವಲ್ಪ ಬರ್ತೀರಾ', 'ಬದ್ರಿ', 'ಗಾಂಧಿನಗರ' ಸಿನಿಮಾಗಳಲ್ಲಿ ನಟಿಸಿದರು. 'ಜಯಮಹಲ್' ಕನ್ನಡದಲ್ಲಿ ಆಕೆ ನಟಿಸಿದ ಕೊನೆಯ ಸಿನಿಮಾ.
ಇತ್ತೀಚೆಗೆ ತಮಿಳು ಕಿರುತೆರೆ ಧಾರಾವಾಹಿಗಳಲ್ಲೀ ಕೌಸಲ್ಯ ನಟಿಸುತ್ತಿದ್ದಾರೆ. ಸಿನಿಮಾಗಳಲ್ಲಿ ಒಂದೇ ತರಹದ ಪಾತ್ರಗಳು ಸಿಗುತ್ತಿತ್ತು. ಧಾರಾವಾಹಿಯಲ್ಲಿ ಬೇರೆ ಬೇರೆ ತರಹದ ಪಾತ್ರಗಳು ಅರಸಿ ಬರುತ್ತಿದೆ ಎಂದಿದ್ದಾರೆ.


Click it and Unblock the Notifications











