For Quick Alerts
  ALLOW NOTIFICATIONS  
  For Daily Alerts

  ಕೊರೊನಾದಿಂದ ಮಗ-ಗಂಡ ಇಬ್ಬರನ್ನು ಕಳೆದುಕೊಂಡ ನಟಿ ಕವಿತಾ

  |

  ಕೊರೊನಾ ವೈರಸ್‌ನಿಂದ ಮಗನನ್ನು ಕಳೆದುಕೊಂಡಿದ್ದ ಹಿರಿಯ ನಟಿ ಕವಿತಾ ಅವರ ಪತಿಯೂ ಕೋವಿಡ್‌ನಿಂದ ನಿಧನರಾಗಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.

  ಕೋವಿಡ್ ಕಾರಣದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟಿ ಕವಿತಾ ಅವರ ಪತಿ ದಶರಥ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ (ಜೂನ್ 30) ಕೊನೆಯುಸಿರೆಳೆದರು.

  ಹಿರಿಯ ನಟಿಯ ಮಗ ಕೋವಿಡ್‌ಗೆ ಬಲಿ, ಪತಿ ಆಸ್ಪತ್ರೆಗೆ ದಾಖಲುಹಿರಿಯ ನಟಿಯ ಮಗ ಕೋವಿಡ್‌ಗೆ ಬಲಿ, ಪತಿ ಆಸ್ಪತ್ರೆಗೆ ದಾಖಲು

  ದುರಂತ ಅಂದ್ರೆ ಕವಿತಾ ಅವರ ಮಗ ಸಾಯಿ ರೂಪ್ ಸಹ ಕೋವಿಡ್‌ಗೆ ಬಲಿಯಾಗಿದ್ದರು. ಕೊರೊನಾ ಸೋಂಕು ತಗುಲಿದ ನಂತರ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಜೂನ್ 16 ರಂದು ಮಗ ಸಾಯಿ ರೂಪ್ ಸಾವನ್ನಪ್ಪಿದರು.

  ಈ ವೇಳೆ ಕವಿತಾ ಗಂಡನಿಗೂ ಕೋವಿಡ್ ತಗುಲಿದ್ದ ಪರಿಣಾಮ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ, ಮಗ ಸಾವನ್ನಪ್ಪಿದ 14 ದಿನಗಳ ನಂತರ ದಶರಥ ಅವರು ಮೃತಪಟ್ಟಿದ್ದಾರೆ. ಕೇವಲ 14 ದಿನಗಳ ಅಂತರದಲ್ಲಿ ಮಗ ಮತ್ತು ಪತಿಯನ್ನು ಕಳೆದುಕೊಂಡ ನಟಿಗೆ ಸಿನಿ ಇಂಡಸ್ಟ್ರಿಯಲ್ಲಿ ಅನೇಕರು ಸಾಂತ್ವನ ಹೇಳಿದರು.

  ಅಂದ್ಹಾಗೆ, ಕವಿತಾ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು. 1976ರಲ್ಲಿ ತಮಿಳಿನ 'ಓ ಮಂಜು' ಎಂಬ ಸಿನಿಮಾದಲ್ಲಿ ಚೊಚ್ಚಲ ಬಾರಿಗೆ ನಟಿಸಿದರು. ಆಗ ಅವರ ವಯಸ್ಸು 11 ವರ್ಷ. ನಂತರ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಸುಮಾರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

  ದೊಡ್ಡ ದುರಂತದಿಂದ ಬಚಾವಾದ ಜಗ್ಗೇಶ್ ಪುತ್ರ!! | Filmibeat Kannada

  ಪೋಷಕ ಪಾತ್ರಗಳಲ್ಲಿ ಹೆಚ್ಚು ಯಶಸ್ಸು ಕಂಡಿದ್ದ ಕವಿತಾ ಸದ್ಯ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ.

  English summary
  After Son's Demise, Actress Kavitha husband passed away due to Coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X