For Quick Alerts
  ALLOW NOTIFICATIONS  
  For Daily Alerts

  ದಿವಂಗತ ನಟಿ ವಿಜೆ ಚಿತ್ರಾ ನಟಿಸುತ್ತಿದ್ದ ಪಾತ್ರಕ್ಕೆ ಕಾವ್ಯ ಎಂಟ್ರಿ

  |

  ದಿವಂಗತ ನಟಿ ವಿಜೆ ಚಿತ್ರಾ ಸಾವಿನ ಬಳಿಕ ಕಿರುತೆರೆ ಲೋಕದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯ 'ಪಾಂಡಿಯನ್ ಸ್ಟೋರ್' ಧಾರಾವಾಹಿಯಲ್ಲಿ ಚಿತ್ರಾ ಪಾತ್ರವನ್ನು ಯಾರು ಮುಂದುವರಿಸಲಿದ್ದಾರೆ ಎನ್ನುವುದು.

  ವಿಜೆ ಚಿತ್ರಾ ಅವರ ವೃತ್ತಿ ಜೀವನದಲ್ಲಿ ಪಾಂಡಿಯರ್ ಸ್ಟೋರ್ ಧಾರಾವಾಹಿ ಹೆಚ್ಚು ಖ್ಯಾತಿ ತಂದು ಕೊಟ್ಟಿತ್ತು. ಪ್ರಸ್ತುತ ಚಿತ್ರಾ ಅವರಿಗೆ ನೇಮೂ ಫೇಮೂ ಸಿಗುವಲ್ಲಿ ಈ ಸೀರಿಯಲ್ ಪ್ರಮುಖ ಪಾತ್ರ ವಹಿಸಿತ್ತು.

  ಹೇಮಂತ್ ಮಾಡಿದ್ದ ಆರೋಪಗಳೇ ವಿಜೆ ಚಿತ್ರಾ ಸಾವಿಗೆ ಕಾರಣ!

  ಪಾಂಡಿಯರ್ ಸ್ಟೋರ್ ಧಾರಾವಾಹಿಯ ಮುಲ್ಲೈ ಪಾತ್ರವನ್ನು ಪ್ರೇಕ್ಷಕರು ಹೃದಯದಿಂದ ಸ್ವೀಕರಿಸಿದ್ದರು. ಈಗ ಚಿತ್ರಾ ಇಲ್ಲದ ಮುಲ್ಲೈ ಪಾತ್ರವನ್ನು ಸ್ವೀಕರಿಸಬೇಕಿದೆ. ನಟಿಯ ಸಾವಿನಿಂದ ಖಾಲಿಯಾಗಿರುವ ಈ ಪಾತ್ರದಲ್ಲಿ ಕಾವ್ಯ ಎಂಬ ನಟಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

  ಡಿಸೆಂಬರ್ 23ರವರೆಗೂ ಚಿತ್ರಾ ಅವರು ನಟಿಸಿರುವ ದೃಶ್ಯಗಳು ಪ್ರಸಾರವಾಗಲಿದೆ. ಬಳಿಕ, ಆ ಪಾತ್ರವನ್ನು ಕಾವ್ಯ ಮುಂದುವರಿಸಲಿದ್ದಾರಂತೆ. ಆದ್ರೆ, ಈ ಬಗ್ಗೆ ಧಾರಾವಾಹಿ ತಂಡದಿಂದ ಖಚಿತವಾಗಿಲ್ಲ.

  ಚಿತ್ರಾ ಸಾವಿನ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿದೆ. ಚಿತ್ರಾ ಸಾವಿಗೆ ಅಸಲಿ ಕಾರಣವೇನು ಎಂದು ತನಿಖೆ ಆರಂಭಿಸಿರುವ ಪೊಲೀಸರಿಗೆ ಆಘಾತಕಾರಿ ವಿಷಯಗಳು ಸಿಕ್ಕಿದೆ.

  ಕುಟುಂಬದ ಜೊತೆ ಮನಸ್ಥಾಪ ಇತ್ತು ಎಂಬ ವಿಚಾರವನ್ನು ಪತಿ ಹೇಮಂತ್ ಹೇಳಿದ್ದರು. ನಂತರ ನನ್ನ ಮಗಳ ಸಾವಿಗೆ ಹೇಮಂತ್ ಅವರೇ ಕಾರಣ, ಹಲ್ಲೆ ಮಾಡಿ, ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಮೃತ ನಟಿ ಚಿತ್ರಾ ಅವರ ತಾಯಿ ಆರೋಪಿಸಿದರು. ಬಳಿಕ, ಅನುಮಾನದ ಹಿನ್ನೆಲೆ ಹೇಮಂತ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

  ನಟಿ ವಿಜೆ ಚಿತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

  ಡ್ರಗ್ಸ್ ಪ್ರಕರಣದ ಬಗ್ಗೆ ಮತ್ತೆ ಮಾತನಾಡಿದ ಇಂದ್ರಜಿತ್ ಲಂಕೇಶ್ | Fillmibeat Kannada

  ಮತ್ತೊಂದೆಡೆ ನಟಿಯ ಸ್ನೇಹಿತೆಯೊಬ್ಬರು ಚಿತ್ರಾ ಅವರ ಖಾಸಗಿ ಜೀವನದ ಬಗ್ಗೆ ಮಾತನಾಡಿದ್ದು, ತಮಿಳಿನ ಯುವ ನಟರೊಬ್ಬರ ಜೊತೆ ಚಿತ್ರಾ ಸಂಬಂಧ ಹೊಂದಿದ್ದರು. ಆತ ಚಿತ್ರಾ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಹೇಳಿದ್ದಾರೆ.

  English summary
  Actress Kavya to replace late actress VJ Chitra In popular tv serial Pandian Stores said source.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X