ಕೃಷಿ ಮಾಡುತ್ತಿರುವ ನಟಿ ಕೀರ್ತಿ: ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆಯ ವಿಡಿಯೋ ವೈರಲ್
ಲಾಕ್ ಡೌನ್ ಸಮಯವನ್ನು ಅನೇಕರು ವಿವಿಧ ರೀತಿಯಲ್ಲಿ ಕಳೆಯುತ್ತಿದ್ದಾರೆ. ಸೆಲೆಟ್ರಿಬಿಗಳ ಲಾಕ್ ಡೌನ್ ಹೇಗಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿಯೂ ಇದೆ. ಕೆಲವರು ಈ ಸಮಯವನ್ನು ಕುಟುಂಬದ ಜೊತೆ ಹಾಯಾಗಿ ಕಳೆಯುತ್ತಿದ್ದಾರೆ.
Recommended Video
ಇನ್ನು ಕೆಲವರು ಸಾಮಾಜಿಕ ಜಾಲತಾಣಲ್ಲಿ ಸಖತ್ ಆಕ್ವೀಟ್ ಆಗಿದ್ದಾರೆ. ಅಭಿಮಾನಿಗಳ ಜೊತೆ ಆಗಾಗ ಮಾತನಾಡುತ್ತಿರುತ್ತಾರೆ. ಸದ್ಯ ತಮಿಳು ನಟಿ ಕೀರ್ತಿ ಪಾಂಡಿಯನ್ ಲಾಕ್ ಡೌನ್ ಸಮಯದಲ್ಲಿ ಕೃಷಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ನಟಿ ಕೀರ್ತಿ ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡುತ್ತಿದ್ದಾರೆ. ಇತ್ತೀಚಿಗೆ ನಟ ಉಪೇಂದ್ರ ಕೂಡ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ನಟಿ ಕೀರ್ತಿ ಕೂಡ ಕೃಷಿಯತ್ತ ಮುಖಮಾಡಿದ್ದಾರೆ. ಮುಂದೆ ಓದಿ...

ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆಯ ವಿಡಿಯೋ ವೈರಲ್
ನಟಿ ಕೀರ್ತಿ ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಲಾಕ್ ಡೌನ್ ಅವಧಿಯನ್ನು ಹೊಲದಲ್ಲಿ ಕೆಲಸ ಮಾಡುತ್ತ ಎಂಜಾಯ್ ಮಾಡುತ್ತಿರುವ ನಟಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ವಿಡಿಯೋ ಕೂಡ ಸಖತ್ ವೈರಲ್ ಆಗಿದೆ.
ವಿಡಿಯೋ ಹಂಚಿಕೊಂಡು ಕೀರ್ತಿ ಹೇಳಿದ್ದೇನು?
"ಮತ್ತೆ ಕೃಷಿ ಪ್ರಾರಂಭಿಸಿದ್ದೇನೆ. ಕ್ವಾರಂಟೈನ್ ನ ಕೃಷಿ" ಎಂದು ಹೇಳಿದ್ದಾರೆ. ಜೊತೆಗೆ "ಇದು ನಮ್ಮ ಮನೆಯ ಆಸ್ತಿ. ಸಂಪರ್ಕ ತಡೆಯನ್ನು ಹೊಂದಿದೆ. ಇದು ಸಾರ್ವಜನಿಕ ಪ್ರದೇಶವಲ್ಲ. ನಾವು ತುಂಬ ಜವಾಬ್ದಾರರಾಗಿದ್ದೇವೆ" ಎಂದು ಹೇಳಿಕೊಂಡಿದ್ದಾರೆ.

ತಮಿಳು ನಟಿ ಕೀರ್ತಿ ಬಗ್ಗೆ
ನಟಿ ಕೀರ್ತಿ ಪಾಂಡಿಯನ್ ತಮಿಳು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ತಂದೆ ಅರುಣ್ ಪಾಂಡಿಯನ್ ರಾಜಕಾರಣಿ, ನಿರ್ಮಾಪಕ ಮತ್ತು ನಟರು. ತಮಿಳು ಮಾತ್ರ ವಲ್ಲದೆ ತೆಲುಗು ಮತ್ತು ಕನ್ನಡ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಮಗಳು ಕೀರ್ತಿಗೆ ಕೃಷಿ ಅಂದರೆ ತುಂಬ ಇಷ್ಟವಂತೆ. ಹಾಗಾಗಿ ಲಾಕ್ ಡೌನ್ ಸಮಯವನ್ನು ಹೊಲ ಉಳುಮೆ ಮಾಡಿ ಕೃಷಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.

ಕೀರ್ತಿ ಸಿನಿಮಾಗಳು
ತಂದೆ ಅರುಣ್ ಪಂಡಿಯನ್ ಅವರ ನಿರ್ಮಾಣ ಸಂಸ್ಥೆಯನ್ನು ನೋಡಿಕೊಳ್ಳುತ್ತಿರುವ ಕೀರ್ತಿ ಕಳೆದ ವರ್ಷ ತುಂಬ ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚುವ ಮೂಲಕ ತೆರೆಮೇಲೆ ಮಿಂಚಿದ್ದಾರೆ. ಇನ್ನು ತಮಿಳು ವೆಬ್ ಸಿರೀಸ್ ನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಮಲಯಾಳಂನ ತಮಿಳು ರಿಮೇಕ್ ಹೆಲನ್ ಸಿನಿಮಾದಲ್ಲೂ ಕೀರ್ತಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











