ಮಣಿರತ್ನಂ ಮೆಗಾ ಚಿತ್ರದಿಂದ ಮೂರನೇ ವಿಕೆಟ್ ಪತನ: ಯಾರು ಆ ಸ್ಟಾರ್?
ಮಣಿರತ್ನಂ ನಿರ್ದೇಶನ ಮಾಡಲಿರುವ 'ಪೊನ್ನಿಯನ್ ಸೆಲ್ವನ್' ಸಿನಿಮಾ ಆರಂಭಕ್ಕೂ ಮುನ್ನವೇ ಆಘಾತದ ಮೇಲೆ ಆಘಾತದ ಸುದ್ದಿ ನೀಡುತ್ತಿದೆ. ಸಿನಿಮಾ ಸೆಟ್ಟೇರುವ ಮೊದಲೇ ಸ್ಟಾರ್ ನಟರು ಈ ಪ್ರಾಜೆಕ್ಟ್ ನಿಂದ ಹಿಂದೆ ಸರಿಯುತ್ತಿದ್ದಾರೆ.
ಐತಿಹಾಸಿಕ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಚಿಯಾನ್ ವಿಕ್ರಂ, ಲಾಲ್, ಜಯಂ ರವಿ, ಕಾರ್ತಿ, ಜ್ಯೋತಿಕಾ ಸೇರಿದಂತೆ ಹಲವು ಸೂಪರ್ ಸ್ಟಾರ್ ಗಳು ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆದ್ರೀಗ, ಒಬ್ಬೊಬ್ಬರೆ ಈ ಮೆಗಾ ಚಿತ್ರದಿಂದ ಔಟ್ ಆಗುತ್ತಿರುವುದು ನಿರಾಸೆ ಮೂಡಿಸುತ್ತಿದೆ. ಡೇಟ್ ಸಮಸ್ಯೆಯಿಂದ ತಮಿಳು ನಟ ಪಾರ್ಥಿಬನ್ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದಕ್ಕೂ ಮುಂಚೆ ಅನುಷ್ಕಾ ಶೆಟ್ಟಿ ಕೂಡ ಈ ಚಿತ್ರದಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.

ಇದೀಗ, ಮೂರನೆಯವರಾಗಿ ನಟಿ ಕೀರ್ತಿ ಸುರೇಶ್ ಹೆಸರು ಕೇಳಿ ಬಂದಿದೆ. 'ಪೊನ್ನಿಯನ್ ಸೆಲ್ವನ್' ಚಿತ್ರದಲ್ಲಿ ಕೀರ್ತಿ ಸುರೇಶ್ ಇರುವುದು ಬಹುತೇಕ ಅನುಮಾನ ಎನ್ನಲಾಗಿದೆ. ಬೇರೆ ಚಿತ್ರಗಳಲ್ಲಿ ಬ್ಯುಸಿ ಇರುವ ಕಾರಣ, ಈ ಚಿತ್ರಕ್ಕೆ ಓಕೆ ಎನ್ನುವುದು ಡೌಟ್.
ಈಗಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ಅವರು 164ನೇ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ಕೀರ್ತಿ ಸುರೇಶ್ ಇದನ್ನು ಖಚಿತಪಡಿಸಿದ್ದಾರೆ. ಹಾಗಾಗಿ, ಮಣಿರತ್ನಂ ಸಿನಿಮಾದಲ್ಲಿ ಕೀರ್ತಿ ಇರಲ್ಲ ಎಂಬ ಮಾತು ಚರ್ಚೆಯಾಗ್ತಿದೆ.
ಸದ್ಯಕ್ಕೆ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಐಶ್ವರ್ಯ ರೈ ಮತ್ತು ಲಾಲ್ ಮಾತ್ರ ಪಕ್ಕಾ ಆಗಿದ್ದಾರೆ. ಉಳಿದಂತೆ ಸ್ಟಾರ್ ನಟರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಕಾದುನೋಡಬೇಕಿದೆ.


Click it and Unblock the Notifications











