ಹಸೆಮಣೆ ಏರಲು ಸಜ್ಜಾದ ನಟಿ ಕೀರ್ತಿ ಸುರೇಶ್: ಹುಡುಗ ಯಾರು?

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ, ಮುದ್ದು ಮುಖದ ಚೆಲುವೆ ಕೀರ್ತಿ ಸುರೇಶ್ ಕಡೆಯಿಂದ ಅಭಿಮಾನಿಗಳಿಗೆ ಹಾರ್ಟ್ ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ. ಅದ್ಭುತ ಅಭಿನಯದ ಜೊತೆಗೆ ಸೌಂದರ್ಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ 'ಮಹಾನಟಿ' ಸುಂದರಿ ಹಸೆಮಣೆ ಏರಲು ಸಜ್ಜಾಗಿದ್ದಾರೆ.

Recommended Video

ದರ್ಶನ್ ಹಾಗು ವಿಜಯ್ ಆಗ್ತಾರೆ ಮುಖಾಮುಖಿ

ಹೌದು, ಕೀರ್ತಿ ಸುರೇಶ್ ಮದುವೆ ಆಗುತ್ತಿದ್ದಾರೆ. ಲಕ್ಷಾಂತರ ಯುವಕರ ಕನಸಿನ ಅರಸಿಯಾಗಿದ್ದ ಕೀರ್ತಿ ಮದುವೆ ವಿಚಾರ ಕೇಳಿ ಯುವಕರ ಹಾರ್ಟ್ ಬ್ರೇಕ್ ಆಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ಕೀರ್ತಿ ಇಷ್ಟು ಬೇಗ ಮದುವೆ ಆಗಲು ನಿರ್ಧರಿಸಿದ್ದಾರಾ? ಎನ್ನುವ ಪ್ರಶ್ನೆ ಕೂಡ ಅನೇಕರಿಗೆ ಕಾಡುತ್ತಿದೆ. ಆದರೆ ಕೀರ್ತಿ ಪೋಷಕರು ಮದುವೆ ಮಾಡಲು ನಿರ್ಧರಿಸಿದ್ದಾರಂತೆ. ಮುಂದೆ ಓದಿ..

ಖ್ಯಾತ ಉದ್ಯಮಿ ಕೈ ಹಿಡಿಯಲಿದ್ದಾರೆ ಕೀರ್ತಿ

ಖ್ಯಾತ ಉದ್ಯಮಿ ಕೈ ಹಿಡಿಯಲಿದ್ದಾರೆ ಕೀರ್ತಿ

ಕೀರ್ತಿ ಸುರೇಶ್ ಕೈ ಹಿಡಿಯಲಿರುವ ಹುಡುಗ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಅಂದ್ಹಾಗೆ ಕೀರ್ತಿ ಮದುವೆ ಆಗುವ ಹುಡುಗ ಚಿತ್ರರಂಗಕ್ಕೆ ಸಂಬಂಧಪಟ್ಟವರಲ್ಲ. ತಮಿಳಿನ ಈ ಸುಂದರಿಯನ್ನು ಕೈ ಹಿಡಿಯುತ್ತಿರುವ ಹುಡುಗ ಖ್ಯಾತ ಉದ್ಯಮಿಯಂತೆ. ಆದರೆ ಯಾರು ಆ ಉದ್ಯಮಿ ಎನ್ನುವುದು ಮಾತ್ರ ರಿವೀಲ್ ಆಗಿಲ್ಲ.

ಅರೇಂಜ್ ಮ್ಯಾರೇಜ್ ಆಗಲಿದ್ದಾರೆ ಕೀರ್ತಿ

ಅರೇಂಜ್ ಮ್ಯಾರೇಜ್ ಆಗಲಿದ್ದಾರೆ ಕೀರ್ತಿ

ಕೀರ್ತಿ ಸುರೇಶ್ ಅವರದ್ದು ಅರೇಂಜ್ ಮ್ಯಾರೇಜ್. ಪೋಷಕರು ಹುಡುಕಿದ ಹುಡುಗನನ್ನೇ ಕೀರ್ತಿ ಮದುವೆ ಆಗುತ್ತಾರಂತೆ. ಈಗಾಗಲೆ ಕೀರ್ತಿ ಅವರ ತಂದೆ ಸುರೇಶ್ ಕುಮಾರ್ ಮಗಳಿಗೆ ಹುಡುಗನನ್ನು ಹುಡುಕಿದ್ದಾರಂತೆ. ಸುರೇಶ್ ಕುಮಾರ್ ರಾಜಕೀಯ ವ್ಯಕ್ತಿಗಳ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಹಾಗಾಗಿ ರಾಜಕೀಯ ಸಂಬಂಧ ಹೊಂದಿರುವ ಪ್ರಭಾವಿ ಉದ್ಯಮಿಯ ಜೊತೆ ಮಗಳ ಮದುವೆ ಮಾಡಲು ನಿರ್ಧರಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಪ್ಪ ನೋಡಿದ ಹುಡುಗನನ್ನು ಮದುವೆ ಆಗಲು ಕೀರ್ತಿ ಕೂಡ ಒಪ್ಪಿಕೊಂಡಿದ್ದಾರೆ.

ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ

ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ

ಕೀರ್ತಿ ಸುರೇಶ್ ಮದುವೆ ಬಗ್ಗೆ ಅಧಿಕೃತ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಕೀರ್ತಿ ಸುರೇಶ್ ಆಗಲಿ ಅಥವಾ ಕುಟುಂಬದವರಾಗಲಿ ಮದುವೆ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಮಾತನಾಡಿಲ್ಲ. ಆದರೆ ಮೂಲಗಳ ಪ್ರಕಾರ ಕೀರ್ತಿ ಮದುವೆ ಖ್ಯಾತ ಉದ್ಯಮಿ ಜೊತೆ ನಡೆಯುವುದು ಪಕ್ಕಾ ಎನ್ನುತ್ತಿವೆ.

ರಜನಿಕಾಂತ್ ಸಿನಿಮಾದಲ್ಲಿ ಕೀರ್ತಿ

ರಜನಿಕಾಂತ್ ಸಿನಿಮಾದಲ್ಲಿ ಕೀರ್ತಿ

ಕೀರ್ತಿ ಸುರೇಶ್ ಈಗಾಗಲೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ದೊಡ್ಡ ಮಟ್ಟಕ್ಕೆ ಹೆಸರು ತಂದುಕೊಟ್ಟ ಸಿನಿಮಾ 'ಮಹಾನಟಿ'. ಈ ಚಿತ್ರದಲ್ಲಿ ಕೀರ್ತಿ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಹರಿದು ಬಂದಿವೆ. ಆ ನಂತರ ಕೀರ್ತಿಗೆ ಸಾಕಷ್ಟು ಸಿನಿಮಾ ಆಫರ್ ಗಳು ಬರುತ್ತಿವೆ. ಸದ್ಯ ಕೀರ್ತಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಅನ್ನಾತೆ' ಸಿನಿಮಾದಲ್ಲಿ ಬಣ್ಣಹಚ್ಚುತ್ತಿದ್ದಾರೆ.

More from Filmibeat

English summary
South Indian famous Actress keerthy suresh will get to marry a popular businessman.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X