ಅಬ್ಬಬ್ಬಾ.. ಈ ನಟಿಯ ಹಾಟ್ ಫೋಟೊಗೆ 1000 ರೂ.. ವಿಡಿಯೋ ಕಾಲ್‌ನಲ್ಲಿ ಮಾತನಾಡೋಕೆ 14,000 ರೂ.!
ಸಾಕಷ್ಟು ಜನ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ-ನಟಿಯನ್ನು ಭೇಟಿ ಮಾಡಬೇಕು, ಅವರೊಟ್ಟಿಗೆ ಫೋನ್‌ನಲ್ಲಿ ಮಾತನಾಡಬೇಕು ಎನ್ನುವ ಆಸೆ ಇರುತ್ತದೆ. ಜೈಪುರ ಮೂಲದ ನಟಿ ಕಿರಣ್ ರಾಥೋಡ್ ತಮ್ಮ ಅಭಿಮಾನಿಗಳಿಗಾಗಿ ಸುವರ್ಣಾವಕಾಶ ನೀಡಿದ್ದಾರೆ. ಹಣ ಪಾವತಿಸಿ ಆಕೆ ಜೊತೆ ಫೋನ್‌ನಲ್ಲಿ ಮಾತನಾಡಬಹುದು, ಭೇಟಿ ಮಾಡಬಹುದು, ಇನ್ನು ಹೆಚ್ಚು ಹಣ ಇದ್ದರೆ ಡಿನ್ನರ್ ಪಾರ್ಟಿಗೂ ಹೋಗಬಹುದು.
ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿ ಕಿರಣ್ ರಾಥೋಡ್ ಮಿಂಚಿದ್ದಾರೆ. ಕನ್ನಡ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಕ್ಷಣ ಕ್ಷಣ' ಚಿತ್ರದಲ್ಲಿ ನಟಿಸಿದ್ದರು. ಈಕೆ ಅಭಿನಯಕ್ಕಿಂತ ಜಾಸ್ತಿ ಗ್ಲಾಮರ್ ಡಾಲ್ ಆಗಿ ಕಾಣಿಸಿಕೊಂಡಿರೋದೇ ಹೆಚ್ಚು. 41 ವರ್ಷ ವಯಸ್ಸಿನ ಚೆಲುವೆಗೆ ಇತ್ತೀಚೆಗೆ ಸಿನಿಮಾ ಅವಕಾಶಗಳು ಕಮ್ಮಿ ಆಗಿದೆ. ಹಾಗಾಗಿ ಆಕೆ ಸೋಶಿಯಲ್ ಮೀಡಿಯಾದತ್ತ ಮುಖ ಮಾಡಿದ್ಧಾರೆ.

ಸದಾ ತಮ್ಮ ಗ್ಲಾಮರಸ್ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇಷ್ಟಕ್ಕೆ ಸುಮ್ಮನಾಗದ ಚೆಲುವೆ ಈಗ ಒಂದು ಆಂಡ್ರಾಯ್ಡ್ ಆಪ್ ಕೂಡ ಸಿದ್ಧಪಡಿಸಿದ್ದಾರೆ. ಈ ಆಪ್ ಸಹಾಯದಿಂದ ಅಭಿಮಾನಿಳ ಜೊತೆ ಸಂಪರ್ಕ ಸಾಧಿಸಿದ್ದಾರೆ. ಈ ಆಪ್ ಡೌನ್‌ಲೋನ್ ಮಾಡಿಕೊಳ್ಳಲು 49 ರೂ. ಪಾವತಿಸಬೇಕು. ಆ ಆಪ್ ಮೂಲಕ 1000 ರೂ. ಕಳುಹಿಸಿದರೆ ಆಕೆ 2 ಗ್ಲಾಮರಸ್ ಫೋಟೊಗಳನ್ನು ಕಳುಹಿಸುತ್ತಾರಂತೆ. ಅದೇ ರೀತಿ ಆಕೆ ಜೊತೆ 5 ನಿಮಿಷ ಫೋನ್‌ನಲ್ಲಿ ಮಾತನಾಡಲು 10 ಸಾವಿರ ಕೊಡಬೇಕು.
ಇನ್ನು ವಿಡಿಯೋ ಕಾಲ್‌ನಲ್ಲಿ 15 ನಿಮಿಷ ಮಾತನಾಡಲು 14 ಸಾವಿರ ರೂ, 25 ನಿಮಿಷ ಮಾತನಾಡಲು 25 ಸಾವಿರ ಪಾವತಿಸಬೇಕಂತೆ. ಇನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಆಕೆ ಜತೆ ಡಿನ್ನರ್ ಪಾರ್ಟಿಗೆ ಹೋಗಬೇಕು ಅಂದ್ರೆ 1 ಲಕ್ಷದ 50 ಸಾವಿರ ರೂ. ನೀಡಬೇಕಂತೆ. ಹೀಗೊಂದು ಆಪ್ ಅನ್ನು ನಟಿ ಹೊಂದಿದ್ದಾರೆ. ಕಳೆದ ಹಲವು ದಿನಗಳಿಂದ ಈ ಆಪ್ ಚಾಲ್ತಿಯಲ್ಲಿದೆ. ಈ ಆಪ್ ಪ್ಲೇಸ್ಟೋರ್, ಆಪಲ್ ಆಪ್ ಜೊತೆಗೆ ನಟಿಯ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿರುವ ಲಿಂಕ್ ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಆರ್ಮ್ಸ್ ಪ್ರೈಂ ಮೀಡಿಯಾ ಸಂಸ್ಥೆ ಈ ಅಪ್ಲಿಕೇಶನ್ ಡೆವಲಪ್ ಮಾಡಿ ಕೊಟ್ಟಿದೆ. ಆಪ್ ಡೌನ್‌ಲೋಡ್ ಆಗುತ್ತಿದ್ದಂತೆ ನಟಿಯ ಹೆಚ್‌ಡಿ ಕ್ಲಾಲಿಟಿ ಫೋಟೊಗಳು, ವಿಡಿಯೋಗಳು ಕಾಣಿಸುತ್ತವೆ. ತಿಂಗಳ ಮಟ್ಟಿಗೆ ಫ್ರೀಯಾಗಿ ಇದನ್ನು ಬಳಸಬಹುದು ನಂತರಹ ಹಣ ಪಾವತಿಸಬೇಕು. ಈ ಆಪ್‌ನಲ್ಲಿ ನಟಿಯ ಜೊತೆ ಲೈವ್ ಇಂಟರಾಕ್ಷನ್, ವರ್ಚುವಲ್ ಗಿಫ್ಟ್‌ಗಳನ್ನು ಕಳುಹಿಸಬಹುದು. ವೀಡಿಯೋ ಕಾಲ್‌ಗೆ ಬುಕ್ಕಿಂಗ್ ಮಾಡಿಕೊಳ್ಳಬಹುದು. ಇನ್ನು ಪರ್ಸನಲ್ ವಿಶಸ್ ಕೂಡ ಕೇಳಿ ಪಡೆಯಬಹುದಾಗಿದೆ.
ಇನ್ನು ಪ್ರೀಮಿಯರ್ ಮೆಂಬರ್‌ಶಿಪ್‌ಗಾಗಿ ತಿಂಗಳಿಗೆ 7 ಸಾವಿರ, 3 ತಿಂಗಳಿಗೆ 18 ಸಾವಿರ, 6 ತಿಂಗಳಿಗೆ 33 ಸಾವಿರ ಹೀಗೆ ದೊಡ್ಡ ಮೊತ್ತದ ಹಣ ಪಾವತಿಸಬೇಕು. ಕೆಲ ನಟ- ನಟಿಯರು ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್‌ಗಳು ಇಂತಹ ಆಪ್‌ಗಳನ್ನು ಹೊಂದಿದ್ದಾರೆ. ಕನ್ನಡದ ಮಾಣಿಕ್ಯ, ಗನ್ ಸಿನಿಮಾಗಳಲ್ಲೂ ಕಿರಣ್ ರಾಥೋಡ್ ನಟಿಸಿದ್ದಾರೆ.


Click it and Unblock the Notifications











