ಸೂಪರ್ ಸ್ಟಾರ್ ರಜನಿಕಾಂತ್ ಗೆ ನಾಯಕಿಯಾದ 'ರಣಧೀರ' ಬೆಡಗಿ

ಸೂಪರ್ ಸ್ಟಾರ್ ರಜಿನಿಕಾಂತ್ ಸದ್ಯ ದರ್ಬಾರ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ಮತ್ತು ಒಂದು ಹಾಡು ರಿಲೀಸ್ ಆಗಿದ್ದು ತಲೈವ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ದರ್ಬಾರ್ ರಿಲೀಸ್ ಗೂ ಮುನ್ನವೆ ಸೂಪರ್ ಸ್ಟಾರ್ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ಜೋರಾಗಿದೆ.

ರಜನಿಕಾಂತ್ ಸಿನಿಮಾಗಳ ಜೊತೆಗೆ ರಾಜಕೀಯಕ್ಕೂ ಎಂಟ್ರಿ ಕೊಟ್ಟ ಕಾರಣ ಸಿನಿಮಾ ಮಾಡುತ್ತಾರೋ ಎಲ್ಲವೋ ಎನ್ನುವ ಗೊಂದಲ ಅಭಿಮಾನಿಗಳಲ್ಲಿ ಇದೆ. ಆದರೆ ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಸೂಪರ್ ಸ್ಟಾರ್ ಮುಂದಿನ ಸಿನಿಮಾಗೆ ಈಗಾಗಲೆ ಭರ್ಜರಿ ತಯಾರಿ ನಡೆಯುತ್ತಿದೆ.

ವಿಶೇಷ ಅಂದರೆ ಸೂಪರ್ ಸ್ಟಾರ್ ಗೆ ನಾಯಕಿಯಾಗಿ ಹಿರಿಯ ನಟಿ ಖುಷ್ಬು ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 90ರ ದಶಕದ ಸೂಪರ್ ಹಿಟ್ ಜೋಡಿ ರಜನಿಕಾಂತ್ ಮತ್ತು ಖುಷ್ಬು ಅವರನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ರಾಜಕೀಯದಲ್ಲಿ ಬ್ಯುಸಿ ಇದ್ದ ಖುಷ್ಟೂ ಇತ್ತೀಚಿಗಷ್ಟೆ ಟ್ವಿಟ್ಟರ್ ಖಾತೆ ಡಿಲಿಡ್ ಮಾಡಿ ಸುದ್ದಿಯಾಗಿದ್ದರು. ಈಗ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ.

Actress Kushboo Is Heroine For Super Star Rajinikanth Next Movie

ಇಬ್ಬರ ಕಾಂಬಿನೇಷನ್ ನಲ್ಲಿ ಸಾಕಷ್ಟು ಸಿನಿಮಾಗಳು ಬಂದಿದ್ದು ಅಣ್ಣಾಮಲೈ, ಮನ್ನನ್, ಪಾಂಡಿಯಾನ್, ನಾಟುಕೋರು ನಲ್ಲವನ್ ಮತ್ತು ಧರ್ಮತಿನ್ ತಲೈವಾನ್ ಚಿತ್ರಗಳು ಅಭಿಮಾನಿಗಳ ಮನಗೆದ್ದಿವೆ. ಕಾಲಿವುಡ್ ನ ಹಿಟ್ ಜೋಡಿ ಅಂತಾನೆ ಖ್ಯಾತಿಗಳಿಸಿರುವ ರಜನಿಕಾಂತ್ ಮತ್ತು ಖುಷ್ಬು ಅನೇಕ ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಬರ್ತಿರುವುದನ್ನು ನೋಡಲು ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ.

ಅಂದ್ಹಾಗೆ ರಜನಿಕಾಂತ್ ಮತ್ತು ಖುಷ್ಬು ಚಿತ್ರಕ್ಕೆ ಸದ್ಯ ತಲೈವರ್ 168 ಎಂದು ಹೆಸರಿಡಲಾಗಿದೆ. ಚಿತ್ರಕ್ಕೆ ಸಿರುಥೈ ಶಿವ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಖುಷ್ಬು ಪೂರ್ಣ ಪ್ರಮಾಣದ ನಾಯಕಿಯಾಗಿ ಮಿಂಚಲಿದ್ದಾರೆ. ಆದರೆ ಯಾವ ರೀತಿಯ ಪಾತ್ರ ಎನ್ನುವುದು ಇನ್ನು ರಿವೀಲ್ ಆಗಿಲ್ಲ. ಬಹು ನಿರೀಕ್ಷೆಯ ಸಿನಿಮಾ ಮುಂದಿನ ತಿಂಗಳು ಸೆಟ್ಟೇರಲಿದೆ.

More from Filmibeat

English summary
Senior Actress Kushboo is heroine for Super star Rajinikanth Thalaivar 168 movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X