ಅಯ್ಯೋ..'ರಣಧೀರ' ಸುಂದರಿ ಖುಷ್ಬೂ ಯಾಕೆ ಹೀಗಾಗಿದ್ದಾರೆ?
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಖುಷ್ಬೂ ಸದ್ಯ ನಟನೆ ಜೊತೆಗೆ ರಾಜಕೀಯದಲ್ಲಿಯೂ ಬ್ಯುಸಿಯಾಗಿದ್ದಾರೆ. ದೊಡ್ಡಪರದೆಯಿಂದ ಈಗ ಕಿರುತೆರೆಗೆ ಕಾಲಿಟ್ಟಿರುವ ಖುಷ್ಬೂ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದಾರೆ. 90ರ ದಶಕದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದ ಖುಷ್ಬೂ ರಣಧೀರ ಸಿನಿಮಾ ಮೂಲಕ ಕನ್ನಡ ಸಿನಿಪ್ರಿಯರಿಗೆ ಪರಿಚಿತರಾಗಿದ್ದಾರೆ.
Recommended Video
ದಕ್ಷಿಣ ಭಾರತೀಯ ಎಲ್ಲಾ ಭಾಷೆಯಲ್ಲಿಯೂ ಅಭಿನಯಿಸಿರುವ ಖುಷ್ಬೂ ಕನ್ನಡದಲ್ಲಿ ಕೊನೆಯದಾಗಿ 2005ರಲ್ಲಿ ರಿಲೀಸ್ ಆದ ಮ್ಯಾಜಿಕ್ ಅಜ್ಜಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಆ ನಂತರ ಜನನಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, ಬಳಿಕ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ ಖುಷ್ಬೂ. ಆದರೆ ಕಿರುತೆರೆ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಇದೀಗ ಖುಷ್ಬೂ ಅದ್ಭುತ ರೂಪಾಂತರದ ಮೂಲಕ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಖುಷ್ಬೂ, ಇತ್ತೀಚಿಗೆ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಫೋಟೋವೀಗ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.

ಅಷ್ಟಕ್ಕೂ ಆ ಫೋಟೋದಲ್ಲಿ ಖುಷ್ಬೂ ಪುರುಷ ಅವತಾರತಾಳಿದ್ದಾರೆ. ಫೇಸ್ ಆಪ್ ಮೂಲಕ ತನ್ನ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಖುಷ್ಬೂ ಫೋಟೋಗೆ ಅಭಿಮಾನಿಗಳಿಂದ ತರಹೇವಾರಿ ಕಾಮೆಂಟ್ ಗಳು ಹರಿದುಬರುತ್ತಿವೆ.
ಇದು ನಿಜನಾ ಎಂದು ಅನೇಕರು ಅಚ್ಚರಿ ಪಡುತ್ತಿದ್ದಾರೆ. ಇನ್ನೂ ಕೆಲವರು ಪುರುಷ ಖುಷ್ಬೂ ಸುಂದರವಾಗಿ ಕಾಣಿಸುತ್ತಾರೆ ಎಂದು ಹೇಳುತ್ತಿದ್ದಾರೆ. ನಟಿ ಖುಷ್ಬೂ ಪೋಟೋ ಶೇರ್ ಮಾಡಿ "ನಾನು ಪುರುಷನಾಗಿದ್ದರೆ...ನಿಜಕ್ಕು ಕೆಟ್ಟದಾಗಿಲ್ಲ" ಎಂದು ಬರೆದುಕೊಂಡಿದ್ದಾರೆ.

ಖುಷ್ಬೂ ಫೋಟೋಗೆ ನೆಟ್ಟಿಗರು ಹುಡುಗಿಯ ಫೋಟೋ ಶೇರ್ ಮಾಡಿ 'ಈ ಹುಡುಗಿ ನಿಮಗೆ ಖಂಡಿತಾ ಬೀಳುತ್ತಾಳೆ' ಎನ್ನುತ್ತಿದ್ದಾರೆ. ಇನ್ನೂ ಕೆಲವರು ಆಮೀರ್ ಖಾನ್ ಫೋಟೋ ಶೇರ್ ಮಾಡಿ ಆಮೀರ್ ಖಾನ್ ಹಾಗೆ ಕಾಣುತ್ತೀರಿ ಎನ್ನುತ್ತಿದ್ದಾರೆ. ಖುಷ್ಬೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications











