ನಯನ್ ತಾರ ಹುಟ್ಟುಹಬ್ಬ- ಭಾವಿ ಪತಿ ನೀಡಿದ ವಿಶೇಷ ಉಡುಗೊರೆ!
ಲೇಡಿ ಸೂಪರ್ ಸ್ಟಾರ್ ನಟಿ ನಯನ್‌ತಾರಗೆ ಹುಟ್ಟುಹಬ್ಬದ ಸಂಭ್ರಮ. ಈ ಹುಟ್ಟುಹಬ್ಬದೊಂದಿಗೆ ನಯನ್ ತಾರ 37 ನೇ ವರ್ಷಕ್ಕೆ ಕಾಲಿಡುತ್ತಾರೆ. ಈ ವರ್ಷವೂ ನಯನತಾರಾ ತಮ್ಮ ಹುಟ್ಟುಹಬ್ಬವನ್ನು ಭಾವಿ ಪತಿಯೊಂದಿಗೆ ಅಚರಿಸಿಕೊಂಡಿದ್ದಾರೆ.
ಮತ್ತೊಂದು ಕಡೆ ನಯನ್ ತಾರ ಅವರಿಗೆ ಸಿನಿಮಾ ರಂಗದ ಸ್ನೇಹಿತರಿಂದ ಹುಟ್ಟುಹಬ್ಬ ಶುಭಾಷಯಗಳ ಹರಿದು ಬರುತ್ತಿವೆ. ಜೊತೆಗ ಆಕೆಯ ಅಭಿಮಾನಿಗಳು ಕೂಡ ಸಾಮಾಜಿಕಜಾಲ ತಾಣದಲ್ಲಿ ಶುಭಾಶಯಗಳನ್ನು ಕೋರುತ್ತಿದ್ದಾರೆ.
ನಯನ್ ತಾರ ಭಾವಿ ಪತಿ ನಿರ್ಮಾಪಕ ವಿಘ್ನೇಶ್ ಶಿವನ್ ಅವರೊಂದಿಗೆ ನಯನ್ ತಾರ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಯನ್ ತಾರ ಅವರಿಗಾಗಿ ವಿಘ್ನೇಶ್ ಶಿವನ್ ವಿಶೇಷವಾದ ಕೇಕ್ ಕತ್ತರಿಸಿ ಶುಭ ಕೋರಿದ್ದಾರೆ.
ಭಾವಿ ಪತಿಯೊಂದಿಗೆ ಕೇಕ್ ಕಟ್ ಮಾಡಿದ ನಯನ್ ತಾರ!
ಆಕೆಯ ಹುಟ್ಟು ಹಬ್ಬದ ಸಂಭ್ರಮಾಚರಣೆಯ ಫೊಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ. ನಯನ್‌ತಾರಾ ತನ್ನ ಹುಟ್ಟುಹಬ್ಬದ ಕೇಕ್ ಅನ್ನು ಕತ್ತರಿಸುವಾಗ ಹಳದಿ ಟಾಪ್ ಮತ್ತು ನೀಲಿ ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಘ್ನೇಶ್ ಅವರು ನಯನ್‌ತಾರ ಅವರನ್ನು ತಬ್ಬಿ ಕೊಂಡು ಶುಭಕೋರಿದ್ದಾರೆ. ನಯನ್ ತಾರಾ ಅವರ ಹುಟ್ಟು ಹಬ್ಬದ ಕೇಕ್‌ಗಳನ್ನು ಕಟ್ ಮಾಡುವಾಗ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾವಿ ಪತ್ನಿಗೆ ವಿಶೇಷವಾಗಿ ಶುಭಕೋರಿದ ವಿಘ್ನೇಶ್ ಶಿವನ್!
ನಯನತಾರಾ ಅವರ ಹುಟ್ಟುಹಬ್ಬ ಸಂಭ್ರಮದಲ್ಲಿ ವಿಘ್ನೇಶ್ ಅವರ ಮುಂಬರುವ ಚಿತ್ರ ಕಾತುವಾಕುಲಾ ಎಂಡು ಕಾದಲ್ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್‌ರನ್ನು ವಿಘ್ನೇಶ್ ಶಿವನ್ ಹಂಚಿಕೊಂಡಿದ್ದಾರೆ.
ಪೋಸ್ಟರ್‌ನಲ್ಲಿ ನಯನ್ ತಾರ ಅವರಿಗೆ ಶುಭಾಷಯ ತಿಳಿಸಿದ್ದಾರೆ. "ಜನ್ಮದಿನದ ಶುಭಾಶಯಗಳು ಕಣ್ಮಣಿ, ತಂಗಮೇಯ್. ನಿನ್ನೊಂದಿಗೆ ಜೀವನವು ಪ್ರೀತಿ ಮತ್ತು ವಾತ್ಸಲ್ಯದಿಂದ ಪರಿಪೂರ್ಣತೆಗೆ ತುಂಬಿದೆ. ನೀನು ಎಂದೆಂದಿಗೂ ಖುಷಿಯಾಗಿ ಇರಲು ದೇವರು ನಿಮ್ಮನ್ನು ಆಶೀರ್ವದಿಸಲಿ". ಎಂದು ಬರೆದು ಕೊಂಡಿದ್ದಾರೆ.

ಮದುವೆ ತಯಾರಿಯಲ್ಲಿ ನಯನ್ ತಾರ- ವಿಘ್ನೇಶ್ ಶಿವನ್!
ವಿಘ್ನೇಶ್ ಶಿವನ್ ಮತ್ತು ನಯನತಾರಾ ಕಳೆದ ಕೆಲವು ವರ್ಷಗಳಿಂದ ಒಟ್ಟಿಗೆ ಇದ್ದಾರೆ. ಇದೇ ವರ್ಷದ ಆರಂಭದಲ್ಲಿ ನಯನ್‌ತಾರಾ ತನ್ನ ನಿಶ್ಚಿತಾರ್ಥ ಉಂಗುರದ ಬಗ್ಗೆ ಮಾತನಾಡಿದ್ದರು. ಉಂಗುರದ ಬಗ್ಗೆ ಕೇಳಿದಾಗ ನಟಿ ನಯನ್ ತಾರ "ಇದು ನಿಶ್ಚಿತಾರ್ಥದ ಉಂಗುರ." ಎಂದು ಹೇಳಿಕೊಂಡಿದ್ದರು. ಆಗಲೇ ಈ ಜೋಡಿ ನಿಶ್ಚಿತಾರ್ಥ ಅಗಿದೆ ಎನ್ನುವುದು ಬೆಳಕಿದೆ ಬಂತು. ಸದ್ಯ ಈ ಜೋಡಿ ಮದುವೆಗೆ ಸಜ್ಜಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ನಯನ್‌ತಾರ ಸಿನಿಮಾಗಳ ಪೋಸ್ಟರ್ ರಿಲೀಸ್!
ನಯನತಾರಾ ರಜನಿಕಾಂತ್ ಜೊತೆಗೆ ಅಣ್ಣಾತೆ ಚಿತ್ರದಲ್ಲಿ ಅಭಿನಯಿಸಿದ್ದು, ಇದು ಇತ್ತೀಚೆಗೆ ರಿಲೀಸ್ ಆಗಿದೆ. ಅದಕ್ಕೂ ಮೊದಲು ಕೊರಿಯನ್‌ನ ಬ್ಲೈಂಡ್ ಚಿತ್ರದ ರಿಮೇಕ್ ನೆಟ್ರಿಕನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಗಾಡ್ ಫಾದರ್ ಮತ್ತು ಕನೆಕ್ಟ್ ಚಿತ್ರದ ಪೋಸ್ಟರ್‌ಗಳು ರಿಲೀಸ್ ಆಗಿದ್ದು, ನಯನ್ ತಾರ ಪಾತ್ರದ ಬಗ್ಗೆ ಕುತೂಹಲ ಮೂಡಿಸಿವೆ.


Click it and Unblock the Notifications











