For Quick Alerts
  ALLOW NOTIFICATIONS  
  For Daily Alerts

  ಮಹಾಲಕ್ಷ್ಮಿ- ರವೀಂದ್ರ ಮದುವೆ ಟ್ರೋಲ್, ಪತಿಯ ಬಗ್ಗೆ ನಟಿಯ ಹೊಸ ಪೋಸ್ಟ್ ವೈರಲ್!

  |

  ಸೆಪ್ಟೆಂಬರ್ 01 ರಂದು ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ವಿವಾಹ ನೆರವೇರಿದೆ. ಮದುವೆಯ ಫೋಟೊಗಳನ್ನು ನಟಿ ಮಹಾಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಇವರು ಫೊಟೋಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು.

  ಈ ಮದುವೆ ಸುದ್ದಿ ನಿಜವೋ, ಅಥವಾ ಯಾವುದಾದರೂ ಸಿನಿಮಾ, ಸೀರಿಯಲ್ ಗಾಗಿ ಆದ ಮದುವೆಯೋ ಎಂದು ಅಚ್ಚರಿ ವ್ಯಕ್ತಪಡಿಸಿದರು. ಇವರ ಮದುವೆಯ ಸುದ್ದಿಯನ್ನು ಅಷ್ಟು ಸುಲಭಕ್ಕೆ ಯಾರೂ ನಂಬಲು ತಯಾರಿರಲಿಲ್ಲ. ಇದಕ್ಕೆ ಕಾರಣ ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಭಾರಿ ಧಡೂತಿ ವ್ಯಕ್ತಿ. ನಟಿ ಮಹಾಲಕ್ಷ್ಮಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ದಪ್ಪ ಇದ್ದಾರೆ ರವೀಂದ್ರ.

  ದಳಪತಿ ವಿಜಯ್‌ ಅವರಲ್ಲಿ ನನಗೆ ಈ ವಿಷಯ ತುಂಬಾ ಇಷ್ಟ ಎಂದು ಹೊಗಳದ ಚಿಯಾನ್ ವಿಕ್ರಮ್!ದಳಪತಿ ವಿಜಯ್‌ ಅವರಲ್ಲಿ ನನಗೆ ಈ ವಿಷಯ ತುಂಬಾ ಇಷ್ಟ ಎಂದು ಹೊಗಳದ ಚಿಯಾನ್ ವಿಕ್ರಮ್!

  ಹೀಗಿದ್ದಾಗಿಯೂ ಮಹಾಲಕ್ಷ್ಮಿ ಹೇಗೆ ಮದುವೆಗೆ ಒಪ್ಪಿಕೊಂಡರು ಎನ್ನುವ ಚರ್ಚೆ ಶುರುವಾತಿತ್ತು. ಆದರೆ ಈ ಜೋಡಿ ಮದುಗೆ ಆಗಿದ್ದು ನಿಜ. ಈಗ ಮದುವೆಯ ಬಳಿಕ ಪತಿಯ ಬಗ್ಗೆ ಮಹಾಲಕ್ಷ್ಮಿ ಪ್ರೀತಿಯ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ಟ್ರೋಲ್ ಆದ ಮಹಾಲಕ್ಷ್ಮಿ, ರವೀಂದ್ರ ವಿವಾಹ!

  ಟ್ರೋಲ್ ಆದ ಮಹಾಲಕ್ಷ್ಮಿ, ರವೀಂದ್ರ ವಿವಾಹ!

  ತಿರುಪತಿಯಲ್ಲಿ ಮಹಾಲಕ್ಷ್ಮಿ ಹಾಗೂ ರವೀಂದ್ರ ವಿವಾಹ ನಡೆದಿದೆ. ಇಬ್ಬರಿಗೂ ಇದು ಎರಡನೇ ಮದುವೆ.

  ನಟಿ ಮಹಾಲಕ್ಷ್ಮಿ ಸುಂದರವಾಗಿ, ಗ್ಲಾಮರಸ್ಸಾಗಿ ಇದ್ದಾರೆ. ಅದರೆ ನಿರ್ಮಾಪಕ ರವೀಂದ್ರ ಧಡೂತಿಯಾಗಿದ್ದಾರೆ. ಹಾಗಾಗಿ ಇವರ ಜೋಡಿ ನೋಡುವ ಜನರಿಗೆ ಒಪ್ಪಿಯಾಗಿಲ್ಲ. ಹಾಗಾಗಿ ಈ ಜೋಡಿ ಟ್ರೋಲ್‌ಗೂ ತುತ್ತಾಗಿದೆ. ನಟಿಯ ಆಯ್ಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಾಲಕ್ಷ್ಮಿ ಹಣಕ್ಕಾಗಿ ವಿವಾಹವಾಗಿದ್ದಾರೆ ಎಂದೆಲ್ಲ ಟ್ರೋಲ್ ಮಾಡಲಾಗುತ್ತಿದೆ. ಪ್ರೀತಿಗೆ ಕಣ್ಣಿಲ್ಲ ಎನ್ನುವುದು ನಿಜವೇ ಆಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು.

  ಪತಿಗೆ ಮಹಾಲಕ್ಷ್ಮಿ ಪ್ರೀತಿಯ ಸಂದೇಶ!

  ಪತಿಗೆ ಮಹಾಲಕ್ಷ್ಮಿ ಪ್ರೀತಿಯ ಸಂದೇಶ!

  ಮದುವೆ ನಂತರ ಫೋಟೋಗಳನ್ನು ಹಂಚಿಕೊಂಡಿರುವ ನಟಿ ಮಹಾಲಕ್ಷ್ಮಿ ''ಜೀವನ ಸುಂದರವಾಗಿದೆ, ಇದನ್ನು ನನ್ನ ಪತಿ ರವೀಂದ್ರ ಮಾಡಿದ್ದಾರೆ, ನೀನು ನನ್ನ ಹೃದಯವನ್ನು ಕದ್ದೀದ್ದೀಯಾ ಹುಷಾರಾಗಿ ಇಟ್ಟುಕೋ'' ಎಂದು ತಮ್ಮ ಎರಡು ಪೋಸ್ಟ್‌ಗಳಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಹಲವರು ಇಬ್ಬರಿಗೂ ಶುಭಾಶಯ ಕೋರಿದ್ದಾರೆ. ಕೆಲವರು ಮತ್ತೆ ಕಾಳೆದಿದ್ದಾರೆ.

  ಸೀರಿಯಲ್‌ನಲ್ಲಿ ಮಹಾಲಕ್ಷ್ಮಿ ಫೇಮಸ್!

  ಸೀರಿಯಲ್‌ನಲ್ಲಿ ಮಹಾಲಕ್ಷ್ಮಿ ಫೇಮಸ್!

  ಮಹಾಲಕ್ಷ್ಮೀ, ತಮಿಳು ಧಾರಾವಾಹಿ ಕ್ಷೇತ್ರದಲ್ಲಿ ಚಿರಪರಿಚಿತರು. ಹಲವು ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯ ಮಹಾಲಕ್ಷ್ಮಿ ನಟನೆಯ 'ಮಹಾರಸಿ' ಧಾರಾವಾಹಿ ಪ್ರಸಾರ ಆಗುತ್ತಿದೆ. ರವೀಂದ್ರ ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ರವೀಂದ್ರ ನಿರ್ಮಿಸಿರುವ 'ವಿಡಿಯುಂ ವಾರೈ ಕಾಥಿರು' ಸಿನಿಮಾದಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ.

  English summary
  Actress Mahalakshmi Producer Ravindar Chandrasekaran Wedding Troll, She Share New Massage, Know More Details,
  Saturday, September 3, 2022, 18:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X