twitter
    For Quick Alerts
    ALLOW NOTIFICATIONS  
    For Daily Alerts

    ನಟಿ ಮೀನಾ ಪತಿಯ ಸಾವಿಗೆ ಕಾರಣ ಇದೇನೆ: ಇನ್ಯಾರಿಗೂ ಈ ರೀತಿ ಆಗಬಾರದು!

    |

    ಕೆಲವೇ ದಿನ ಹಿಂದೆ ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ನಿಧನರಾಗಿದ್ದರು. ಪೋಸ್ಟ್ ಕೊವಿಡ್ ಸಮಸ್ಯೆಗಳಿಂದ ಚೇತರಿಸಿಕೊಳ್ಳಲಾಗದೇ ಬೆಂಗಳೂರು ಮೂಲದ ವಿದ್ಯಾಸಾಗರ್ ಕೊನೆಯುಸಿರೆಳೆದಿದ್ದರು. ನಿಧಾನವಾಗಿ ಪತಿಯ ಅಗಲಿಕೆಯ ನೋವಿನಿಂದ ಹೊರ ಬರುತ್ತಿರುವ ನಟಿ ಮೀನಾ ಈಗ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

    ಪತಿ ಅಗಲಿಕೆಯ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ಮನೆಯಲ್ಲಿ ಉಳಿದ ಮೀನಾ ನಿಧಾನವಾಗಿ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ರಂಭಾ, ಸಾಂಘವಿ ಸೇರಿದಂತೆ ಚಿತ್ರರಂಗದ ಸ್ನೇಹಿತೆಯರು ಮೀನಾ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಅದಕ್ಕೆ ಸಂಬಂಧಿಸಿದ್ದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ನಟ ಕಿರೀಟಿ ರಾಜೇಂದ್ರ ಪ್ರಸಾದ್ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು.

    ಜೂನ್ 27ರಂದು ಮೀನಾ ಪತಿ ವಿದ್ಯಾಸಾಗರ್ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದರು. ಆಸ್ಪತ್ರೆ ಮೂಲಗಳ ಪ್ರಕಾರ ವಿದ್ಯಾಸಾಗರ್ ಕೆಲವು ವರ್ಷಗಳಿಂದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿತ್ತು. ಜನವರಿಯಲ್ಲಿ ಕುಟುಂಬ ಸದಸ್ಯರಿಗೆ ಕೊರೊನಾ ಸೋಂಕು ತಗುಲಿತ್ತು. ಈ ವೇಳೆ ಸೋಂಕು ಉಲ್ಬಣಗೊಂಡಿದ್ದರೂ ವಿದ್ಯಾಸಾಗರ್ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದರು. ನಂತರ ಸೋಂಕು ಮತ್ತೆ ಕಾಣಿಸಿಕೊಂಡು ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ ವಿದ್ಯಾಸಾಗರ್ ಅವರಿಗೆ ಶ್ವಾಸಕೋಶದ ಸೋಂಕಿನ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಆದರೆ ಕಸಿ ಮಾಡಿಸಿಕೊಳ್ಳಲು ದಾನಿಗಳು ಸರಿಯಾಗಿ ಸಿಗದ ಕಾರಣ ವಿದ್ಯಾಸಾಗರ್‌ ಕೊನೆಯುಸಿರೆಳೆದಿದ್ದರು.

     ಅಂಗಾಂಗ ದಾನಕ್ಕೆ ಮುಂದಾದ ಮೀನಾ

    ಅಂಗಾಂಗ ದಾನಕ್ಕೆ ಮುಂದಾದ ಮೀನಾ

    ಪತಿಯ ಅಗಲಿಕೆಯ ನಂತರ ನಟಿ ಮೀನಾ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇಂದು ಮಹತ್ವದ ನಿರ್ಧಾರದ ಬಗ್ಗೆ ಪೋಸ್ಟ್ ಮಾಡಿದ್ದಾರೆ. ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ(ಆಗಸ್ಟ್ 13) ನಟಿ ಮೀನಾ ತಮ್ಮ ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. 'ಜೀವ ಉಳಿಸುವುದಕ್ಕಿಂತ ಮಹತ್ತರವಾದದ್ದು ಮತ್ತೊಂದಿಲ್ಲ, ಅಂಗಾಂಗ ದಾನ ಜೀವ ಉಳಿಸಲು ಬಹಳ ಮುಖ್ಯವಾದ ಮಾರ್ಗ' ಎಂದು ಮೀನಾ ಪೋಸ್ಟ್ ಮಾಡಿದ್ದಾರೆ.

    ನನ್ನ ಪತಿ ಸಾಗರ್‌ಗೆ ದಾನಿಗಳು ಸಿಗಲಿಲ್ಲ- ಮೀನಾ

    ನನ್ನ ಪತಿ ಸಾಗರ್‌ಗೆ ದಾನಿಗಳು ಸಿಗಲಿಲ್ಲ- ಮೀನಾ

    "ಅನಾರೋಗ್ಯದಿಂದ ಕಷ್ಟಪಡುತ್ತಿರುವವರಿಗೆ, ಅವಶ್ಯಕತೆ ಇರುವವರಿಗೆ ಅಂಗಾಂಗ ದಾನ ಮಾಡುವುದರಿಂದ ಅವರ ಕುಟುಂಬದಲ್ಲಾಗುವ ಬದಲಾವಣೆಯನ್ನು ನಾನು ಕಣ್ಣಾರೆ ನೋಡಿದ್ದೇನೆ. ನನ್ನ ಸಾಗರ್‌ಗೆ ದಾನಿಗಳು ಸಿಕ್ಕಿದ್ದರೆ ನನ್ನ ಜೀವನ ಮತ್ತೊಂದು ರೀತಿ ಇರುತ್ತಿತ್ತು. ಒಬ್ಬ ಅಂಗಾಂಗ ದಾನಿ 8 ಜೀವಗಳನ್ನು ಉಳಿಸಬಹುದು. ಅಂಗಾಂಗ ದಾನದ ಮಹತ್ವವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಅಂಗಾಂಗ ದಾನ ಕೇವಲ ವೈದ್ಯರು ಮತ್ತು ರೋಗಿಗಳ ನಡುವಿನ ಸಂಬಂಧವಲ್ಲ. ಸ್ನೇಹಿತರು ಮತ್ತು ಕುಟುಂಬವು ಎಲ್ಲರಿಗೂ ಸಂಬಂಧಿಸಿದ್ದು. ನಾನು ನನ್ನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದೇನೆ' ಎಂದು ಭಾವುಕವಾಗಿ ಪೋಸ್ಟ್ ಮಾಡಿದ್ದಾರೆ.

    ಮೀನಾ ನಿರ್ಧಾರಕ್ಕೆ ಮೆಚ್ಚುಗೆ

    ಮೀನಾ ನಿರ್ಧಾರಕ್ಕೆ ಮೆಚ್ಚುಗೆ

    ಅಂಗಾಂಗ ದಾನ ಮಾಡಲು ಹೆಸರು ನೋಂದಣಿ ಮಾಡಿಕೊಂಡಿರುವ ನಟಿ ಮೀನಾ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯವಾಗಿ ಜನ ಅಂಗಾಂಗ ದಾನಕ್ಕೆ ಮುಂದಾಗುವುದಿಲ್ಲ. ಅದರಲ್ಲೂ ಸೆಲೆಬ್ರೆಟಿಗಳು ಈ ವಿಚಾರದಲ್ಲಿ ಹಿಂದೇಟು ಹಾಕುವುದೇ ಹೆಚ್ಚು. ಮೀನಾ ಅವರ ಈ ನಿರ್ಧಾರದ ಹಿಂದೆ ಆಕೆಯ ಪತಿಯ ಮರಣವೂ ಕಾರಣ ಅನ್ನುವುದು ಗೊತ್ತಾಗುತ್ತಿದೆ. ಇನ್ನು ಕೆಲವರು ನಾವು ಕೂಡ ಅಂಗಾಂಗ ದಾನಕ್ಕೆ ಒಪ್ಪಿ ಹೆಸರು ನೋಂದಣಿ ಮಾಡಿಸುತ್ತೇವೆ ಎಂದು ಕಾಮೆಂಟ್ ಬಾಕ್ಸ್‌ನಲ್ಲಿ ಹೇಳುತ್ತಿದ್ದಾರೆ.

     ವಿದ್ಯಾ ಸಾಗರ್ ಸಾವಿಗೆ ಪಾರಿವಾಳದ ಹಿಕ್ಕೆ ಕಾರಣ?

    ವಿದ್ಯಾ ಸಾಗರ್ ಸಾವಿಗೆ ಪಾರಿವಾಳದ ಹಿಕ್ಕೆ ಕಾರಣ?

    ಖ್ಯಾತ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಸಾವಿನ ಬಗ್ಗೆ ನಾನಾ ಬಗೆಯ ಚರ್ಚೆಗಳು ನಡೆದಿತ್ತು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ವಿದ್ಯಾಸಾಗರ್‌ ಅವರಿಗೆ ಪಾರಿವಾಳದ ಹಿಕ್ಕೆ ಯಿಂದ ಬರುತ್ತಿದ್ದ ದುರ್ವಾಸನೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲವಂತೆ. ಇದರಿಂದ ಅವರಿಗೆ ಅಲರ್ಜಿ ಜಾಸ್ತಿ ಆಗಿತ್ತು ಅನ್ನುವ ವಿಚಾರಗಳು ಚರ್ಚೆ ಆಗಿತ್ತು. ಇನ್ನು ವಿದ್ಯಾಸಾಗರ್ ಅವರು ಬರೆದಿದ್ದಾರೆ ಎನ್ನಲಾಗಿದ್ದ ವಿಲ್ ಬಗ್ಗೆಯೂ ಸಾಕಷ್ಟು ಗುಸುಗುಸು ಕೇಳಿಬಂದಿತ್ತು. ಮೀನಾಗೆ ನೈನಿಕಾ ಎಂಬ ಪುತ್ರಿ ಸಹ ಇದ್ದಾರೆ. ಆಕೆ ಕೂಡ ಬಾಲನಟಿಯಾಗಿ ಬಣ್ಣ ಹಚ್ಚಿದ್ದಾಳೆ.

    English summary
    Actress Meena Decides to Donate Her Organs After Her Husband's Death. Know More.
    Sunday, August 14, 2022, 19:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X