Meena: 2ನೇ ಮದುವೆ ಆಗುವಂತೆ ಮೀನಾಗೆ ಆಪ್ತ ಸ್ನೇಹಿತೆ ಸಲಹೆ: ಆಕೆಯ ಪ್ರತಿಕ್ರಿಯೆ ಹೇಗಿತ್ತು?

ತಮಿಳು ನಟಿ ಮೀನಾ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಪಂಚಭಾಷಾ ತಾರೆಯಾಗಿ ಮಿಂಚಿದ ಮೀನಾ ಬೆಂಗಳೂರು ಮೂಲದ ವಿದ್ಯಾಸಾಗರ್ ಎಂಬುವವರ ಕೈ ಹಿಡಿದಿದ್ದರು. ಆದರೆ ಕಳೆದ ವರ್ಷ ಮೀನಾ ಪತಿ ವಿದ್ಯಾ ಸಾಗರ್ ಹಠಾತ್ ನಿಧನರಾಗಿದ್ದರು.

ಪತಿಯ ಅಗಲಿಕೆ ಬಳಿ ಮೀನಾ ಎರಡನೇ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಯಿತು. ಮೀನಾ ಹಾಗೂ ತಮಿಳು ನಟ ಧನುಷ್ ಮದುವೆ ಆಗುತ್ತಾರೆ ಎನ್ನುವ ಊಹಾಪೋಹ ಕೂಡ ಶುರುವಾಯಿತು. ಆದರೆ ಅದೆಲ್ಲಾ ಕೇವಲ ವದಂತಿ ಎನ್ನುವುದು ಬಳಿಕ ಗೊತ್ತಾಯಿತು. ಸದ್ಯ ಮಗಳೊಟ್ಟಿಗೆ ಮೀನಾ ಏಕಾಂಗಿಯಾಗಿ ಕಾಲ ಜೀವನ ಸಾಗಿಸುತ್ತಿದ್ದಾರೆ.

Kala-about-meena-second-marriage

ಮೀನಾ ಪುತ್ರಿ ನೈನಿಕಾ ಕೂಡ ತಮಿಳು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾಳೆ. ಪತಿಯನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿದ್ದ ನಟಿ ಮೀನಾ ಇದೀಗ ನಿಧಾನವಾಗಿ ಸಹಜ ಸ್ಥಿತಿಗೆ ಮರಳಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ. ಇತ್ತೀಚೆಗೆ ಸ್ನೇಹಿತರ ಜೊತೆ ವಿದೇಶ ಪ್ರವಾಸಕ್ಕೂ ಹೋಗಿ ಬಂದಿದ್ದರು. ಸದ್ಯ ಮಲಯಾಳಂ ಚಿತ್ರವೊಂದಲ್ಲಿ ಬಣ್ಣ ಹಚ್ಚಿದ್ದಾರೆ.

ಎರಡನೇ ಮದುವೆ ಆಗುವಂತೆ ಕೆಲ ಆಪ್ತರು ಕೂಡ ಮೀನಾಗೆ ಸಲಹೆ ನೀಡಿದ್ದಾರೆ. ಅದಕ್ಕೆ ಆಕೆಯ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರವನ್ನು ಖ್ಯಾತ ಡ್ಯಾನ್ಸ್ ಕೊರೊಯೋಗ್ರಫರ್ ಕಲಾ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ಮಾತುಗಳು ಈಗ ವೈರಲ್ ಆಗುತ್ತಿದೆ.

ಡ್ಯಾನ್ಸ್ ಮಾಸ್ಟರ್ ಕಲಾ ಹಾಗೂ ಮೀನಾ ಕಳೆದ 25 ವರ್ಷಗಳಿಂದ ಸ್ನೇಹಿತರು. ಆಗಾಗ್ಗೆ ಭೇಟಿ ಆಗುತ್ತಿರುತ್ತಾರೆ. ಪತಿ ತೀರಿಕೊಂಡಾಗಲೂ ಮೀನಾಗೆ ಕಲಾ ಬೆಂಬಲ ನಿಂತಿದ್ದರು. ಇತ್ತೀಚೆಗಷ್ಟೇ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಆಕೆ ಈ ವಿಚಾರ ಬಹಿರಂಗಪಡಿಸಿದ್ದಾರೆ. ವಿದ್ಯಾ ಸಾಗರ್ ಆಸ್ಪತ್ರೆಯಲ್ಲಿದ್ದಾಗಲೂ ಮೀನಾ ಜೊತೆ ಕಲಾ ಆಸ್ಪತ್ರೆಯಲ್ಲಿ ಇದ್ದರಂತೆ. ಇದು ತುಂಬಲಾಗದ ನಷ್ಟ ಎಂದು ಆಕೆ ಬೇಸರ ವ್ಯಕ್ತಪಡಿಸಿದ್ದಾರೆ.

Kala-about-meena-second-marriage

ನಟಿ ಮೀನಾ ಪತಿಯ ಅಗಲಿಕೆ ನೋವಿನಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಆಕೆ ಬಳಿ ಕಲಾ 2ನೇ ಮದುವೆ ವಿಷಯ ಪ್ರಸ್ತಾಪಿಸಿದ್ದರಂತೆ. ಅದಕ್ಕೆ ಒಪ್ಪದ ಮೀನಾ ಬಹಳ ಗರಂ ಆಗಿ ಅಂತಹ ವಿಚಾರ ಮಾತನಾಡದಂತೆ ತಾಕೀತು ಮಾಡಿದ್ದರಂತೆ. ಇದೆಲ್ಲ ನಿನಗೆ ಬೇಡವಾದ ವಿಚಾರ, ಮಾತನಾಡಬೇಡ ಎಂದು ಅಸಮಾಧಾನ ಹೊರ ಹಾಕಿದ್ದರಂತೆ. ನನಗೆ ಒಬ್ಬಳು ಮಗಳು ಇದ್ದಾಳೆ. ಅವಳ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ಮಗಳನ್ನು ನೋಡಿಕೊಂಡು ಜೀವನ ಸಾಗಿಸುತ್ತೇನೆ ಎಂದು ಮೀನಾ ಹೇಳಿದ್ದಾಗಿ ಕಲಾ ವಿವರಿಸಿದ್ದಾರೆ.

ಕಳೆದ ವರ್ಷ ಮೀನಾ ನಟನೆಯ 'ಬ್ರೋ ಡ್ಯಾಡಿ' ಮಲಯಾಳಂ ಸಿನಿಮಾ ರಿಲೀಸ್ ಆಗಿತ್ತು. ಚಿತ್ರದಲ್ಲಿ ಮೋಹನ್ ಲಾಲ್ ಜೊತೆ ತೆರೆ ಹಂಚಿಕೊಂಡಿದ್ದರು. ಪೋಸ್ಟ್ ಕೊವಿಡ್ ಸಮಸ್ಯೆಗಳಿಂದ ಚೇತರಿಸಿಕೊಳ್ಳಲಾಗದೇ ಮೀನಾ ಪತಿ ವಿದ್ಯಾಸಾಗರ್ ಕೊನೆಯುಸಿರೆಳೆದಿದ್ದರು. ಶ್ವಾಸಕೋಶ ಸಮಸ್ಯೆಯಿಂದ ಅವರು ಜೀವ ಚೆಲ್ಲಿದ್ದರು. ಶ್ವಾಸಕೋಶ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಆದರೆ ಕಸಿ ಮಾಡಿಸಿಕೊಳ್ಳಲು ದಾನಿಗಳು ಸಿಗದ ಕಾರಣ ವಿದ್ಯಾಸಾಗರ್‌ ಅಸುನೀಗಿದ್ದರು.

ತಮ್ಮ ಕುಟುಂಬಕ್ಕೆ ಬಂದ ಸ್ಥಿತಿ ತಮ್ಮ ಪತಿಗೆ ಎದುರಾದ ಸಂಕ್ಲಿಷ್ಟ ಪರಿಸ್ಥಿತಿ ಎದುರಾಗಬಾರದು ಎಂದು ನಟಿ ಮೀನಾ ತಮ್ಮ ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಿಸಿದ್ದಾರೆ. ಅಂಗಾಂಗ ದಾನದ ಬಗ್ಗೆ ಮನವಿ ಮಾಡಿದ್ದರು. ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ(ಆಗಸ್ಟ್ 13) ನಟಿ ಮೀನಾ ತಮ್ಮ ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಿಸಿದ್ದ ಮೀನಾ 'ಜೀವ ಉಳಿಸುವುದಕ್ಕಿಂತ ಮಹತ್ತರವಾದದ್ದು ಮತ್ತೊಂದಿಲ್ಲ, ಅಂಗಾಂಗ ದಾನ ಜೀವ ಉಳಿಸಲು ಬಹಳ ಮುಖ್ಯವಾದ ಮಾರ್ಗ' ಎಂದು ಮೀನಾ ಪೋಸ್ಟ್ ಮಾಡಿದ್ದರು.

More from Filmibeat

English summary
dance choreographer Kala interesting comments meena's second marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X