ಮೀನಾ- ಸಾಂಘವಿ ಬಿಂದಾಸ್ ಡ್ಯಾನ್ಸ್ ವೀಡಿಯೋ ವೈರಲ್: ಸಾಂಗ್ ಯಾವ್ದು?
ಪತಿಯ ಅಗಲಿಕೆಯ ನೋವಿನಿಂದ ಬಹುಭಾಷಾ ತಾರೆ ಮೀನಾ ಹೊರ ಬರುತ್ತಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ಕೆಲಸ ಮಾಡಲು ಆರಂಭಿಸಿದ್ದಾರೆ. ಕಳೆದ ವರ್ಷ ಜೂನ್ 27ರಂದು ಮೀನಾ ಪತಿ ವಿದ್ಯಾಸಾಗರ್ ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಆಸ್ಪತ್ರೆ ಮೂಲಗಳ ಪ್ರಕಾರ ವಿದ್ಯಾಸಾಗರ್ ಕೆಲವು ವರ್ಷಗಳಿಂದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿತ್ತು. ಸದ್ಯ ಮೀನಾ ಸ್ನೇಹಿತೆ ನಟಿ ಸಾಂಘವಿ ಜೊತೆ ಸೇರಿ ಮಾಡಿರುವ ಇನ್‌ಸ್ಟಾ ರೀಲ್ ವೈರಲ್ ಆಗ್ತಿದೆ.
ಬಹಳ ಚಿಕ್ಕ ವಯಸ್ಸಿನಲ್ಲೇ ನಟಿ ಮೀನಾ ಪತಿಯನ್ನು ಕಳೆದುಕೊಂಡಿದ್ದಾರೆ. ಆಕೆಗೆ ನೈನಿಕಾ ಎನ್ನುವ ಮಗಳು ಇದ್ದಾಳೆ. ವಿದ್ಯಾಸಾಗರ್ ನಿಧನದಿಂದ ಇಬ್ಬರು ಭಾರೀ ಆಘಾತಕ್ಕೆ ಒಳಗಾಗಿದ್ದರು. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ನಟಿ ಮೀನಾ ದಶಕಗಳ ಕಾಲ ನಾಯಕಿಯಾಗಿ ಮೆರೆದವರು. ತೆಲುಗು, ತಮಿಳು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ದಾರೆ. 2009ರಲ್ಲಿ ಮೀನಾ ಬೆಂಗಳೂರು ಮೂಲದ ವಿದ್ಯಾಸಾಗರ್ ಎಂಬುವವರ ಕೈ ಹಿಡಿದಿದ್ದರು. ಪತಿಯ ಅಗಲಿಕೆಯ ನಂತರ ಡಿಪ್ರೆಷನ್‌ಗೂ ಒಳಗಾಗಿದ್ದರು. ಸ್ನೇಹಿತರ, ಆಪ್ತರ ಸಾಂತ್ವನ ಹೇಳಿದ್ದರು.
ಕೆಲ ದಿನಗಳ ಹಿಂದೆ ನಟಿ ಮೀನಾ ಅಂಗಾಂಗ ದಾನದ ಮಹತ್ವವನ್ನು ಸಾರಿ ಹೇಳಿದ್ದರು. ತಾವು ಕೂಡ ಅಂಗಾಂಗ ದಾನಕ್ಕೆ ಒಪ್ಪಿ ಹೆಸರು ನೋಂದಣಿ ಮಾಡಿಸಿದ್ದರು. "ಅನಾರೋಗ್ಯದಿಂದ ಕಷ್ಟಪಡುತ್ತಿರುವವರಿಗೆ, ಅವಶ್ಯಕತೆ ಇರುವವರಿಗೆ ಅಂಗಾಂಗ ದಾನ ಮಾಡುವುದರಿಂದ ಸಾಕಷ್ಟು ಸಹಾಯ ಆಗುತ್ತದೆ. ನನ್ನ ಸಾಗರ್‌ಗೆ ದಾನಿಗಳು ಸಿಕ್ಕಿದ್ದರೆ ನನ್ನ ಜೀವನ ಮತ್ತೊಂದು ರೀತಿ ಇರುತ್ತಿತ್ತು. ಒಬ್ಬ ಅಂಗಾಂಗ ದಾನಿ 8 ಜೀವಗಳನ್ನು ಉಳಿಸಬಹುದು" ಎಂದು ಮೀನಾ ಪೋಸ್ಟ್ ಮಾಡಿದ್ದರು.

ಇತ್ತೀಚೆಗೆ ಮೀನಾ ವಿದೇಶ ಪ್ರವಾಸಕ್ಕೂ ಹೋಗಿ ಬಂದಿದ್ದರು. ಸದ್ಯ ನಟಿ ಮೀನಾ ಹೆಜ್ಜೆ ಹಾಕಿರುವ ಇನ್‌ಸ್ಟಾಗ್ರಾಂ ರೀಲ್ ವಿಡಿಯೋ ಸದ್ದು ಮಾಡ್ತಿದೆ. ತಮಿಳಿನ 'ಎನಿಮಿ' ಚಿತ್ರದ ಸೂಪರ್ ಹಿಟ್ ಗೀತೆಗೆ ಮೀನಾ ಕುಣಿದಿದ್ದಾರೆ. ಮೀನಾಗೆ ಸ್ನೇಹಿತೆ ಮತ್ತೊಬ್ಬ ನಟಿ ಸಾಂಘವಿ ಸಾಥ್ ಕೊಟ್ಟಿದ್ದಾರೆ. ಇಬ್ಬರು ಸೇರಿ ಬಿಂದಾಸ್ ಹೆಜ್ಜೆ ಹಾಕಿದ್ದು, ಇಬ್ಬರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪ್ರೇಜ್‌ಗಳಲ್ಲಿ ಹಂಚಿಕೊಂಡಿದ್ದಾರೆ. ನಟಿ ಸಾಂಘವಿ ಕೂಡ ಚರ್ತುಭಾಷಾ ತಾರೆಯಾಗಿ ಗುರ್ತಿಸಿಕೊಂಡಿದ್ದಾರೆ. ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ.
ಒಂದ್ಕಾಲದಲ್ಲಿ ಮೀನಾ, ಸಾಂಘವಿ ಇಬ್ಬರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯರಾಗಿ ಕಮಾಲ್ ಮಾಡಿದ್ದರು. 'ಪುಟ್ನಂಜ', 'ಸಿಂಹಾದ್ರಿಯ ಸಿಂಹ', 'ಸ್ವಾತಿಮುತ್ತು', 'ಮೈ ಆಟೋಗ್ರಾಫ್' ಸೇರಿದಂತೆ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ಮೀನಾ ಮಿಂಚಿದ್ದರು. 'ರಾಯರ ಮಗ', 'ದಿಗ್ಗಜರು', 'ಅನಾಥರು' ಚಿತ್ರಗಳಲ್ಲಿ ನಟಿಸಿ ಸಾಂಘವಿ ಗಮನ ಸೆಳೆದಿದ್ದರು.


Click it and Unblock the Notifications











