For Quick Alerts
  ALLOW NOTIFICATIONS  
  For Daily Alerts

  ರಜನೀಕಾಂತ್, ವಿಜಯ್ ಮೇಲೆ ನಟಿ ಆರೋಪ: ಕಾನೂನು ಕ್ರಮದ ಎಚ್ಚರಿಕೆ

  |

  ಸೂಪರ್ ಸ್ಟಾರ್ ರಜನೀಕಾಂತ್ ಮತ್ತು ದಳಪತಿ ಖ್ಯಾತಿಯ ವಿಜಯ್ ಮೇಲೆ ನಟಿಯೊಬ್ಬಾಕೆ ಆರೋಪ ಹೊರಿಸಿದ್ದು, ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.

  ಶಿವಣ್ಣನ ಈ ದಾಖಲೆಯನ್ನು ಯಾವ ಭಾಷೆಯ ಯಾವ ನಟನೂ ಮಾಡಿಲ್ಲ | Shivarajkumar | Pratham | Oneindia Kannada

  ರಜನೀಕಾಂತ್ ಮತ್ತು ವಿಜಯ್ ನನ್ನ ಹೆಸರು ಹಾಳು ಮಾಡಲು ಪ್ರಯತ್ನಿಸುತ್ತಿದ್ದು, ನನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ನಟಿ ಮೀರಾ ಮಿಥುನ್ ಆರೋಪಿಸಿದ್ದಾರೆ.

  ಮಹಿಳೆ ಮತ್ತು ಹಸ್ತಮೈಥುನ: 'ಕಿರಾತಕ' ನಟಿಯ ಬೋಲ್ಡ್‌ ಉತ್ತರಮಹಿಳೆ ಮತ್ತು ಹಸ್ತಮೈಥುನ: 'ಕಿರಾತಕ' ನಟಿಯ ಬೋಲ್ಡ್‌ ಉತ್ತರ

  ಆ ಇಬ್ಬರು ಸೂಪರ್ ಸ್ಟಾರ್‌ ನಟರು ನನ್ನ ಮಾನಹಾನಿಗೆ ಯತ್ನಿಸುತ್ತಿದ್ದಾರೆ ಎಂದಿರುವ ಮೀರಾ ಮಿಥುನ್ ಅವರಿಬ್ಬರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸುತ್ತೇನೆ ಎಂದು ಮೀರಾ ಮಿಥುನ್ ಸರಣಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

  ಅಶ್ಲೀಲ ಪದ ಬಳಕೆ ಮಾಡಿರುವ ಮೀರಾ ಮಿಥುನ್

  ಅಶ್ಲೀಲ ಪದ ಬಳಕೆ ಮಾಡಿರುವ ಮೀರಾ ಮಿಥುನ್

  ಟ್ವಿಟ್ಟರ್‌ನಲ್ಲಿ ಅಶ್ಲೀಲ ಪದಗಳನ್ನು ಬಳಸಿರುವ ನಟಿ ಮೀರಾ ಮಿಥುನ್, ರಜನೀಕಾಂತ್ ಒಬ್ಬ ಕನ್ನಡಿಗ, ವಿಜಯ್ ಒಬ್ಬ ಕ್ರಿಶ್ಚಿಯನ್ ಇಬ್ಬರೂ ಸೇರಿ ತಮಿಳುನಾಡನ್ನು ಹಾಳು ಮಾಡಿದ್ದಾರೆ. ನನ್ನ ಮಾನಹಾನಿ ಮಾಡುತ್ತಿದ್ದಾರೆ, ಅವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

  ಮೋದಿ ವಿರುದ್ಧವೂ ಆರೋಪ

  ಮೋದಿ ವಿರುದ್ಧವೂ ಆರೋಪ

  ಅಷ್ಟೆ ಅಲ್ಲದೆ, ನರೇಂದ್ರ ಮೋದಿ ವಿರುದ್ಧವೂ ಆರೋಪ ಮಾಡಿರುವ ನಟಿ, ನರೇಂದ್ರ ಮೋದಿ ತಮಿಳುನಾಡನ್ನು ಹಾಳು ಮಾಡಿದ್ದಾರೆ. ತಮಿಳುನಾಡನ್ನು ತಮಿಳರೇ ಆಳಬೇಕು ಆದರೆ ಕನ್ನಡಿಗರು, ಮಲೆಯಾಳಿಗಳು, ಕ್ರಿಶ್ಚಿಯನ್ನರು ಇಲ್ಲಿ ಮೆರೆಯುತ್ತಿದ್ದಾರೆ ಎಂದು ನಟಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

  ಈ ಒಂದು ಕಾರಣಕ್ಕೆ ನಟ ಶಿವಕಾರ್ತಿಕೇಯನ್ ಕುಡಿಯುವುದಿಲ್ಲ ಮತ್ತು ಸಿಗರೇಟ್ ಸೇದುವುದಿಲ್ಲವಂತೆಈ ಒಂದು ಕಾರಣಕ್ಕೆ ನಟ ಶಿವಕಾರ್ತಿಕೇಯನ್ ಕುಡಿಯುವುದಿಲ್ಲ ಮತ್ತು ಸಿಗರೇಟ್ ಸೇದುವುದಿಲ್ಲವಂತೆ

  ತಮಿಳು ಸಿನಿಉದ್ಯಮಕ್ಕೆ ನಾಚಿಕೆ ಇಲ್ಲ ಎಂದಿದ್ದ ನಟಿ

  ತಮಿಳು ಸಿನಿಉದ್ಯಮಕ್ಕೆ ನಾಚಿಕೆ ಇಲ್ಲ ಎಂದಿದ್ದ ನಟಿ

  ಕಂಗನಾ ರಣಾವತ್ ವಿರುದ್ಧವೂ ಆರೋಪಗಳನ್ನು ಮಾಡಿದ್ದ ಮೀರಾ, ಕಂಗನಾ ರಣಾವತ್ ಅನ್ನು ಜಯಲಲಿತಾ ಜೀವನ ಆಧಾರಿತ ಸಿನಿಮಾದ ನಾಯಕಿಯನ್ನಾಗಿ ಮಾಡಿದ್ದಕ್ಕೆ ಅಸಮಾಧಾನ ಹೊರಹಾಕಿದ್ದರು. ತಮಿಳು ಸಿನಿಮಾ ಉದ್ಯಮಕ್ಕೆ ನಾಚಿಕೆಯಿಲ್ಲ. ತಮಿಳು ನಾಯಕಿ ಪಾತ್ರಕ್ಕೆ ಹೊರರಾಜ್ಯದ ನಟಿಯನ್ನು ಕರೆತಂದಿದೆ ಎಂದಿದ್ದರು.

  ಮಾಡೆಲ್ ಆಗಿ ಗುರುತಿಸಿಕೊಂಡಿರುವ ಮೀರಾ

  ಮಾಡೆಲ್ ಆಗಿ ಗುರುತಿಸಿಕೊಂಡಿರುವ ಮೀರಾ

  ಮೀರಾ ಮಿಥುನ್ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಆದರೆ ಮಾಡೆಲ್ ಆಗಿ ಆಕೆ ಹೆಚ್ಚು ಪರಿಚಿತರು. ಜೊತೆಗೆ ಮೀರಾ ಮಿಥುನ್ ವಿವಾದಾತ್ಮಕ ಹೇಳಿಕೆಗಳಿಗೆ ಸಾಕಷ್ಟು ಖ್ಯಾತರು. ತ್ರಿಷಾ, ನಯನತಾರಾ ವಿರುದ್ಧವೂ ಅವರು ಟ್ವೀಟ್ ಮಾಡಿದ್ದರು.

  ಸೆಲ್ಫಿ ಮೂಲಕ ಮತ್ತೆ ಸಾಮಾಜಿಕ ಜಾಲತಾಣಕ್ಕೆ ವಾಪಸ್ ಆದ ನಟಿ ತ್ರಿಷಾಸೆಲ್ಫಿ ಮೂಲಕ ಮತ್ತೆ ಸಾಮಾಜಿಕ ಜಾಲತಾಣಕ್ಕೆ ವಾಪಸ್ ಆದ ನಟಿ ತ್ರಿಷಾ

  English summary
  Actress Meera Mithun accused Rajinikanth and Vijay are trying to defame her. She said 'i will take legal action against them'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X