twitter
    For Quick Alerts
    ALLOW NOTIFICATIONS  
    For Daily Alerts

    ನಟಿ ಮೀರಾ ಮಿಥುನ್ ಅರೆಸ್ಟ್, ಪೊಲೀಸರ ಮುಂದೆ ಹೈಡ್ರಾಮಾ

    |

    ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಮೀರಾ ಮಿಥುನ್ ಬಂಧನವಾಗಿದೆ. ಇತ್ತೀಚಿಗಷ್ಟೆ ದಲಿತ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮೀರಾ ಮಿಥುನ್ ಅವರ ಈ ವಿಡಿಯೋ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿ, ಕೆಲವು ಕಡೆ ದೂರು ಸಹ ದಾಖಲಾಗಿತ್ತು.

    ಇದೀಗ, ನಟಿ ಮೀರಾ ಮಿಥುನ್ ಅವರನ್ನು ಚೆನ್ನೈ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ ಎಂಬ ವರಿದಯಾಗಿದೆ. ಮೀರಾ ಮಿಥುನ್ ಅವರನ್ನು ವಿಡುತಲೈ ಚಿರುತೈಗಳ್ ಕಚ್ಚಿ ಸಂಘಟನೆ ನಾಯಕ ವನ್ನಿ ಅರಸು ಅವರ ದೂರನ್ನು ಆಧರಿಸಿ ಅರೆಸ್ಟ್ ಮಾಡಲಾಗಿದೆ ಎಂಬ ಮಾಹಿತಿ ಇದೆ.

    ತಮಿಳು ಸಿನಿಮಾರಂಗ ವೇಶ್ಯಾಗೃಹ ಇದ್ದಂತೆ: ಮೋದಿಗೆ ದೂರು ಹೇಳಿದ ನಟಿತಮಿಳು ಸಿನಿಮಾರಂಗ ವೇಶ್ಯಾಗೃಹ ಇದ್ದಂತೆ: ಮೋದಿಗೆ ದೂರು ಹೇಳಿದ ನಟಿ

    ಕೇಸ್ ದಾಖಲಾಗಿದ್ದ ಹಿನ್ನೆಲೆ ನಟಿ ಮೀರಾ ಮಿಥುನ್‌ಗೆ ಚೆನ್ನೈ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಆದರೆ, ನಟಿ ತಲೆಮರೆಸಿಕೊಂಡಿದ್ದರು. ಕೇರಳದಲ್ಲಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಪೊಲೀಸರು ಅರೆಸ್ಟ್ ಮಾಡಲು ಹೋದ ಸಂದರ್ಭದಲ್ಲಿ ಮೀರಾ ಮಿಥುನ್ ಹೈಡ್ರಾಮಾವೇ ಮಾಡಿದ್ದು, ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮುಂದೆ ಓದಿ...

    ಪೊಲೀಸರ ಮುಂದೆ ಹೈಡ್ರಾಮಾ

    ಪೊಲೀಸರ ಮುಂದೆ ಹೈಡ್ರಾಮಾ

    ನಟಿಯನ್ನು ಬಂಧಿಸಿಲು ಮೀರಾ ಮಿಥುನ್ ಉಳಿದುಕೊಂಡಿದ್ದ ಕೋಣೆಗೆ ನುಗ್ಗಿದ ಪೊಲೀಸರಿಗೆ ಧಮ್ಕಿ ಹಾಕಿದ್ದಾರೆ. ಚೆನ್ನೈ ಪೊಲೀಸರು ದೌರ್ಜನ್ಯ ಮಾಡ್ತಿದ್ದಾರೆ. ಮೂರು ಜನ ಅಧಿಕಾರಿಗಳು ಬಂದಿದ್ದಾರೆ. ನನಗೆ ಕಿರುಕುಳ ಕೊಡ್ತಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡ್ತಿದ್ದಾರೆ. ಪೊಲೀಸರು ನನಗೆ ಹಲ್ಲೆ ಮಾಡಿದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ನನ್ನನ್ನು ಅರೆಸ್ಟ್ ಮಾಡಲು ನಿಮಗೆ ಏನು ಅಧಿಕಾರ ಇದೆ, ಏಕೆ ನನ್ನನ್ನು ಬಂಧಿಸಲು ಬಂದಿದ್ದೀರಾ ಎಂದು ಈ ವೇಳೆ ಪೊಲೀಸರನ್ನು ಪ್ರಶ್ನಿಸಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

    ದೂರು ದಾಖಲಿಸಿದ ಸಂಘಟನೆ ಮುಖಂಡರು

    ದೂರು ದಾಖಲಿಸಿದ ಸಂಘಟನೆ ಮುಖಂಡರು

    'ಚಿತ್ರರಂಗದಲ್ಲಿ ಆಗುತ್ತಿರುವ ಆನಾಹುತಗಳಿಗೆ ಪರಿಶಿಷ್ಟ ಜಾತಿಯ ಜನರೇ ಕಾರಣ. ಅಂಥವರನ್ನು ಚಿತ್ರರಂಗದಿಂದ ಓಡಿಸಬೇಕು' ಎಂದು ಮೀರಾ ಹೇಳಿದ್ದರು. ಇದನ್ನು ಖಂಡಿಸಿ ವಿಡುತಲೈ ಚಿರುತೈಗಳ್ ಕಚ್ಚಿ ರಾಜಕೀಯ ಪಕ್ಷ ದೂರು ನೀಡಿತ್ತು. ಈ ಹಿನ್ನೆಲೆ ನಟಿ ವಿರುದ್ಧ ಎಫ್ ಐ ಆರ್ ಸಹ ದಾಖಲಾಗಿದೆ. ಮೀರಾ ವಿರುದ್ಧ ಭಾರತೀಯ ದಂಡ ಸಂಹಿತೆ, ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಏಳು ನಿಬಂಧನೆಗಳ ಅಡಿಯಲ್ಲಿ ಮೀರಾ ಮಿಥುನ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಮಿಳುನಾಡು ಸೈಬರ್ ಕ್ರೈಂ ಪೊಲೀಸರು ಮಾಹಿತಿ ನೀಡಿದ್ದರು.

    ದಲಿತರ ವಿರುದ್ಧ ಅವಹೇಳನಕಾರಿ ಹೇಳಿಕೆ; ನಟಿ ಮೀರಾ ಮಿಥುನ್ ವಿರುದ್ಧ ಕೇಸ್ದಲಿತರ ವಿರುದ್ಧ ಅವಹೇಳನಕಾರಿ ಹೇಳಿಕೆ; ನಟಿ ಮೀರಾ ಮಿಥುನ್ ವಿರುದ್ಧ ಕೇಸ್

    ದಲಿತರಿಂದಲೇ ಚಿತ್ರರಂಗದಲ್ಲಿ ಸಮಸ್ಯೆ

    ದಲಿತರಿಂದಲೇ ಚಿತ್ರರಂಗದಲ್ಲಿ ಸಮಸ್ಯೆ

    ಇತ್ತೀಚಿಗೆ ಟಾಕ್ ಶೋ ಒಂದರಲ್ಲಿ ಭಾಗವಹಿಸಿದ್ದ ಮೀರಾ, "ಸಿನಿಮಾರಂಗದಲ್ಲಿ ಎಲ್ಲಾ ತಪ್ಪುಗಳು ಮತ್ತು ದುಷ್ಪರಿಣಾಮಗಳಿಗೆ ಪರಿಶಿಷ್ಟ ಜಾತಿಯವರೇ ಕಾರಣ, ಅವರನ್ನು ಚಿತ್ರರಂಗದಿಂದ ಹೊರಹಾಕಬೇಕು. ಅವರು ಹೆಚ್ಚಾಗಿ ಕಾನೂನುಬಾಹಿರ ಚಟುವಟಿಕೆಗಳು ಮತ್ತು ಅಪರಾಧಗಳಲ್ಲಿ ಭಾಗಿಯಾಗುವುದರಿಂದ ಸಮಸ್ಯೆಗಳನ್ನು ಎದುರಿಸುಬೇಕಾಗಿದೆ. ಯಾವುದೇ ಕಾರಣವಿಲ್ಲದೆ ಯಾರು ಅನಗತ್ಯವಾಗಿ ಯಾರ ಬಗ್ಗೆಯೂ ಮಾತನಾಡುವುದಿಲ್ಲ" ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದರು. "ಚಿತ್ರರಂಗದಲ್ಲಿ ದಲಿತ ನಿರ್ದೇಶಕರು ಮತ್ತು ಇತರೆ ಜನರು ಚೀಪ್ ಕೆಲಸಗಳನ್ನು ಮಾಡುತ್ತಿದ್ದಾರೆ. ಅಂಥವರನ್ನು ಸಿನಿಮಾರಂಗದಿಂದ ಹೊರಹಾಕುವ ಸಮಯವಿದು" ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

    ತಮಿಳು ಚಿತ್ರರಂಗ ವೇಶ್ಯಾಗೃಹ ಇದ್ದಂತೆ

    ತಮಿಳು ಚಿತ್ರರಂಗ ವೇಶ್ಯಾಗೃಹ ಇದ್ದಂತೆ

    ಇನ್ನು ತಮಿಳು ಚಿತ್ರರಂಗದ ಬಗ್ಗೆಯೂ ಗಂಭೀರ ಆರೋಪಗಳನ್ನು ಮಾಡಿದ್ದರು. ತನ್ನನ್ನು ತಾನು ಭಾರತದ ಸೂಪರ್ ಮಾಡೆಲ್ ಎಂದು ಸಂಭೋಧಿಸಿಕೊಂಡ ಮೀರಾ ''ತಮಿಳುನಾಡಿನಲ್ಲಿ ಮಹಿಳೆಯರ ಮೇಲೆ ಪ್ರತಿ ಸೆಕೆಂಡ್‌ ದೌರ್ಜನ್ಯ ನಡೆಯುತ್ತಿದೆ. ಅದರಲ್ಲಿಯೂ ತಮಿಳುನಾಡು ಸಿನಿಮಾ ಉದ್ಯಮವಂತೂ ವೇಶ್ಯಾಗೃಹದಂದಾತಿಗಿದ್ದು, ಸ್ವಜನಪಕ್ಷಪಾತ ಎನ್ನುವುದು ಅತಿಯಾಗಿದೆ'' ಎಂದು ಟೀಕಿಸಿದ್ದರು.

    English summary
    Actress Meera Mithun arrested for casteist remarks. she alleges 'police atrocity', threatens suicide before being arrested.
    Sunday, August 15, 2021, 8:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X