ಸಹೋದರಿ ಆತ್ಮಹತ್ಯೆ.. "ನಿನ್ನನ್ನು ಎಂದಿಗೂ ಮರೆಯೋಕ್ಕಾಗಲ್ಲ" ಎಂದು ನಟಿ ಸಿಮ್ರನ್ ಟ್ವೀಟ್

ಬಹುಭಾಷಾ ನಟಿ ಸಿಮ್ರನ್ ಕನ್ನಡದ 'ಸಿಂಹದ ಮರಿ' ಚಿತ್ರದಲ್ಲೂ ನಟಿಸಿದ್ದರು. ದಶಕಗಳ ಹಿಂದೆ ತೆಲುಗು, ತಮಿಳಿನಲ್ಲಿ ಆಕೆ ಸ್ಟಾರ್ ನಟಿಯಾಗಿ ಮಿಂಚಿದ್ದರು. ಚಿರಂಜೀವಿ, ರಜನಿಕಾಂತ್‌, ದಳಪತಿ ವಿಜಯ್, ಶಿವರಾಜ್‌ಕುಮಾರ್ ಸೇರಿದಂತೆ ಸೂಪರ್ ಸ್ಟಾರ್ಸ್ ಜೊತೆ ನಟಿಸಿ ಗೆದ್ದಿದ್ದಾರೆ. ಆಕೆಗೆ ಮೋನಲ್ ಎನ್ನುವ ಸಹೋದರಿ ಇದ್ದರು. ಆಕೆ ಕೂಡ ಚಿತ್ರಟಿಸಿದ್ದರು. ಮೋನಲ್ ಆತ್ಮಹತ್ಯೆ ಮಾಡಿಕೊಂಡು ನಿಧನರಾಗಿದ್ದರು.

ಸಹೋದರಿಯನ್ನು ನೆನೆದು ನಟಿ ಸಿಮ್ರನ್ ಈಗ ಭಾವುಕವಾಗಿ ಟ್ವೀಟ್ ಮಾಡಿದ್ದಾರೆ. "ನನ್ನ ಪ್ರೀತಿಯ ಸಹೋದರಿಯ ಪುಣ್ಯಸ್ಮರಣೆ. ನಿನ್ನನ್ನು ಎಂದಿಗೂ ಮರೆಯುವುದಿಲ್ಲ" ಎಂದು ಸಿಮ್ರನ್ ಬರೆದುಕೊಂಡಿದ್ದಾರೆ. ಆಕೆ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಟ್ವೀಟ್‌ಗೆ ಮಿಸ್ ಯು ಮೋನಲ್ ಸಿಸ್ಟರ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ತಮಿಳಿನ ಪ್ರಸನ್ನ ಸುಜಿತ್ ಎಂಬ ಕೊರಿಯೋಗ್ರಫರ್ ಜೊತೆ ಮೋನಲ್ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರು ಗಾಢವಾಗಿ ಪ್ರೀತಿಸುತ್ತಿದ್ದರು. ಆತ ಮೋಸ ಮಾಡಿದ ಎಂದು ಮೋನಲ್ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಲಾಗಿತ್ತು.

Actress Monal Naval Death anniversary, Her sister Simran Tweets remembering her

ಮೋನಲ್ ಆತ್ಮಹತ್ಯೆ ಬಗ್ಗೆ ನಿಜವಾದ ಕಾರಣ ಇನ್ನು ಗೊತ್ತಾಗಿಲ್ಲ. ಆಕೆಯ ಸಾವು ಇನ್ನು ಮಿಸ್ಟರಿಯಾಗಿಯೇ ಇದೆ. ಶಿವಣ್ಣ ನಟನೆಯ ಕನ್ನಡದ 'ಇಂದ್ರ ಧನುಷ್‌' ಚಿತ್ರದ ಮೂಲಕ ಮೋನಲ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 2000 ಇಸವಿಯಲ್ಲಿ ಈ ಸಿನಿಮಾ ಮೂಡಿ ಬಂದಿತ್ತು. ನಂತರ ಒಂದಷ್ಟು ತಮಿಳು ಸಿನಿಮಾಗಳಲ್ಲಿ ಆಕೆ ನಟಿಸಿದ್ದರು. ಒಂದು ತೆಲುಗು, ಹಿಂದಿ ಚಿತ್ರದಲ್ಲೂ ಬಣ್ಣ ಹಚ್ಚಿದ್ದರು. ಸಿಮ್ರನ್ ಸಹೋದರಿ ಎನ್ನುವ ಕಾರಣಕ್ಕೆ ಬಹಳ ಬೇಗ ಆಕೆಗೆ ಕ್ರೇಜ್ ಸೃಷ್ಟಿಯಾಗಿತ್ತು. 2002, ಏಪ್ರಿಲ್ 14ರಂದು ಚೆನ್ನೈನ ತಮ್ಮ ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೋನಲ್ ದೇಹ ಪತ್ತೆ ಆಗಿತ್ತು.

ಸಹೋದರಿ ಮೋನಲ್ ನಿಧನಳಾಗಿ 20 ವರ್ಷ ಕಳೆದ ಹಿನ್ನಲೆಯಲ್ಲಿ ನಟಿ ಸಿಮ್ರನ್ ಸೋಶಿಯಲ್ ಮೀಡಿಯಾದಲ್ಲಿ ಆಕೆಯನ್ನು ನೆನಪಿಸಿಕೊಂಡಿದ್ದಾರೆ. ಮೋನಲ್ ಬದ್ರಿ, ಲವ್ಲಿ, ಸಮುದಿರಂ, ಇಷ್ಟಂ, ವಿವರಮಾನ ಆಳು, ಮಾ ತುಜೇ ಸಲಾಂ, ಚಾರ್ಲಿ ಚಾಪ್ಲಿನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಆಕೆ ಅಗಲಿ 3 ವರ್ಷಗಳ ನಂತರ ಕೊನೆಯ ಸಿನಿಮಾ 'ಆಧಿಕಂ' ಬಿಡುಗಡೆಯಾಗಿತ್ತು.

Actress Monal Naval Death anniversary, Her sister Simran Tweets remembering her

ದೆಹಲಿಯಲ್ಲಿ ಹುಟ್ಟಿ ಬೆಳೆದ ನಟಿ ಮೋನಲ್ ನಂತರ ಮುಂಬೈನಲ್ಲಿ ಪದವಿ ಪಡೆದುಕೊಂಡಿದ್ದರು. ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಆರಂಭಿಸಿದ್ದರು. ಆಕೆಗೆ ಸಿಮ್ರನ್ ಸೇರಿ ಇಬ್ಬರು ಸಹೋದರಿಯರು ಹಾಗು ಒಬ್ಬ ತಮ್ಮ. ಕೇವಲ 21 ವರ್ಷ ವಯಸ್ಸಿನಲ್ಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿಮ್ರನ್ ಆಕೆಯ ಬಾಯ್‌ಫ್ರೆಂಡ್ ಪ್ರಸನ್ನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.

More from Filmibeat

English summary
Actress Monal Naval Death anniversary, Her sister Simran Tweets remembering her. Monal appeared in more than 10 films including Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X