ನಾಚಿಕೆಯಾಗಲ್ವಾ ; ಮೊನ್ನೆಯಷ್ಟೇ ಗಂಡನ ಜೊತೆ ಫೋಟೋ ಹಾಕಿದ್ದೇ- ನಮಿತಾ ಕೆಂಡಾಮಂಡಲ...!
ಸೊಸೈಟಿಯಲ್ಲಿ ಆಗಬಹುದಾದ ಸಡನ್ ಸುದ್ದಿಗಳಿಗೆ ಜನಸಾಮಾನ್ಯರು ಟಿವಿ, ನ್ಯೂಸ್ ಪೇಪರ್ ಗಳನ್ನು ನಂಬುವ ಕಾಲ ಮರೆಯಾಯ್ತು. ಅಂಗೈಲ್ಲಿರುವ ಮೊಬೈಲ್ ನಲ್ಲಿಯೇ ಎಲ್ಲ ಸುದ್ದಿಗಳು ಘಟಿಸಿದ ಕೆಲವೇ ಸೆಕೆಂಡುಗಳಲ್ಲಿ ತಲುಪಿಬಿಡುತ್ತದೆ. ಅಷ್ಟರಮಟ್ಟಿಗೆ ತಂತ್ರಜ್ಞಾನ ಬೆಳೆದು, ನೋಡುಗರೇ ನಿಬ್ಬೆರಗಾಗುವಂತೆ ಮಾಡುತ್ತಿದೆ.
ಇನ್ನು ಸೋಶಿಯಲ್ ಮೀಡಿಯಾವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ ಗೆ ತಳ್ಳಿ ತನ್ನ ಕಬಂಧ ಬಾಹುವಿನಿಂದ ಆಕ್ರಮಿಸಿಕೊಂಡುಬಿಟ್ಟಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟವಾಗುವ ಸುದ್ದಿಗಳು, ವಿಚಾರಗಳು ಸತ್ಯವೋ, ಸುಳ್ಳೋ ಎಂಬುದನ್ನು ಅರಿಯುವಷ್ಟರಲ್ಲಿ ಎಲ್ಲರಿಗೂ ಸುದ್ದಿಗಳು ಹರಡಿ ಮತ್ತಾವುದೋ ಪ್ರಮಾದವನ್ನು ಸೃಷ್ಟಿಸಿ ಬಿಟ್ಟಿರುತ್ತದೆ. ಇದಕ್ಕೆ ಮತ್ತೊಂದು ಉದಾಹರಣೆ ನಮಿತಾ ವಿಚ್ಛೇದನದ ಸುದ್ದಿ

ಹೌದು, ಕನ್ನಡದ ನೀಲಕಂಠನ ಗಂಗಾ ಯಾನೆ ನಮಿತಾ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ ಎಂಬ ಸುದ್ದಿಯೊಂದು ಮೊನ್ನೆಯಷ್ಟೇ ಪಸರ್ ಆಗಿತ್ತು. ಸತ್ಯಾಸತ್ಯತೆಯನ್ನ ತಿಳಿಯದೇ ಅನೇಕರು ಈ ಸುದ್ದಿ ನಿಜವೆಂದೇ ನಂಬಿದ್ದರು. ಒಂದ್ಕಾಲದಲ್ಲಿ ತನ್ನ ಅಂದ-ಚೆಂದದಿಂದ ಪಡ್ಡೆಗಳ ಹೃದಯಕ್ಕೆ ಕನ್ನ ಹಾಕಿದ್ದ ನಮಿತಾ ಬದುಕಿನಲ್ಲಿ ಹೀಗೆಲ್ಲ ಆಗಬಾರದಿತ್ತು ಎಂದು ಅನುಕಂಪವನ್ನೂ ವ್ಯಕ್ತಪಡಿಸಿದ್ದರು.
ಆದರೆ..ನೆನಪಿರಲಿ, ನಮಿತಾ ಅವರ ಸಾಂಸಾರಿಕ ಜೀವನದ ಬಗ್ಗೆ ಹಬ್ಬಿಸಲಾದ ಈ ಸುದ್ದಿಯಲ್ಲಿ ಯಾವ ಸತ್ಯಾಂಶವೂ ಇಲ್ಲ. ಖುದ್ದು ನಮಿತಾ ಈ ಮಾತನ್ನ ಹೇಳೀದ್ದಾರೆ. ಸುಖಾ ಸುಮ್ಮನೆ ತಮ್ಮ ದಾಂಪತ್ಯ ಜೀವನದಲ್ಲಿ ಮೂಗು ತೂರಿಸಲು ಬರುತ್ತಿರುವವರ ವಿರುದ್ಧ ಕೆಂಡವನ್ನೂ ಕಾರಿದ್ದಾರೆ.

ಮೊನ್ನೆ ಮೊನ್ನೆ ನನ್ನ ಪತಿಯ ಜೊತೆಗಿರುವ ಫೋಟೋ ಶೇರ್ ಮಾಡಿದ್ದೀನಿ. ಮರು ದಿನವೇ ಡಿವೋರ್ಸ್ ಎನ್ನುವ ಸುದ್ದಿ ಹಾಕುತ್ತಿದ್ದಾರೆ ಆನ್‌ಲೈನ್‌ನಲ್ಲಿ. ಯಾವುದೇ ಆಧಾರವಿಲ್ಲದೆ ನಾವು ದೂರಾಗುತ್ತೇವೆ ಅಂತ ಹೇಗೆ ಪ್ರಚಾರ ಮಾಡುತ್ತೀರಾ?'ಎಂದು ನಮಿತಾ ಮಾತನಾಡಿರುವ ನಮಿತಾ, ನಾನೊಬ್ಬ ನಟಿಯಾಗಿ ಇಂತಹ ಹಲವಾರು ವದಂತಿಗಳನ್ನು ಕೇಳಿದ್ದೇನೆ. ಈ ಡಿವೋರ್ಸ್ ವಿಚಾರದ ಬಗ್ಗೆ ನಾನು ಮತ್ತು ನನ್ನ ಪತಿ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ
ಇನ್ನೂ ಇದೇ ಸಮಯದಲ್ಲಿ ನಮ್ಮ ಇಬ್ಬರ ಸ್ನೇಹಿತರು..ಆಪ್ತರು.. ಕುಟುಂಬ ವರ್ಗದವರು.. ಈ ತರಹದ ಸುಳ್ಳು ಸುದ್ದಿಗಳನ್ನ ನಂಬಿ ಆಗಾಗ ಕರೆ ಮಾಡಿ ಏನಿದು ಸುದ್ದಿ ನಿಜಾನಾ ಅಂತ ಕೇಳುತ್ತಾರೆ ಎಂದಿರುವ ನಮಿತಾ, ನನಗೂ ಸ್ಪಷ್ಟನೆ ಕೊಟ್ಟು ಕೊಟ್ಟು ಸಾಕಾಗಿದೆ ಎಂದು ಅಲವತ್ತುಕೊಂಡಿದ್ದಾರೆ. ನಾನು ಬೇರೆ ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿ ಇರುತ್ತೀನಿ. ಕೆಲವೊಮ್ಮೆ ಯಾರಿಗೂ ಯಾವುದಕ್ಕೂ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ. ಆದರೆ ಈ ಸುದ್ದಿ ನೋಡಿ ಜನರು ಕರೆ ಮಾಡುವುದನ್ನು ಕೇಳಿ ನನ್ನ ಪತಿ ಮತ್ತು ನಾನು ಬಿದ್ದು ಬಿದ್ದು ನಗ್ತೀವಿ ಅಷ್ಟೇ ಎಂದು ನಮಿತಾ ಹೇಳಿದ್ದಾರೆ. ಈ ಮೂಲಕ ತಮ್ಮ ಸಂಸಾರದ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನಾಡ್ತಿರುವ ಅನೇಕರ ಬಾಯಿಯನ್ನ ಮುಚ್ಚಿಸುವ ಪ್ರಯತ್ನವನ್ನು ಕೂಡ ನಮಿತಾ ಮಾಡಿದ್ದಾರೆ
ಸದ್ಯಕ್ಕೆ ನಮಿತಾ ಅವರ ಈ ಮನದ ಮಾತು ಕೇಳಿ ಇವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಈ ಸುಂದರವಾದ ಜೋಡಿ ಮೇಲೆ ಯಾವ ಮಸಣಿ ಕಣ್ಣು ಬೀಳದಿರಲಿ ಎಂದು ಪ್ರಾರ್ಥನೆಯನ್ನೂ ಮಾಡ್ತಿದ್ದಾರೆ.


Click it and Unblock the Notifications











