ನಟಿ ನಮಿತಾ ಪತಿಗೆ ಸಂಕಷ್ಟ: ಕ್ರೇಜಿಸ್ಟಾರ್ ನಾಯಕಿಯ ಪತಿಗೆ ಪೊಲೀಸರು ನೋಟಿಸ್ ಕೊಟ್ಟಿದ್ದೇಕೆ?

By ಫಿಲ್ಮಿಬೀಟ್ ಡೆಸ್ಕ್

ದಕ್ಷಿಣ ಭಾರತದ ಗ್ಲಾಮರಸ್ ನಟಿ ಯಾರಿಗೆ ಗೊತ್ತಿಲ್ಲ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ನೀಲಕಂಠ' ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ನಮಿತಾಗೆ ಕನ್ನಡದಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೆಚ್ಚಾಗಿ ಗ್ಲಾಮರ್ ಲುಕ್‌ನಿಂದಲೇ ಜನಪ್ರಿಯರಾಗಿರುವ ಈ ನಟಿಯ ಪತಿಯೀಗ ಸಂಕಷ್ಟದಲ್ಲಿದ್ದಾರೆ.

ಹೌದು, ದಕ್ಷಿಣ ಭಾರತದ ಹಾಟ್ ನಟಿ ನಮಿತಾ ಪತಿ ವೀರೇಂದ್ರ ಚೌಧರಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರ ವಿರುದ್ಧ ಇತ್ತೀಚೆಗೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಅಸಲಿಗೆ ಇದಕ್ಕೆ ಕಾರಣವೇನು ? ಅದೇನು ಅನ್ನೋದನ್ನು ತಿಳಿಯಲು ಮುಂದೆ ಓದಿ..

Actress Namitha Husband Veerendra Chowdary got notice for cheating 50 Lakhs

ಬಹುಭಾಷಾ ನಟಿ ನಮಿತಾ ಪತಿ ವೀರೇಂದ್ರ ಚೌಧರಿ ಹೆಸರು ವಂಚನೆ ಪ್ರಕರಣವೊಂದರಲ್ಲಿ ಕೇಳಿ ಬರುತ್ತಿದೆ. ಇತ್ತೀಚೆಗೆ ನಮಿತಾ ಪತಿ ವಿರುದ್ಧ ತಮಿಳುನಾಡಿನ ಗೋಪಾಲಸ್ವಾಮಿ ಎಂಬುವವರು ವಂಚನೆ ಪ್ರಕರಣವನ್ನು ದಾಖಲು ಮಾಡಿದ್ದರು.

ತಮಿಳು ನಾಡಿನ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮಂಡಳಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಗೋಪಾಲಸ್ವಾಮಿ ಎಂಬುವವರ ಬಳಿ 50 ಲಕ್ಷ ರೂಪಾಯಿ ಪಡೆದಿದ್ದರು. ಆ ಬಳಿಕ ಅಧ್ಯಕ್ಷ ಸ್ಥಾನ ಕೊಡಿಸದೇ, ಇತ್ತ ಹಣವನ್ನು ನೀಡದೆ ಸತಾಯಿಸುತ್ತಿದ್ದಾರೆಂದು ಗೋಪಾಲಸ್ವಾಮಿ ಎಂಬುವವರು ವಂಚನೆ ಆರೋಪ ಮಾಡಿ, ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.

ಈ ಸಂಬಂಧ ನಮಿತಾ ಪತಿ ವೀರೇಂದ್ರ ಚೌಧರಿಗೆ ಪೊಲೀಸರು ನೋಟಿಸ್ ನೀಡಿದ್ದು, ತನಿಖೆಗೆ ಹಾಜರಾಗುವಂತೆ ಹೇಳಿದ್ದಾರೆ. ಸೇಲಂನ ಕೇಂದ್ರ ಅಪರಾಧ ವಿಭಾಗ ಅಧಿಕಾರಿಗಳು ವೀರೇಂದ್ರ ಚೌಧರಿ ಹಾಗೂ ಮತ್ತಿಬ್ಬರಿಗೆ ಸಮನ್ಸ್ ಕಳುಹಿಸಿರುವ ಬಗ್ಗೆ ವರದಿಯಾಗಿದೆ. ವೀರೇಂದ್ರ ಚೌಧರಿ ಜೊತೆ ಇನ್ನಿಬ್ಬರು ಮುತ್ತು ರಾಮನ್ ಹಾಗೂ ಜಾಕೀರ್ ಎಂಬುವವರು 50 ಲಕ್ಷ ರೂಪಾಯಿ ಹಣ ಪಡೆದಿದ್ದರು ಎನ್ನಲಾಗಿದೆ.

Actress Namitha Husband Veerendra Chowdary got notice for cheating 50 Lakhs

ವೀರೇಂದ್ರ ಚೌಧರಿ ಬಹುಭಾಷಾ ನಟಿ ನಮಿತಾ ಅವರ ಪತಿಯಾಗಿದ್ದರಿಂದ ಈ ವಿಷಯ ನಿನ್ನೆ(ನವೆಂಬರ್ 16)ಯಿಂದ ಸದ್ದು ಮಾಡುತ್ತಿದೆ. ನಮಿತಾ ತಮಿಳು ಭಾಷೆಯಲ್ಲಿ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಗ್ಲಾಮರ್ ಪಾತ್ರಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡು ಜನಪ್ರಿಯರಾಗಿದ್ದಾರೆ. ಈಕೆಯ ಅಭಿಮಾನಿಗಳು ನಮಿತಾಗಾಗಿ ತಮಿಳುನಾಡಿನಲ್ಲಿ ಗುಡಿಯನ್ನು ಕಟ್ಟಿ ಪೂಜಿಸುತ್ತಿದ್ದಾರೆ.

ನಮಿತಾ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ದರ್ಶನ್ ನಟಿಸಿದ 'ಇಂದ್ರ' ಸಿನಿಮಾದಲ್ಲಿ ನಮಿತಾ ನಾಯಕಿಯಾಗಿ ನಟಿಸಿದ್ದರು. ಆ ಬಳಿಕ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ 'ನೀಲಕಂಠ', 'ಹೂ' ಕನ್ನಡ ಜನಪ್ರಿಯವಾದ ಸಿನಿಮಾಗಳು. ಇದರೊಂದಿಗೆ 'ನಮಿತಾ ಐ ಲವ್ ಯೂ', 'ಬೆಂಕಿ ಬಿರುಗಾಳಿ', 'ಸಿಕ್ಕಾಪಟ್ಟೆ ಇಷ್ಟಾಪಟ್ಟೆ' ಅಂತಹ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ.

More from Filmibeat

English summary
Actress Namitha Husband in trouble. Notice issued for cheating:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X