For Quick Alerts
  ALLOW NOTIFICATIONS  
  For Daily Alerts

  ಬಿಜೆಪಿ ಪಕ್ಷಕ್ಕೆ ಬಂದ ಗ್ಲಾಮರ್ ಗರ್ಲ್‌ ನಮಿತಾ

  |
  ಬಿಜೆಪಿಗೆ ಸೇರ್ಪಡೆಯಾದ ನಟಿ ನಮಿತಾ | FILMIBEAT KANNADA

  ದಕ್ಷಿಣ ಭಾರತದಲ್ಲಿ ಖ್ಯಾತ ನಟಿ, ಗ್ಲಾಮರ್ ಬೊಂಬೆ ನಮಿತಾ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ವನ್ನು ಅಧಿಕೃತವಾಗಿ ಸೇರಿಕೊಂಡಿದ್ದಾರೆ.

  ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ನಮಿತಾ ಅವರು ಪಕ್ಷಕ್ಕೆ ಸೇರ್ಪಡೆಗೊಂಡರು. ಅವರಿಗೆ ಬಿಜೆಪಿ ಬಾವುಟ ನೀಡಿ, ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಲಾಯಿತು. ಇದಕ್ಕೂ ಮುನ್ನ ಹಿರಿಯ ನಟ ರಾಧಾರವಿ ಕೂಡಾ ಬಿಜೆಪಿ ಸೇರಿಕೊಂಡಿದ್ದಾರೆ. ಜೆಪಿ ನಡ್ಡಾ ಅವರು ಸದ್ಯ ಚೆನ್ನೈ ಪ್ರವಾಸದಲ್ಲಿದ್ದು, ತಮಿಳುನಾಡಿನಲ್ಲಿ ಬಿಜೆಪಿ ಬೆಳವಣಿಗೆಗೆ ಬೇಕಾದ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.

  ವೈರಲ್ ಫೋಟೋ: ಮದುವೆ ನಂತರ ಈ ನಟಿ ಹೇಗೆ ಬದಲಾದ್ರು ನೋಡಿವೈರಲ್ ಫೋಟೋ: ಮದುವೆ ನಂತರ ಈ ನಟಿ ಹೇಗೆ ಬದಲಾದ್ರು ನೋಡಿ

  ನಮಿತಾ ಅವರು ರಾಜಕೀಯ ಸೇರುವ ಸುದ್ದಿ ಎರಡು ಮೂರು ವರ್ಷಗಳಿಂದ ಗಿರಕಿ ಹೊಡೆಯುತ್ತಲೇ ಇತ್ತು. ಕೈಲಿ ಸಿನಿಮಾ ಇಲ್ಲ, ರಾಜಕೀಯಕ್ಕೆ ಸೇರದೆ ಏನು ಮಾಡುತ್ತಾರೆ ಬಿಡಿ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ, ಸೂಕ್ತ ಕಾಲಕ್ಕೆ ಕಾಯುತ್ತಿದ್ದ ನಮಿತಾ ಅವರಿಗೆ 'ಅಮ್ಮ' ಪಕ್ಷದಿಂದ ರೆಡ್ ಕಾರ್ಪೆಟ್ ಸ್ವಾಗತ ಸಿಕ್ಕಿತ್ತು. ತಮಿಳುನಾಡು ವಿಧಾನಸಭೆ ಚುನಾವಣೆ 2016ರಲ್ಲಿ ಸ್ಟಾರ್ ಪ್ರಚಾರಕಿಯಾಗಿ ಸೀರೆಯುಟ್ಟು ಪ್ರಚಾರಕ್ಕಿಳಿದಿದ್ದರು.

  2002 ರಲ್ಲಿ ತೆಲುಗು ಸಿನಿಮಾದ ಮೂಲಕ ನಮಿತಾ ಚಿತ್ರರಂಗ ಪ್ರವೇಶಿಸಿದರು. ನಂತರ ತಮಿಳು, ಹಿಂದಿ, ಮಲೆಯಾಳಂ ಸಿನಿಮಾಗಳಲ್ಲಿ ನಟಿಸಿದರು. ಕನ್ನಡದ 'ನೀಲಕಂಠ', 'ಹೂ','ಇಂದ್ರ', 'ಬೆಂಕಿ ಬಿರುಗಾಳಿ' ಸಿನಿಮಾದ ನಾಯಕಿ ನಟಿಯಾಗಿ ನಮಿತಾ ಕಾಣಿಸಿಕೊಂಡಿದ್ದಾರೆ. ಹೆಚ್ಚಾಗಿ ಗ್ಲಾಮರ್ ಪಾತ್ರಗಳ ಮೂಲಕವೇ ನಮಿತಾ ಗುರುತಿಸಿಕೊಂಡಿದ್ದಾರೆ.

  Read more about: namitha tollywood
  English summary
  South Indian actress Namitha joined Bharatiya Janata Party(BJP) in presence of party working president Jagat Prakash Nadda in Chennai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X