'ಬಿಲ್ಲಾ'ದಲ್ಲಿ ಒಟ್ಟಿಗೆ ನಟಿಸಿದ್ದರೂ ನಯನತಾರಾ ಒಂದು ಪದನೂ ಮಾತಾಡಿಲ್ಲ"; ನಮಿತಾ ಕೊಟ್ಟ ಕಾರಣವೇನು?
ತಮಿಳಿನ ಇಬ್ಬರು ಸ್ಟಾರ್ ನಟಿಯರು ನಮಿತಾ ಹಾಗೂ ನಯನತಾರಾ. ಈ ಇಬ್ಬರು ನಟಿಯರೂ ಅವರದ್ದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇಬ್ಬರೂ ದಕ್ಷಿಣ ಭಾರತದ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಮಿತಾ ಹಾಗೂ ನಯನತಾರಾ ಒಂದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ವೇಳೆ ನಡೆದ ಇಬ್ಬರೂ ಒಂದೇ ಒಂದು ಮಾತನ್ನೂ ಆಡಿಲ್ಲ ಎಂದು ನಟಿ ನಮಿತಾ ಹೇಳಿಕೊಂಡಿದ್ದಾರೆ.
ನಯನತಾರಾ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಮದುವೆ ಬಳಿಕವೂ ಅತೀ ಹೆಚ್ಚು ಬೇಡಿಕೆಯಿದೆ. ಅಷ್ಟೇ ಯಾಕೆ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ನಯನತಾರಾ. ಅದರಲ್ಲೂ ಬಾಲಿವುಡ್‌ಗೆ ಎಂಟ್ರಿ ಕೊಟ್ಟು ಶಾರುಖ್ ಖಾನ್ ಜೊತೆ 'ಜವಾನ್' ಸಿನಿಮಾದಲ್ಲಿ ನಟಿಸಿದ ಬಳಿಕ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ.

ಇತ್ತ ನಮಿತಾ ಸಿನಿಮಾ ಕೊಂಚ ದೂರವೇ ಉಳಿದಿದ್ದಾರೆ. ಆದರೆ, ನಮಿತಾ ಇರುವ ಕ್ರೇಜ್ ಏನು ಕಮ್ಮಿಯಿಲ್ಲ. ಈ ನಟಿಯ ಮೇಲಿನ ಅಭಿಮಾನಕ್ಕೆ ತಮಿಳಿನ ಅಭಿಮಾನಿಗಳು ಮಾಡಿರೋದು ಒಂದೆರಡಲ್ಲ. ನಮಿತಾಗಾಗಿ ತಮಿಳುನಾಡಿನಲ್ಲಿ ಒಂದು ಗುಡಿಯನ್ನೇ ಕಟ್ಟಿದ್ದಾರೆ. ಅಷ್ಟೇ ಅಲ್ಲದೆ ರಾಜಕೀಯದಲ್ಲೂ ಧುಮುಕಿದ್ದು, ಈ ಬಾರಿ ಚುನಾವಣೆಯಲ್ಲೂ ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ.
ನಯನತಾರಾ ಬಗ್ಗೆ ಮಾತಾಡಿದ ನಮಿತಾ ಹಳೆಯ ವಿಡಿಯೋ ವೈರಲ್ ಈಗ ಆಗುತ್ತಿದೆ. ಈ ವಿಡಿಯೊದಲ್ಲಿ ನಯನತಾರಾ ಬಗ್ಗೆ ನಮಿತಾ ಓಪನ್ ಆಗಿ ಮಾತಾಡಿದ್ದಾರೆ. ಅಜಿತ್ ಕುಮಾರ್ ನಟಿಸಿದ 'ಬಿಲ್ಲಾ' ಅನ್ನುವ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೆವು. ಆದರೆ ಒಂದೇ ಒಂದು ಬಾರಿಯೂ ಒಬ್ಬರಿಗೊಬ್ಬರು ಮಾತಾಡಿಕೊಂಡಿಲ್ಲ ಎಂದು ಹೇಳಿದ್ದಾರೆ.

'ಬಿಲ್ಲಾ' ಶೂಟಿಂಗ್ ವೇಳೆ ಇಬ್ಬರೂ ಒಂದೊಂದು ದಿಕ್ಕಿನಲ್ಲಿ ಇರುವುದನ್ನು ಕಂಡು ನಮಿತಾನೇ ಮಾತನಾಡುತ್ತಿಲ್ಲ ಎಂದು ಭಾವಿಸಿದ್ದರಂತೆ. ಈ ವಿಡಿಯೋದಲ್ಲಿ "ನಾನು ನಯನತಾರಾ ಜೊತೆ ಹೆಚ್ಚಾಗಿ ಮಾತನಾಡಿಲ್ಲ. ಬೇರೆ ನಟರು ಹೇಗಿದ್ದರು ಎಂದೂ ನನಗೆ ಗೊತ್ತಿಲ್ಲ. ಆದರೆ, ನಾನು ಯಾರೊಂದಿಗೂ ಮಾತನಾಡಿಲ್ಲ. ನನ್ನ ದೃಶ್ಯಗಳಲ್ಲಿ ನಾನು. ಅವರ ದೃಶ್ಯಗಳಲ್ಲಿ ಅವರು ನಟಿಸುತ್ತಾರೆ. ಈ ಸಂದರ್ಭದಲ್ಲಿ ನಮಿತಾ ಮೌನವಾಗಿ ಉರುವುದಕ್ಕೆ ಬಯಸಿದ್ದರು. ಆದರೆ, ನಾನು ಅದೆಲ್ಲದರಿಂದ ಹೊರಗುಳಿದಿದ್ದೆ. ಹೀಗಾಗಿ ಶೂಟಿಂಗ್ ವೇಳೆ ಪುಸ್ತಕವನ್ನು ಓದುತ್ತಿದ್ದೆ" ಎಂದು ಹೇಳಿಕೊಂಡಿದ್ದರು.
ಇದೇ ವೇಳೆ ಬಿಲ್ಲಾ ಸಿನಿಮಾದಲ್ಲಿ ನಮಿತಾ ನಟಿಸಿದ ದೃಶ್ಯಗಳು ಹೆಚ್ಚಾಗಿ ಸಿನಿಮಾದಲ್ಲಿ ಇರಲಿಲ್ವಂತೆ. ಅದನ್ನು ನೋಡಿ ನಮಿತಾ ಸಿಕ್ಕಾಪಟ್ಟೆ ನೇಸರವಾಗಿತ್ತು. ಅಜಿತ್ ಜೊತೆ ಸೇತುವೆಯ ಬಳಿ ನಿಂತಿರುವ ದೃಶ್ಯ ಸಿನಿಮಾದ ಪ್ರಮುಖ ಸೀನ್ ಆಗಿತ್ತು. ಅದರಲ್ಲೂ ನಮಿತಾಗೆ ಡೈಲಾಗ್ ಕೊಟ್ಟಿರಲಿಲ್ವಂತೆ. ನಿರ್ದೇಶಕರು ಡೈಲಾಗ್ ಇರೋದಿಲ್ಲ. ನಿಮ್ಮ ಕಣ್ಣುಗಳು ಮಾತಾಡಬೇಕು ಎಂದಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದರು.
ನಮಿತಾ ಸದ್ಯ ವಿವಾಹವಾಗಿ ಇಬ್ಬರ ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಹೀಗಾಗಿ ಸಿನಿಮಾದಿಂದ ಕೊಂಚ ಮಟ್ಟಿಗೆ ದೂರವೇ ಉಳಿದಿದ್ದಾರೆ. ರಾಜಕೀಯದ ಕಡೆಗೆ ಹೆಚ್ಚು ಒಲವು ತೋರಿದ್ದು, ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ಸಿದ್ಧವೆಂದು ಹೇಳಿಕೆ ಕೊಟ್ಟಿದ್ದರು. ಈ ಮೂಲಕ ಚುನಾವಣೆಗೆ ಸ್ಪರ್ಧೆ ಮಾಡುವ ಸುಳಿವು ನೀಡಿದ್ದರು.


Click it and Unblock the Notifications











