For Quick Alerts
  ALLOW NOTIFICATIONS  
  For Daily Alerts

  ಮತ್ತೆ ಸಂಭಾವನೆ ಹೆಚ್ಚಿಸಿಕೊಂಡ ನಯನತಾರಾ: ಚಿತ್ರವೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

  |

  ತಮಿಳು ಮತ್ತು ತೆಲುಗು ಚಿತ್ರರಂಗದ ಖ್ಯಾತ ನಟಿ ನಯನತಾರಾ ದಕ್ಷಿಣ ಭಾರತೀಯ ಚಿತ್ರರಂಗದಲ್ಲೆ ಅತೀ ಹೆಚ್ಚು ಸಂಭಾವನೆ ಪಡೆಯ ನಟಿ. ಕೋಟಿ ಕೋಟಿ ಸಂಭಾವನೆ ಪಡೆಯುವ ನಯನತಾರಾ ಈಗ ತನ್ನ ಸಂಭಾವನೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

  ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುವ ನಯನತಾರಾ ಈಗ ಸಂಭಾವನೆ ವಿಚಾರಕ್ಕೆ ಮತ್ತೆ ಸದ್ದು ಮಾಡುತ್ತಿದ್ದಾರೆ. ನಯನಾ ಈಗಾಗಲೆ ಚಿತ್ರವೊಂದಕ್ಕೆ 5 ಕೋಟಿವರೆಗೂ ಸಂಭಾವನೆ ಪಡೆಯುತ್ತಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇರುವ ನಯನಾ ದಕ್ಷಿಣ ಭಾರತೀಯ ಚಿತ್ರರಂಗದ ಬಹುಬೇಡಿಯ ನಟಿ. ಸುಮಾರು ಒಂದು ದಶಕಗಳಿಂದ ಚಿತ್ರರಂಗ ಆಳುತ್ತಿರುವ ನಯನತಾರಾ ಸದ್ಯ ಮುಂದಿನ ಚಿತ್ರಕ್ಕೆ ಬರೋಬ್ಬರಿ 8 ಬೇಡಿಕೆ ಇಟ್ಟಿದ್ದಾರಂತೆ.

  ಪ್ರಚಾರಕ್ಕೆ ಬಾರದ ನಯನತಾರಾಗೆ 'ಸೈರಾ' ನಿರ್ಮಾಪಕರಿಂದ ಸಿಕ್ಕ ಸಂಭಾವನೆ ಎಷ್ಟು.?ಪ್ರಚಾರಕ್ಕೆ ಬಾರದ ನಯನತಾರಾಗೆ 'ಸೈರಾ' ನಿರ್ಮಾಪಕರಿಂದ ಸಿಕ್ಕ ಸಂಭಾವನೆ ಎಷ್ಟು.?

  ಈ ಮೂಲಕ ಬಾಲಿವುಡ್ ನ ಯಾವ ನಟಿಗೂ ಕಮ್ಮಿ ಇಲ್ಲ ಎನ್ನುವುದನ್ನು ಸಾಬೀತು ಮಾಡುತ್ತಿದ್ದಾರೆ. ಬಾಲಿವುಡ್ ಟಾಪ್ ನಟಿಯರ ರೇಂಜ್ ಗೆ ಸಂಭಾವನೆ ಪಡೆಯುತ್ತಿರುವ ದಕ್ಷಿಣದ ಮೊದಲ ನಟಿ ಎನ್ನುವ ಖ್ಯಾತಿ ಕೂಡ ಅವರದ್ದಾಗಿದೆ. ನಯನಾ ಇತ್ತೀಚಿಗೆ ಬಿಗಿಲ್ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಅಲ್ಲದೆ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ದರ್ಬಾರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎರಡು ಸಿನಿಮಾಗೂ 5 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಇದೆ. ದರ್ಬಾರ್ ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ. ಅಲ್ಲದೆ ನಯನಾ ಇನ್ನು ಎರಡು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  ತಮಿಳು ಮತ್ತು ತೆಲುಗು ಚಿತ್ರರಗಂದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿರುವ ನಯನಾ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಹಸೆಮಣೆ ಏರಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮುಂದಿನ ವರ್ಷ ನಯನತಾರಾ ವಿಘ್ನೇಶ್ ಜೊತೆ ಸಪ್ತಪದಿ ತುಳಿಯುವ ಸಾಧ್ಯತೆ ಇದೆ.

  English summary
  South Indian famous actress Nayanthara demanding high remuneration for her next movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X