ಕೊನೆ ಪಕ್ಷ ಕ್ಷಮೆ ಕೇಳಲಿಲ್ಲ, ನಯನತಾರಗೆ ಎಷ್ಟು ಅಹಂಕಾರ ಎಂದು ಆಕ್ರೋಶ
ಬಹುಭಾಷಾ ನಟಿ ನಯನತಾರ ಪದೇ ಪದೆ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಇತ್ತೀಚೆಗೆ ತಮ್ಮ ಡಾಕ್ಯುಮೆಂಟರಿ ವಿಚಾರದಲ್ಲಿ ನಟ ಧನುಷ್ ಜೊತೆ ಕಾನೂನು ಸಮರದವರೆಗೂ ಹೋಗುವಂತಾಯಿತು. ಬಳಿಕ 'ಚಂದ್ರಮುಖಿ' ಸಿನಿಮಾ ನಿರ್ಮಾಪಕರು 5 ಕೋಟಿ ರೂ. ಪರಿಹಾರ ಕೇಳಿ ನೋಟಿಸ್ ನೀಡಿದ್ದರು.
ಮದುವೆ ಬಳಿಕ ಕೂಡ ನಯನತಾರ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿಯಾಗಿ ಮಾತ್ರವಲ್ಲದೇ ಉದ್ಯಮ ಕ್ಷೇತ್ರದಲ್ಲಿ ಕೂಡ ನಯನ್ ಗುರ್ತಿಸಿಕೊಂಡಿದ್ದಾರೆ. ಸಾಕಷ್ಟು ಜಾಹೀರಾತುಗಳಲ್ಲಿ ನಟಿಸಿ ಕೋಟಿ ಕೋಟಿ ದುಡಿಯುತ್ತಿದ್ದಾರೆ. ರಿಲೇಷನ್‌ಶಿಪ್, ಕಾಂಟ್ರವರ್ಸಿಗಳಿಂದ ಲೇಡಿ ಸೂಪರ್ ಸ್ಟಾರ್ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದರು. ಕೊನೆಗೆ ಸಾರೋಗಸಿ ಪದ್ಧತಿಯಲ್ಲಿ ಅವಳಿ ಮಕ್ಕಳನ್ನು ಪಡೆದಿದ್ದು ವಿವಾದಕ್ಕೆ ಹುಟ್ಟುಹಾಕಿತ್ತು.

ನಯನತಾರ ಹಾಗೂ ವಿಘ್ನೇಶ್ ಶಿವನ್ ದಂಪತಿ ವಿರುದ್ಧ ಇದೀಗ ನೆಟ್ಟಿಗರು ಕೆಂಡ ಕಾರುತ್ತಿದ್ದಾರೆ. ಆಕೆಗೆ ಎಷ್ಟು ಅಹಂಕಾರ? ಸ್ವಲ್ವ ಆದರೂ ಟೈಮ್‌ಸೆನ್ಸ್ ಇಲ್ವಾ? ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಮಧುರೆಯಲ್ಲಿ ನಡೆದ ಒಂದು ಕಾರ್ಯಕ್ರಮ ಅದಕ್ಕೆ ಕಾರಣ. ಲೇಡಿ ಸೂಪರ್ ಸ್ಟಾರ್ ಈಗಾಗಲೇ ಬ್ಯೂಟಿ ಪ್ರಾಡೆಕ್ಸ್ಟ್, ಲಿಪ್‌ಕೇರ್ ಬ್ರ್ಯಾಂಡ್ ಹೊಂದಿದ್ದಾರೆ. ಇತ್ತೀಚೆಗೆ ಫೇಮಿ9 ಎಂಬ ಸ್ಯಾನಿಟರಿ ಬ್ಯಾಪ್ಕಿನ್ ಕಂಪೆನಿ ಆರಂಭಿಸಿದ್ದರು.
ನಯನತಾರ ಫೆಮಿ9 ಉದ್ಯಮಕ್ಕೆ ಸಾಕಷ್ಟು ಮಹಿಳೆಯರು ಕೈ ಜೋಡಿಸಿದ್ದಾರೆ. ಅವರನ್ನೆಲ್ಲಾ ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಕಾರ್ಯಕ್ರಮಕ್ಕೆ 5 ಗಂಟೆ ತಡವಾಗಿ ನಯನತಾರ ಪತಿ ವಿಘ್ನೇಶ್ ಶಿವನ್ ಜೊತೆ ಬಂದಿದ್ದಾರೆ. ಕೊನೆ ಪಕ್ಷ ಕ್ಷಮೆ ಕೂಡ ಕೇಳದೇ ಕಾರ್ಯಕ್ರಮ ಮುಗಿಸಿ, ಎಲ್ಲರೊಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಪೋಸ್ಟ್ ವೈರಲ್ ಆಗುತ್ತಿದೆ.
ನಯನತಾರ ಮಾಡಿರುವ ಪೋಸ್ಟ್‌ಗೆ ಮೆಚ್ಚುಗೆಗಿಂತ ಆಕ್ರೋಶವೇ ಹೆಚ್ಚಾಗಿದೆ. ಸಾಕಷ್ಟು ಜನ ಆಕೆಯ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆಲವರು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ನಯನತಾರ ಬರೋಬ್ಬರಿ 6 ಗಂಟೆ ತಡವಾಗಿ ಬಂದಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಮುಗಿಯಬೇಕಿದ್ದ ಕಾರ್ಯಕ್ರಮ ಕೊನೆಗೊಂಡಾಗ 6 ಗಂಟೆ ಆಗಿತ್ತು. ಕೆಲವೊಮ್ಮೆ ಕಾರಣಾಂತರಗಳಿಂದ ಸೆಲೆಬ್ರೆಟಿಗಳು ಬರುವುದು ತಡವಾಗಬಹುದು. ಅರ್ಧ ಗಂಟೆ, ಒಂದು ಗಂಟೆ ತಡವಾಗಿ ಬಂದರೂ ಪರವಾಗಿಲ್ಲ. ಆದರೆ ಐದಾರು ಗಂಟೆ ತಡವಾಗಿ ಬರುವುದು ಅಂದರೆ ತಮಾಷೆಯ ಮಾತಲ್ಲ. ಅಷ್ಟು ಜನರನ್ನು ಕಾಯಿಸಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.
ಅಷ್ಟು ತಡವಾಗಿ ಬಂದರೂ ಕ್ಷಮೆ ಕೂಡ ಕೇಳದೇ ಏನೂ ಆಗಿಲ್ಲ ಎನ್ನುವಂತೆ ವೇದಿಕೆಯಲ್ಲಿ ಮಾತನಾಡಿ ಫೋಟೊ ಕ್ಲಿಕ್ಕಿಸಿಕೊಂಡು ಹೊರಟು ಹೋದ್ರಿ ಇದು ಯಾವ ನ್ಯಾಯ? ಅಷ್ಟು ಅಹಂಕಾರನಾ? ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ. ಎರಡು ದಿನಗಳ ಹಿಂದೆ ಮಧುರೆಯಲ್ಲಿ ಫೆಮಿ9 ಈವೆಂಟ್ ನಡೆದಿತ್ತು. ಅಂದು ಕಾರ್ಯಕ್ರಮಕ್ಕೆ ದೂರದ ಊರುಗಳಿಂದ ಜನ ಬಂದಿದ್ದರು. ಕೆಲವರು ಎರಡ್ಮೂರು ಗಂಟೆ ಕಾದಯ ಹೊರಟು ಹೋಗಿದ್ದರು.
ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ಮುಗಿಯುತ್ತದೆ ಎಂದು ಕಾದು ಕೂತವರು ಕೊನೆಗೆ 6 ಗಂಟೆಯ ಬಳಿಕ ತಮ್ಮ ತಮ್ಮ ಊರುಗಳಿಗೆ ತೆರಳಲು ಪರದಾಡುವಂತಾಯಿತು. ಮೊನ್ನೆ ಕಾರ್ಯಕ್ರಮ ತಡವಾದ ಬೆನ್ನಲ್ಲೇ ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಬಳಿಕ ನಯನತಾರ ಪೋಸ್ಟ್ ಮಾಡುತ್ತಿದ್ದಂತೆ ಕಾಮೆಂಟ್ ಸೆಕ್ಷನ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ನಯನತಾರ ಸಿನಿಮಾಗಳ ವಿಚಾರಕ್ಕೆ ಬಂದರೆ ಏಳೆಂಟು ಸಿನಿಮಾಗಳು ಆಕೆಯ ಕೈಯಲ್ಲಿವೆ. ಕನ್ನಡದ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಸಹೋದರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳಿನ 'ಟೆಸ್ಟ್', 'ಮಣ್ಣಗಟ್ಟಿ since 1960', 'ರಕ್ಕಾಯಿ' ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಎರಡು ಮಲಯಾಳಂ ಚಿತ್ರಗಳಿಗೂ ಬಣ್ಣ ಹಚ್ಚಿದ್ದಾರೆ.


Click it and Unblock the Notifications











