For Quick Alerts
  ALLOW NOTIFICATIONS  
  For Daily Alerts

  ಗಂಡನ ಎಡವಟ್ಟಿನಿಂದ ನಯನತಾರಾಗೆ ವಾಂತಿ; ಮ್ಯಾಟರ್ ಬೇರೇನೆ ಇದೆ!

  |

  ಜೂನ್ 9ರಂದು ಮಹಾಬಲಿಪುರಂನಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ನಟಿ ನಯನತಾರಾ ಹಸೆಮಣೆ ಏರಿದ್ದರು. ಹನಿಮೂನ್ ಸಹ ಮುಗಿಸಿ ಬಂದ ಜೋಡಿ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದ್ದಕ್ಕಿದಂತೆ ನಯನತಾರಾ ವಾಂತಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಂದಿದ್ದಾರೆ. ಅಷ್ಟಕ್ಕೂ ಇದಕ್ಕೆಲ್ಲಾ ಕಾರಣ ಗಂಡ ವಿಕ್ಕಿ ಅಂತೆ.

  ಐದಾರು ವರ್ಷಗಳ ವಿಘ್ನೇಶ್ ಹಾಗೂ ನಯನ್ ಮದುವೆ ಕೆಲ ದಿನಗಳ ಹಿಂದಷ್ಟೇ ಮದುವೆ ಮುದ್ರೆ ಬಿದ್ದಿತ್ತು. ಸೂಪರ್ ಸ್ಟಾರ್ ರಜನಿಕಾಂತ್, ಕಿಂಗ್ ಖಾನ್ ಶಾರೂಖ್ ಖಾನ್ ಸೇರಿದಂತೆ ಸಾಕಷ್ಟು ಗಣ್ಯರು ಮದುವೆ ಸಮಾರಂಭಕ್ಕೆ ಹಾಜರಾಗಿ ನಟ ಜೋಡಿಗೆ ಶುಭ ಹಾರೈಸಿದ್ದರು. ಮದುವೆ ನಂತರ ತಿರುಪತಿ ದೇವಸ್ಥಾನದ ಆವರಣದ್ಲಿ ನಯನತಾರಾ ಚಪ್ಪಲಿ ಧರಿಸಿ ಓಡಾಡಿದ್ದು ವಿವಾದ ಸೃಷ್ಟಿಸಿತ್ತು. ನಂತರ ವಿಘ್ನೇಶ್ ಶಿವನ್ ಅದಕ್ಕೆ ಕ್ಷಮೆ ಕೂಡ ಕೇಳಿದ್ದರು.

  ಶೀಘ್ರದಲ್ಲೇ ವಿಘ್ನೇಶ್ ಹಾಗೂ ನಯನತಾರಾ ಜೋಡಿಯ ಅದ್ಧೂರಿ ಕಲ್ಯಾಣೋತ್ಸವ ಸುಂದರ ಕ್ಷಣಗಳು ನೆಟ್‌ಫ್ಲಿಕ್ಸ್‌ನಲ್ಲಿ ಬರ್ತಿದೆ. ಅದರ ಪ್ರೋಮೊ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮತ್ತೊಂದ್ಕಡೆ ವಾಂತಿಯಿಂದ ಅಸ್ವಸ್ಥಗೊಂಡಿದ್ದ ನಯನತಾರಾ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದು ಬಂದಿದ್ದಾರೆ. ಅಷ್ಟಕ್ಕೂ ನಯನತಾರಾಗೆ ಆಸ್ಪತ್ರೆಗೆ ಸೇರಲು ಕಾರಣ ಪತಿ ವಿಘ್ನೇಶ್ ಶಿವನ್ ಮಾಡಿದ್ದ ಸ್ಪೆಷಲ್ ಡಿಶ್.

  ನಯನತಾರಾ ವಾಂತಿ!

  ನಯನತಾರಾ ವಾಂತಿ!

  ಮುದ್ದಿನ ಮಡದಿಗೆ ವೀಕೆಂಡ್‌ನಲ್ಲಿ ವಿಘ್ನೇಶ್ ಶಿವನ್ ಸ್ಪೆಷಲ್ ಅಡುಗೆ ಮಾಡಿ ಬಡಿಸಿದ್ದಾರೆ. ಪತಿಯ ಪ್ರೀತಿಗೆ ಕರಗಿದ ನಯನತಾರಾ ಖುಷಿಯಿಂದ ಊಟ ಮಾಡಿದ್ದಾರೆ. ಆದರೆ ನಂತರ ಹೊಟ್ಟೆ ಕೆಟ್ಟು ನಯನತಾರಾ ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಾಗಿ ಬಹುಭಾಷಾ ನಟಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರು ಕೆಲ ಹೊತ್ತು ನಿಗಾದಲ್ಲಿಟ್ಟು ಚೇತರಿಸಿಕೊಂಡ ಬಳಿಕ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿದ್ದಾರಂತೆ.

  ನಯನತಾರಾಗೆ ಸ್ಕಿನ್ ಅಲರ್ಜಿ!

  ನಯನತಾರಾಗೆ ಸ್ಕಿನ್ ಅಲರ್ಜಿ!

  ಆಸ್ಪತ್ರೆಗೆ ಸೇರಿದ ನಟಿ ನಯನತಾರಾಗೆ ವಾಂತಿಯ ಜೊತೆಗೆ ಸ್ಕಿನ್ ಅಲರ್ಜಿ ಕೂಡ ಆಗಿತ್ತಂತೆ. ಒಟ್ಟಾರೆ ನಯನ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದು, ಈ ಸುದ್ದಿ ಬಗ್ಗೆ ನಯನತಾರಾ ಆಗಲಿ ವಿಘ್ನೇಶ್ ಶಿವನ್ ಆಗಲಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.

  ಅದ್ಧೂರಿ ಕಲ್ಯಾಣೋತ್ಸವ ವಿಡಿಯೋ

  ಅದ್ಧೂರಿ ಕಲ್ಯಾಣೋತ್ಸವ ವಿಡಿಯೋ

  'ನಯನತಾರಾ: ಬಿಯಾಂಡ್ ದಿ ಫೇರ್‌ಟೇಲ್‌' ಹೆಸರಿನಲ್ಲಿ ನೆಟ್‌ಫ್ಲಿಕ್ಸ್‌ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ಸುಂದರ ಕ್ಷಣಗಳ ವಿಷ್ಯುವಲ್ಸ್‌ನ ಸ್ಟ್ರೀಮಿಂಗ್ ಮಾಡ್ತಿದೆ. ಅದರ ಸಣ್ಣ ಪ್ರೋಮೊ ಸಹ ರಿಲೀಸ್ ಆಗಿದ್ದು ಸಖತ್ ವೈರಲ್ ಆಗಿದೆ. ಗಂಡ ಹೆಂಡತಿ ಇಬ್ಬರು ಒಬ್ಬರ ಬಗ್ಗೆ ಮಾತನಾಡಿದ್ದಾರೆ.

  English summary
  Actress Nayanatara hopitalised Because of Food Poisoning.
  Wednesday, August 10, 2022, 10:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X