ಮೀನಾ ಮುಂದೆ ಆಟಿಟ್ಯೂಡ್ ತೋರಿಸಿದ್ರಾ ನಯನತಾರಾ? ಮೀನಾ ತಿರುಗೇಟು ಏನು?

ಚಿತ್ರರಂಗದಲ್ಲಿ ಸಣ್ಣಪುಟ್ಟ ಮನಸ್ತಾಪಗಳು, ಕಿರಿಕ್‌ಗಳು ಸರ್ವೇಸಾಮಾನ್ಯ. ನಟ, ನಟಿಯರ ನಡುವೆ ಕೂಡ ಸಾಕಷ್ಟು ಸಂಘರ್ಷ ಏರ್ಪಟ್ಟಿರುವ ಉದಾಹರಣೆಗಳಿವೆ. ಇದೀಗ ತಮಿಳು ನಟಿಯರಾದ ನಯನತಾರಾ ಹಾಗೂ ಮೀನಾ ನಡುವೆ ಶೀತಲ ಸಮರ ನಡೆಯುತ್ತದೆ ಎಂದು ಗುಲ್ಲಾಗಿದೆ. ಮೀನಾ ಮಾಡುತ್ತಿರುವ ಕೆಲ ಪೋಸ್ಟ್‌ಗಳು ಇದಕ್ಕೆ ಮತ್ತಷ್ಟು ಇಂಬು ಕೊಡುತ್ತಿದೆ.

ದಶಕದ ಕಾಲ ಸ್ಟಾರ್ ನಟಿಯಾಗಿ ಮೆರೆದವರು ಮೀನಾ. ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ವಿಷ್ಣುವರ್ಧನ್, ವಿಜಯ್, ಅಜಿತ್ ರೀತಿಯ ಸೂಪರ್ ಸ್ಟಾರ್‌ಗಳ ಜೊತೆ ನಟಿಸಿ ಗೆದ್ದವರು. ನಯನತಾರ ಕೂಡ ಕಮ್ಮಿ ಏನಿಲ್ಲ. ಅಭಿಮಾನಿಗಳಿಂದ ಲೇಡಿ ಸೂಪರ್ ಸ್ಟಾರ್ ಎಂಬ ಬಿರುದು ಪಡೆದವರು. ಇವರಿಬ್ಬರು ಇದೀಗ 'ಮೂಕುಟ್ಟಿ ಅಮ್ಮನ್'-2 ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡ ನಟ ದುನಿಯಾ ವಿಜಯ್ ಕೂಡ ನೆಗೆಟಿವ್ ರೋಲ್‌ನಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

Actress Nayanthara Insult actress Meena in recent film Event

ಇತ್ತೀಚೆಗೆ ಚೆನ್ನೈನಲ್ಲಿ 'ಮೂಕುಟ್ಟಿ ಅಮ್ಮನ್'- 2 ಸಿನಿಮಾ ಮುಹೂರ್ತ ಸಮಾರಂಭ ನಡೀತು. ದುನಿಯಾ ವಿಜಯ್ ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಚಿತ್ರದಲ್ಲಿ ನಯನತಾರ ಟೈಟಲ್ ರೋಲ್ ಪ್ಲೇ ಮಾಡುತ್ತಿದ್ದಾರೆ. 5 ವರ್ಷಗಳ ಹಿಂದೆ ಬಂದಿದ್ದ 'ಮೂಕುಟ್ಟಿ ಅಮ್ಮನ್' ಸಿನಿಮಾ ಹಿಟ್ ಆಗಿತ್ತು. ಖುಷ್ಬು ಪತಿ ಸುಂದರ್ ಸೀಕ್ವೆಲ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಮೂಕುಟ್ಟಿ ಅಮ್ಮನ್'- 2 ಚಿತ್ರದಲ್ಲಿ ನಯನತಾರ, ಮೀನಾ, ದುನಿಯಾ ವಿಜಯ್, ರೆಜಿನಾ ಕಸೆಂದ್ರಾ, ಯೋಗಿ ಬಾಬು, ರಾಮಚಂದ್ರರಾಜು, ಅಭಿನಯ, ಊವರ್ಶಿ ಸೇರಿ ದೊಡ್ಡ ತಾರಾಗಣವಿದೆ. ಬಹುತೇಕರು ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗಿದ್ದರು. ಆದರೆ ವೇದಿಕೆಯಲ್ಲಿ ನಯನತಾರ ಹಾಗೂ ಮೀನಾ ಪರಸ್ಪರ ಮುಖ ಕೊಟ್ಟು ಮಾತನಾಡಲಿಲ್ಲ, ಇಬ್ಬರ ನಡುವೆ ಕೋಲ್ಡ್ ವಾರ್ ನಡೀತಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ವೇದಿಕೆ ಮೇಲೆ ನಯನತಾರ ಇದ್ದಾಗ ಖುಷ್ಭು ಹಾಗೂ ಮೀನಾ ಒಟ್ಟಿಗೆ ಹತ್ತಿರ ಹೋಗಿದ್ದಾರೆ. ಆಗ ಖುಷ್ಬು ಅವರನ್ನು ಅಪ್ಪಿ ನಯನತಾರ ಮಾತನಾಡಿಸಿದ್ದಾರೆ. ಆದರೆ ಜೊತೆಯಲ್ಲೇ ಇದ್ದ ಮೀನಾ ಅವರನ್ನು ಕ್ಯಾರೆ ಎನ್ನಲಿಲ್ಲ. ಇದು ವೀಡಿಯೋಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಮೀನಾ ಕಡೆ ತಿರುಗಿ ಸಣ್ಣ ಕಿರುನಗೆ ಕೂಡ ಆಗಿ ಬೀರಿಲ್ಲ. ಬಳಿಕ ಎಲ್ಲರೂ ಒಟ್ಟಿಗೆ ನಿಂತು ಫೋಟೊಗಳಿಗೆ ಪೋಸ್ ಕೊಟ್ಟಿದ್ದಾರೆ.

Actress Nayanthara Insult actress Meena in recent film Event

ನಯನತಾರಾಗೆ ಬಹಳ ಆಟಿಟ್ಯೂಡ್. ಜನಪ್ರಿಯ ನಟಿ ಹತ್ತಿರ ಬಂದು ಮಾತನಾಡಿಸಲಿಲ್ಲ, ಆಕೆಗೆ ಕೊಂಚ ಆಟಿಟ್ಯೂಡ್ ಎಂದು ಎಲ್ಲರೂ ಹೇಳುತ್ತಿರುತ್ತಾರೆ. ಈ ವೀಡಿಯೋ ನೋಡಿದರೆ ಅದು ಸ್ಪಷ್ಟವಾಗುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ನಯನ್ ಅಭಿಮಾನಿಗಳು ಈ ಆರೋಪ ಒಪ್ಪಲು ಸಿದ್ಧರಿಲ್ಲ. ಅವರಿಬ್ಬರು ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ, ಮಾತನಾಡಿದ್ದಾರೆ. ಸುಮ್ಮನೆ ಆರೋಪ ಮಾಡಬೇಡಿ ಎಂದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹೀಗೆ ಭಾರೀ ಚರ್ಚೆ ಆಗುತ್ತಿರುವ ಸಮಯದಲ್ಲೇ ನಟಿ ಮೀನಾ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿರುವ ಕೆಲ ಪೋಸ್ಟ್‌ಗಳು ವೈರಲ್ ಆಗುತ್ತಿದೆ. ನಯನತಾರಾಗೆ ಪರೋಕ್ಷವಾಗಿ ತಿರುಗೇಟು ನೀಡಿ ಮೀನಾ ಹೀಗೆ ಗೂಡಾರ್ಥದ ಪೋಸ್ಟ್‌ ಮಾಡುತ್ತಿದ್ದಾರೆ ಎಂದು ಚರ್ಚೆ ನಡೀತಿದೆ. ಕುರಿಗಳ ನಡುವೆ ಸಿಂಹ ನಿಂತಿರುವ ಫೋಟೊವನ್ನು ಮೀನಾ ಹಂಚಿಕೊಂಡಿದ್ದಾರೆ.

ಕುರಿಗಳು ತನ್ನ ಬಗ್ಗೆ ಏನು ಯೋಚಿಸುತ್ತವೆ, ಮಾತನಾಡುತ್ತವೆ ಎಂದು ಸಿಂಹ ಯೋಚಿಸುತ್ತಾ ಸಮಯ ವ್ಯರ್ಥ ಮಾಡಿಕೊಳ್ಳಲ್ಲ ಎಂದು ಆ ಫೋಟೊದಲ್ಲಿ ಹಾಕಲಾಗಿದೆ. "ನಿಮ್ಮ ದಯಾಳು ಹೃದಯದ ಬಗ್ಗೆ ಹೆಮ್ಮೆ ಪಡಿ, ಎಲ್ಲರಲ್ಲೂ ಅದು ಇರುವುದಿಲ್ಲ" ಎನ್ನುವ ಮತ್ತೊಂದು ಕೋಟ್ ಅನ್ನು ಕೂಡ ಮೀನಾ ಹಂಚಿಕೊಂಡಿದ್ದಾರೆ. ಇದನ್ನೆಲ್ಲಾ ನೋಡಿ ಆಕೆ ಪರೋಕ್ಷವಾಗಿ ನಯನತಾರ ಬಗ್ಗೆ ಕಾಮೆಂಟ್ ಮಾಡಿದ್ದಾರೆ ಎಂದು ಚರ್ಚೆ ನಡೀತಿದೆ.

ಈ ಹಿಂದೆ 'ಅಣ್ಣಾತ್ತೆ' ಚಿತ್ರದಲ್ಲಿ ಕೂಡ ನಯನತಾರಾ ಹಾಗೂ ಮೀನಾ ಒಟ್ಟಿಗೆ ನಟಿಸಿದ್ದರು. ಆದರೆ ಈ ಚಿತ್ರದ ಬಗ್ಗೆ ಖುಷ್ಬು ಮಾಡಿದ್ದ ಕಾಮೆಂಟ್ ಹಿಂದೆ ವೈರಲ್ ಆಗಿತ್ತು. ಆರಂಭದಲ್ಲಿ ನಮಗೆ ಕಥೆ ಹೇಳಿದಾಗ ಚಿತ್ರದಲ್ಲಿ ನಾಯಕಿ ಇರಲ್ಲ ಎಂದಿದ್ದರು. ಆದರೆ ಬಳಿಕ ನಿಧಾನವಾಗಿ ನಾಯಕಿಯ ಪಾತ್ರ ಬಂದು ಕಥೆ ಎಲ್ಲೆಲ್ಲೋ ಹೋಯಿತು. ನಮ್ಮಿಬ್ಬರ ಪಾತ್ರಗಳಿಗೆ ಮಹತ್ವ ಕಮ್ಮಿ ಆಗಿತ್ತು ಎಂದು ಮೀನಾ ಹೇಳಿದ್ದರು. ಆ ಚಿತ್ರದಲ್ಲಿ ನಯನತಾರ ನಾಯಕಿಯಾಗಿ ನಟಿಸಿದ್ದರು.

More from Filmibeat

English summary
Did Nayanthara show attitude towards Meena at the Mookuthi Amman- 2 film launch event
Read more about: kollywood nayanthara meena
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X