"ನನ್ನನ್ನು ಹಂಗೆಲ್ಲಾ ಕರೆಯಬೇಡಿ"; 'ಟಾಕ್ಸಿಕ್' ನಟಿ ನಯನತಾರ ಮನವಿ

ತಮಿಳು ನಟಿ ನಯನತಾರ ಈ ವರ್ಷ ಕೂಡ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕನ್ನಡದ 'ಟಾಕ್ಸಿಕ್' ಸೇರಿ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಈ ವರ್ಷ ಆಕೆ ನಟಿಸಿದ ಯಾವುದೇ ಸಿನಿಮಾ ಬಿಡುಗಡೆ ಆಗುವುದು ಅನುಮಾನ ಎನ್ನುವಂತಾಗಿದೆ. ತಮ್ಮ ಕರಿಯರ್‌ಯಲ್ಲಿ ಹೀಗೆ ಆಗುತ್ತಿರುವುದು ಇದೇ ಮೊದಲು ಎಂದು ಆಕೆ ಹೇಳಿದ್ದರು.

ಅವಳಿ ಮಕ್ಕಳ ಲಾಲನೆ ಪಾಲನೆ ಜೊತೆ ಜೊತೆಗೆ ನಯನತಾರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪತಿ ವಿಘ್ನೇಶ್ ಶಿವನ್ ಜೊತೆ ಸೇರಿ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಇದೆಲ್ಲದರ ನಡುವೆ ನಯನತಾರ ಅಭಿಮಾನಿಗಳು ಹಾಗೂ ಮಾಧ್ಯಮದವರಲ್ಲಿ ಒಂದು ಮನವಿ ಮಾಡಿದ್ದಾರೆ. ಆ ಬಗ್ಗೆ ಬಹಿರಂಗ ಪತ್ರ ಬರೆದಿದ್ದಾರೆ.

Actress Nayanthara requested fans to not call her Lady Superstar

ಸಿನಿಮಾ ನಟ, ನಟಿಯರಿಗೆ ಅಭಿಮಾನಿಗಳು ಬಿರುದು ಕೊಡುವುದು ಸರ್ವೇ ಸಾಮಾನ್ಯ. ಒಂದು ಹಿಟ್ ಸಿನಿಮಾ ಕೊಡುತ್ತಿದ್ದಂತೆ ಕೆಲವರಿಗೆ ಬಿರುವು ಬಾವಲಿಗಳು ಸಿಕ್ಕಿಬಿಡುತ್ತದೆ. ಕೆಲವರು ಬಿರುದಿನ ಜೊತೆಗೆ ಚಿತ್ರರಂಗಕ್ಕೆ ಬರುವುದು ಇದೆ. ಕೆಲ ಸಂಘ ಸಂಸ್ಥೆಗಳು ನಟ, ನಟಿಯರಿಗೆ ಬಿರುದುಗಳನ್ನು ನೀಡಿ ಸನ್ಮಾನಿಸುವುದನ್ನು ನೋಡಿದ್ದೇವೆ. ಸಿನಿಮಾ ತಂಡಗಳು ಕೂಡ ಟೈಟಲ್‌ ಕಾರ್ಡ್‌ನಲ್ಲಿ ಬಿರುದು ಸೇರಿಸಿ ನಟ, ನಟಿಯರ ಹೆಸರು ಹಾಕುವುದು ಗೊತ್ತೇಯಿದೆ.

ನಟಸಾರ್ವಭೌಮ ಡಾ. ರಾಜ್‌ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಶ್, ಕರಾಟೆ ಕಿಂಗ್ ಶಂಕರ್ ನಾಗ್, ಅಭಿನಯ ಚಕ್ರವರ್ತಿ ಸುದೀಪ್, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀಗೆ ಸ್ಟಾರ್‌ ನಟರಿಗೆಲ್ಲಾ ಬಿರುದುಗಳಿವೆ. ಅಣ್ಣಾವ್ರನ್ನು ಹಲವು ಬಿರುದುಗಳೊಂದಿಗೆ ಅಭಿಮಾನಿಗಳು ಕರೆಯುತ್ತಿದ್ದರು. ಎಲ್ಲಾ ಭಾಷೆಗಳಲ್ಲೂ ಹೀಗೆ ನಟ, ನಟಿಯರಿಗೆ ಬಿರುದುಗಳನ್ನು ಕೊಡಲಾಗಿದೆ.

ಇತ್ತೀಚೆಗೆ ತಮಿಳು ನಟರಾದ ಕಮಲ್ ಹಾಸನ್ ಹಾಗೂ ಅಜಿತ್ ತಮಗೆ ಯಾವುದೇ ಬಿರುದು ಬೇಡ. ನಮ್ಮ ಹೆಸರಿನಿಂದ ನಮ್ಮನ್ನು ಕರೆದರೆ ಸಾಕು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಉಳಗನಾಯಗನ್ ಬಿರುದು ಬೇಡ ಎಂದು ಕಮಲ್ ಹೇಳಿದ್ದರು. ಅದೇ ರೀತಿ ಅಜಿತ್ ನನ್ನನ್ನು ಥಲಾ ಎಂದು ಕರೆಯಬೇಡಿ ಎಂದು ಮನವಿ ಮಾಡಿದ್ದರು. ಇವರಿಬ್ಬರ ಹಾದಿಯಲ್ಲಿ ಇದೀಗ ನಯನತಾರ ಸಾಗಿದ್ದಾರೆ.

ನಯನತಾರಾ ಅವರನ್ನು ಲೇಡಿ ಸೂಪರ್ ಸ್ಟಾರ್ ಎಂದು ಕೆಲವರು ಕರೆಯುತ್ತಿದ್ದಾರೆ. ಅದನ್ನು ನಿಲ್ಲಿಸುವಲ್ಲಿ ಆಕೆ ಪತ್ರ ಬರೆದು ಮನವಿ ಮಾಡಿದ್ದಾರೆ. ಅಭಿಮಾನಿಗಳ ಪ್ರೀತಿಗೆ ನಾನು ಶರಣು. ಆದರೆ ಯಾವುದೇ ಬಿರುದು ನನಗೆ ಬೇಡ, ನನ್ನನ್ನು ನಯನತಾರಾ ಎಂದು ಕರೆದರೆ ಸಾಕು ಎಂದು ಹೇಳಿದ್ದಾರೆ.

"ನನ್ನ ಜೀವನವು ನಿಮ್ಮ ಪ್ರೀತಿ ಮತ್ತು ವಾತ್ಸಲ್ಯದಿಂದ ಯಾವಾಗಲೂ ಅಲಂಕರಿಸಲ್ಪಟ್ಟ ತೆರೆದ ಪುಸ್ತಕವಾಗಿದೆ. ನನ್ನ ಯಶಸ್ಸಿನ ಸಮಯದಲ್ಲಿ ನನ್ನ ಭುಜ ತಟ್ಟಿದ್ದು ಅಥವಾ ಕಷ್ಟಗಳ ಸಮಯದಲ್ಲಿ ನನ್ನನ್ನು ಎತ್ತಲು ನಿಮ್ಮ ಕೈ ಚಾಚಿದ್ದೀರಿ, ನೀವು ಯಾವಾಗಲೂ ನನ್ನೊಂದಿಗೆ ಇದ್ದೀರಿ.
ನಿಮ್ಮಲ್ಲಿ ಹಲವರು ನನ್ನನ್ನು "ಲೇಡಿ ಸೂಪರ್‌ಸ್ಟಾರ್" ಎಂದು ಪ್ರೀತಿಯಿಂದ ಕರೆಯುತ್ತೀರಿ, ಅದು ನಿಮ್ಮ ಅಪಾರ ಪ್ರೀತಿಯಿಂದ ಹುಟ್ಟಿದ ಬಿರುದು. ನನಗೆ ಅಂತಹ ಅಮೂಲ್ಯವಾದ ಬಿರುದನ್ನು ನೀಡಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ತುಂಬಾ ಋಣಿಯಾಗಿದ್ದೇನೆ. ಆದಾಗ್ಯೂ, ನೀವೆಲ್ಲರೂ ನನ್ನನ್ನು 'ನಯನತಾರಾ' ಎಂದು ಕರೆಯಬೇಕೆಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ" ಎಂದು ನಯನತಾರ ಬರೆದುಕೊಂಡಿದ್ದಾರೆ.

'ನಯನತಾರಾ' ಎಂಬ ಹೆಸರು ನನ್ನ ಹೃದಯಕ್ಕೆ ಹತ್ತಿರವಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ಒಬ್ಬ ನಟನಾಗಿ ಮಾತ್ರವಲ್ಲದೆ ಒಬ್ಬ ವ್ಯಕ್ತಿಯಾಗಿಯೂ ನಾನು ಯಾರೆಂದು ಪ್ರತಿನಿಧಿಸುತ್ತದೆ. ಬಿರುದುಗಳು ಮತ್ತು ಪುರಸ್ಕಾರಗಳು ಅಮೂಲ್ಯವಾದವು, ಆದರೆ ಅವು ಕೆಲವೊಮ್ಮೆ ನಮ್ಮ ಕೆಲಸ ಹಾಗೂ ಪ್ರೇಕ್ಷಕರೊಂದಿಗೆ ನಾವು ಹಂಚಿಕೊಳ್ಳುವ ಬಂಧವನ್ನು ಬೇರ್ಪಡಿಸುತ್ತದೆ" ಎಂದು ನಟಿ ನಯನತಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

More from Filmibeat

English summary
After Ajith and Kamal Haasan now Actress Nayanthara requested her fans and the media to stop referring to her by her tag name
Read more about: kollywood nayanthara
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X