ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿ ಎಂದ 'ಕಿರಾತಕ'ನ ಬೆಡಗಿ ಓವಿಯಾ
ಕಲಾವಾಣಿ ಚಿತ್ರದ ಮೂಲಕ ಓವಿಯಾ ತಮಿಳು ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದ ನಟಿ ಓವಿಯಾ ರಾಕಿಂಗ್ ಸ್ಟಾರ್ ಯಶ್ ನಟನೆಯ 'ಕಿರಾತಕ' ಚಿತ್ರದ ಮೂಲಕ ಚಂದನವನಕ್ಕೂ ಕಾಲಿಟ್ಟಿದ್ದರು. ಬಿಗ್‌ಬಾಸ್‌ನಲ್ಲಿ ಭಾಗಿಯಾಗಿ ಸುದ್ದಿಯಾಗಿದ್ದ ಓವಿಯಾ ಈಗ ನಟಿ ಸೆಕ್ಸ್ ಎಜುಕೇಷನ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕಲಾವಾಣಿ ಚಿತ್ರದ ಓವಿಯಾ ತಮಿಳು ಚಿತ್ರರಂಗಕ್ಕೆ ನಾಯಕಿಯಾಗಿ ಬಂದಿದ್ದರು. ಇದರಿಂದ ಸಾಕಷ್ಟು ಅಭಿಮಾನಿಗಳನ್ನು ಆಕರ್ಷಿಸಿತ್ತು. ಆದರೆ, ಚಲನಚಿತ್ರ ಅವಕಾಶಗಳು ಕ್ಷೀಣಿಸಿದವು. ನಂತರ ಸುಂದರ್ ಸಿ ನಿರ್ದೇಶನದ ಕಾಲಕಲಪ್ಪು ಚಿತ್ರದಲ್ಲಿ ಕಾಣಿಸಿಕೊಂಡಿದ್ದರಯ. ಅದರಲ್ಲಿ ಓವಿಯಾ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ನಂತರ ಅವರು ಕೆಲವು ಚಿತ್ರಗಳಲ್ಲಿ ನಟಿಸಿದರು, ಆದರೆ ಆ ಸಿನಿಮಾಗಲು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಲಿಲ್ಲ.

ವೇಶ್ಯಾವಾಟಿಕೆ ಬಗ್ಗೆ ನಟಿ ಓವಿಯಾ ಮುಕ್ತ ಮಾತು
ವೇಶ್ಯಾವಾಟಿಕೆ ಮತ್ತು ಸೆಕ್ಸ್ ಎಜುಕೇಷನ್ ಬಗ್ಗೆ ಕಿರಾತಕನ ಬೆಡಗಿ ನಟಿ ಓವಿಯಾ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಅವರ ಈ ಮಾತು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಓವಿಯಾ ಮಾತಿಗೆ ಮೆಚ್ಚುಗೆ ನೀಡುತ್ತಿದ್ದರೆ, ಇನ್ನೂ ಕೆಲವರು ತೀವ್ರ ಟೀಕೆ ಮಾಡುತ್ತಿದ್ದಾರೆ.
ಅಷ್ಟಕ್ಕೂ ನಟಿ ಓವಿಯಾ ಹೇಳಿದ್ದು ಏನೆಂದರೆ, "ನಮಗೆ ಲೈಂಗಿಕ ಶಿಕ್ಷಣದಿಂದ ಏನು ಪ್ರಯೋಜನ..? ಇದನ್ನು ಪ್ರಾಯೋಗಿಕವಾಗಿ ಮಾಡಬೇಕು. ಎಲ್ಲರೂ ಮುಖವಾಡ ಧರಿಸಿ ಬದುಕುತ್ತಿದ್ದಾರೆ. ಪ್ರತಿಯೊಬ್ಬರಿಗೂ ಆಸೆಗಳಿರುತ್ತವೆ. ಹಾರ್ಮೋನುಗಳು ಇವೆ. ಅನೇಕ ಜನರು ಸಂಸ್ಕೃತಿಯ ಹಿಂದೆ ಅಡಗಿದ್ದಾರೆ. ಇದೇ ಸತ್ಯ. ಹೀಗಾಗಿ ಅದನ್ನ ತಣಿಸಲು ವೇಶಾವಾಟಿಕೆಯನ್ನ ಕಾನೂನುಬದ್ಧಗೊಳಿಸಬೇಕಿದೆ. ಇಂತಹ ಕಾನೂನಿನಿಂದ ಅತ್ಯಾಚಾರದಂತಹ ಪ್ರಕರಣಗಳು ಕಡಿಮೆ ಆಗುತ್ತವೆ" ಎಂದಿದ್ದಾರೆ. ಸದ್ಯ ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆ ಮಾಡುತ್ತಿದ್ದಾರೆ. ಇವರಿಗೆ ಈಗ ಯಾವುದೇ ಸಿನಿಮಾಗಳು ಸಿಗುತ್ತಿಲ್ಲ. ಅದಕ್ಕೆ ಹೀಗೆ ವಿವಾದ ಆಗುವಂತೆ ಹೇಳಿಕೆ ನೀಡಿ ಸುದ್ದಿಯಾಗುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.
ತಮಿಳು ಬಿಗ್ ಬಾಸ್ ಮೊದಲ ಸೀಸನ್‌ನಲ್ಲಿ ಓವಿಯಾ
ಸಿನಿಮಾ ಅವಕಾಶಗಳು ಕೈಕೊಟ್ಟ ನಂತರ ನಟಿ ಓವಿಯಾ ತಮಿಳು ಬಿಗ್ ಬಾಸ್ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದ ಅವರು ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಓವಿಯಾ ಅವರ ಮಾತು, ನಡವಳಿಕೆ ನೋಡಿ ಜನ ಆಕೆಯನ್ನು ಇಷ್ಟಪಟ್ಟಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಕೂಡ ಹರಿದಾಡುತ್ತಿತ್ತು. ಒವಿಯಾ ತುಂಬಾ ಫೇಮಸ್ ಆಗಿದ್ದರಿಂದ ಮೊದಲ ಸೀಸನ್ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಅವರಿಗೆ ಪ್ರಶಸ್ತಿ ಸಿಗಲಿಲ್ಲ. ಇದಾದ ನಂತರ ಓವಿಯಾ ಕಾಂಚನ 3, 90 ಎಂಎಲ್ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಎರಡೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಯಶಸ್ಸು ಪಡೆದಿವೆ.
ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಪ್ರಚಾರ ಪಡೆದ ನಂತರವೂ ಸಿನಿಮಾ ಅವಕಾಶಗಳು ಸಿಗದ ಹಿನ್ನೆಲೆಯಲ್ಲಿ ಓವಿಯಾ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಇನ್ನೂ ಅವರು ಮದುವೆಯಾಗಿಲ್ಲ. ಅದಕ್ಕೆ ಕಾರಣ ಆರವ್ ಎಂದು ಹೇಳಲಾಗಿದೆ. ಬಿಗ್ ಬಾಸ್‌ನ ಮೊದಲ ಸೀಸನ್‌ನಲ್ಲಿ ಓವಿಯಾ ಆರವ್‌ಗೆ ಹೆಚ್ಚು ಹತ್ತಿರವಾಗಿದ್ದು. ಆದರೆ ಆರವ್ ಈ ಬಗ್ಗೆ ಸ್ಪಷ್ಟನೆ ನೀಡಿ ಎಲ್ಲವನ್ನೂ ನಿರಾಕರಿಸಿದ್ದರು.


Click it and Unblock the Notifications











