ಕಿರಾತಕ ಬೆಡಗಿಯ ಖಾಸಗಿ ವಿಡಿಯೋ ಲೀಕ್, ಅಲ್ಲಿರೋದು ನೀವೇನಾ ಎಂದಿದ್ದಕ್ಕೆ ಬೆಂಕಿ ಉತ್ತರ ನೀಡಿದ ಓವಿಯಾ..!

ಓವಿಯಾ ಗೊತ್ತಲ್ವಾ..? ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ಚೆಲುವೆ. ಕಿರಾತಕ ಚಿತ್ರದಲ್ಲಿ ಯಶ್ ಗೆ ಜೋಡಿಯಾಗುವ ಮೂಲಕ ಕನ್ನಡಿಗರ ಹೃದಯಕ್ಕೂ ಕನ್ನ ಹಾಕಿದವರು ಇವರು. ತಮ್ಮ ಒಂದೂವರೆ ದಶಕದ ಸಿನಿಮಾ ಪ್ರಯಾಣದಲ್ಲಿ ಖ್ಯಾತಿಯ ತುತ್ತ ತುದಿಯನ್ನೂ ತಲುಪಿ, ಏಕಾಏಕಿ ದೊಪ್ಪನೆ ಬಿದ್ದ ಓವಿಯಾ ಬಿಗ್ ಬಾಸ್‌ ಮನೆಯನ್ನೂ ಪ್ರವೇಶಿಸಿದರು. ಆದರೆ ಅಲ್ಲಿ ತಮಿಳು ನಟ ಆರವ್ ಅವರನ್ನೂ ಓನ್ ಸೈಡ್ ಲವ್ ಮಾಡಿದ್ದಷ್ಟೇ ಬಂತೇ ಹೊರತು ಬೇರೇನೂ ಗಿಟ್ಟಿರಲಿಲ್ಲ.

ಇಂಥಾ ಓವಿಯಾ ಕೈಯಲ್ಲಿ ಸದ್ಯಕ್ಕೆ ಹೇಳಿಕೊಳ್ಳುವಂತಹ ಕೆಲಸ ಇಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಕಳೆದ ಮೂರ್ನಾಲ್ಕು ವರ್ಷದಲ್ಲಿ ಓವಿಯಾ ಮಾಡಿದ್ದು ಕೇವಲ ಎರಡು ಸಿನಿಮಾ ಮಾತ್ರ. ಸಿನಿಮಾದ ಬದಲು ಇಲ್ಲ-ಸಲ್ಲದ ಮಾತುಗಳನ್ನಾಡುವ ಮೂಲಕವೇ ಪ್ರಚಲಿತದಲ್ಲಿರುವ ಪ್ರಯತ್ನವನ್ನು ಮಾಡುತ್ತಿರುವ ಓವಿಯಾ, ಈ ಹಿಂದೆ.. ಸಲಿಂಗಕಾಮದ ವಿಷಯ ಮಾತನಾಡಿದ್ದರು. ನನಗೆ ಗಂಡನ ಅವಶ್ಯಕತೆಯಿಲ್ಲ. ನಾನು ಮದುವೆಯಾಗಲ್ಲ , ನಾನು ಮದುವೆ ಆಗದೇ ಇರುವುದಕ್ಕೆ ನನ್ನನ್ನು ಕೆಲವರು ಸಲಿಂಗಕಾಮಿ ಎಂದು ತಿಳಿದಿದ್ದಾರೆ. ನಾನು ನೀವಂದುಕೊಂಡಂತೆ ಅಲ್ಲ ಎಂದಿದ್ದರು. ಆ ನಂತರ ಬಿಗ್ ಬಾಸ್‌ ಮನೆಯಲ್ಲಿ ಇದ್ದು ಬಂದು, ಬಿಗ್ ಬಾಸ್‌ನ ಬ್ಯಾನ್ ಮಾಡಬೇಕೆಂದು ಆಗ್ರಹಿಸಿದರು. ಶಾಲೆಗೆ ಹೋಗಿ ಸಮಯ ಮತ್ತು ಹಣ ಹಾಳು ಮಾಡಿಕೊಂಡೆ ಎನ್ನುವ ಮೂಲಕ ಕಟು ಟೀಕೆಗೊಳಗಾದರು. 2021ರಲ್ಲಿ ನರೇಂದ್ರ ಮೋದಿ ಚೆನ್ನೈಗೆ ಆಗಮಿಸಿದ್ದಾಗ #GoBackModi ಎಂದು ಟ್ವೀಟ್ ಮಾಡುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು.

Actress Oviya reacts to the leaked private video online saying Enjoy

ಇನ್ನೂ.. ವೇಶ್ಯಾವಾಟಿಕೆಯ ಕಾನೂನುಬದ್ಧತೆ ಮತ್ತು ಲೈಂಗಿಕ ಶಿಕ್ಷಣದ ಕುರಿತು ಕೂಡ ಹಿಂದೊಮ್ಮೆ ಓವಿಯಾ ಮುಕ್ತವಾಗಿ ಮಾತನಾಡಿದ್ದರು. ವೇಶ್ಯಾವಾಟಿಕೆಯನ್ನು ಕಾನೂನು ಬದ್ಧ ಮಾಡಿದರೆ, ಅತ್ಯಾಚಾರವನ್ನು ತಡೆಗಟ್ಟಬಹುದು ಎಂಬ ಹೇಳಿಕೆಯನ್ನೂ ನೀಡಿದ್ದರು. ಅತ್ಯಾಚಾರಕ್ಕೆ ಕಡಿವಾಣ ಹಾಕಲು ಇದೊಂದು ಸೂಕ್ತ ಮಾರ್ಗ ಎಂದು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದ್ದರು. ಎಲ್ಲರೂ ಇಂದು ಮುಖವಾಡವನ್ನು ಧರಿಸಿ ಬದುಕುತ್ತಿದ್ದಾರೆ, ಕಡ್ಡಾಯವಾಗಿ ಲೈಂಗಿಕ ಶಿಕ್ಷಣ ನೀಡಬೇಕು ಎಂದು ಆಗ್ರಹವನ್ನು ಮಾಡಿದ್ದರು.

ಹೀಗೆ ಕಾಲ ಕಾಲಕ್ಕೆ ವಿವಾದಗಳಿಂದ ಸದ್ದು ಮಾಡುತ್ತಾ, ಸುದ್ದಿಯಾಗುತ್ತಾ ಬಂದ ಓವಿಯಾ ಅವರ ಖಾಸಗಿ ವಿಡಿಯೋ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ. ಹೀಗೊಂದು ಸುದ್ದಿ ಎಲ್ಲೆಡೆ ಹಬ್ಬಿದೆ. ವಿಡಿಯೋ ಎಲ್ಲಿದೆ ಎಂದು ಅನೇಕರಿಂದ ಹುಡುಕಾಟ ಕೂಡ ಶುರುವಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ Oviya Leaked ಎಂಬ ಹ್ಯಾಶ್ ಟ್ಯಾಗ್ ಎಕ್ಸ್‌ ನಲ್ಲಿ ಟ್ರೆಂಡಿಂಗ್‌ನಲ್ಲಿದೆ.

Actress Oviya reacts to the leaked private video online saying Enjoy

ಇನ್ನೂ.. ವಿಡಿಯೋವನ್ನು ಕಣ್ತುಂಬಿಕೊಂಡವರು 17 ಸೆಕೆಂಡ್ ಇರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನ ಜೊತೆ ಮಲಗಿರುವುದು ಓವಿಯಾನೇ ಎಂಬ ವಾದವನ್ನು ಮಾಡುತ್ತಿದ್ದಾರೆ. ಓವಿಯಾ ತೋಳಿನ ಮೇಲಿರುವ ಟ್ಯಾಟೂ ಇದಕ್ಕೆ ಸಾಕ್ಷಿ ಎನ್ನುತ್ತಿದ್ದಾರೆ. ಮತ್ತೂ ಕೆಲವರು ಈಗೀಗ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುವರ ಸಂಖ್ಯೆ ಹೆಚ್ಚಾಗಿದೆ. ಓವಿಯಾ ಅವರದ್ದು ಎನ್ನಲಾದ ವಿಡಿಯೋ ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಓವಿಯಾ ಬಗ್ಗೆ ಹಾಗೆಲ್ಲ ಅಪಪ್ರಚಾರ ಮಾಡಬೇಡಿ ಎಂದು ನಟಿಯ ಪರ ಬೆಂಬಲದ ಮಾತುಗಳನ್ನಾಡುತ್ತಿದ್ದಾರೆ.

ನಿಜಕ್ಕೂ ವಿಡಿಯೋದಲ್ಲಿರುವುದು ಓವಿಯಾನಾ ಗೊತ್ತಿಲ್ಲ..? ಆದರೆ ಈ ಅನುಮಾನ ಸದ್ಯಕ್ಕೆ ಅನೇಕರನ್ನು ಕಾಡುತ್ತಿದೆ. ಹೀಗಾಗಿಯೇ ಗೊಂದಲಕ್ಕೀಡಾದವರ ರಾಯಭಾರಿಯಂತೆ ವ್ಯಕ್ತಿಯೊಬ್ಬ ನೇರವಾಗಿ ಓವಿಯಾ ಅವರಲ್ಲಿಯೇ ಈ ವಿಚಾರದ ಕುರಿತು ಪ್ರಶ್ನೆ ಕೇಳಿದ್ದಾನೆ. ಮೇಡಂ ನಿಮ್ಮ 17 ಸೆಕೆಂಡ್ ವಿಡಿಯೋವೊಂದು ಲೀಕ್ ಆಗಿದೆ ಎಂದಿದ್ದಾನೆ. ಆಶ್ಚರ್ಯ ಎಂದರೆ ಇದಕ್ಕೆ ಓವಿಯಾ ಬೋಲ್ಡ್ ಆಗಿಯೇ ಉತ್ತರಿಸಿರುವ ಓವಿಯಾ ಎಂಜಾಯ್ ಎಂದಿದ್ದಾರೆ.

Actress Oviya reacts to the leaked private video online saying Enjoy

ಓವಿಯಾ ಅವರ ಈ ಉತ್ತರದಿಂದ ಧೈರ್ಯ ಹೆಚ್ಚಾಗಿ, ಮತ್ತೊಬ್ಬ ವ್ಯಕ್ತಿ 17 ಸೆಕೆಂಡ್ ಮಾತ್ರಾನಾ ಫುಲ್ ವಿಡಿಯೋ ಇಲ್ಲವಾ ಎಂದು ಕೇಳಿದ್ದಾನೆ. ಇದಕ್ಕೂ ಉತ್ತರವನ್ನು ನೀಡಿರುವ ಓವಿಯಾ ಮುಂದಿನ ಬಾರಿ ಬ್ರೋ ಎಂದು ಹೇಳಿದ್ದಾರೆ. ಮತ್ತೊಬ್ಬ ನೇರವಾಗಿ ಓವಿಯಾ ಅವರಲ್ಲಿಯೇ ಲಿಂಕ್ ಕಳುಹಿಸುವಂತೆ ಕೇಳಿದ್ದಾನೆ.

ಸದ್ಯಕ್ಕೆ ಓವಿಯಾ ನೀಡಿರುವ ಈ ಉತ್ತರಗಳ ಕುರಿತು ಚರ್ಚೆಯಾಗುತ್ತಿದೆ. ಯಾಕೆಂದರೆ ಸಾಮಾನ್ಯವಾಗಿ ಈ ತರಹದ ಸುದ್ದಿಗಳಿಗೆ ಸೆಲೆಬ್ರಿಟಿಗಳು ಪ್ರತಿಕ್ರಿಯೆಯನ್ನು ನೀಡುವುದಿಲ್ಲ. ಬಹುತೇಕ ಬಾರಿ ನಮಗೆ ಸಂಬಂಧಿಸಿದ ವಿಡಿಯೋ ಎಲ್ಲ ಎಂದೇ ಹೇಳುತ್ತಾರೆ. ಈಗೀಗ ಡೀಪ್‌ ಫೇಕ್ ವಿಡಿಯೋ ಎಂದು ಕೈ ತೊಳೆದುಕೊಳ್ಳುತ್ತಾರೆ. ಆದರೆ.. ಓವಿಯಾ ಮಾತ್ರ ನೇರವಾಗಿಯೇ ಉತ್ತರ ಕೊಟ್ಟಿದ್ದಾರೆ. ಈ ಕಾರಣಕ್ಕೆ ಓವಿಯಾ ಅವರ ಈ ಆತ್ಮವಿಶ್ವಾಸವನ್ನು ಕಂಡು ಅನೇಕರು ಹರಿದಾಡುತ್ತಿರುವ ವಿಡಿಯೋ ಓವಿಯಾ ಅವರದ್ದಲ್ಲ ಎನ್ನುತ್ತಿದ್ದಾರೆ. ಓವಿಯಾ ಅವರದ್ದೇ ಆಗಿದ್ದರೂ ಕೂಡ ಇದರ ಹಿಂದೆ ಯಾರದ್ದೋ ಇರಬಹುದು ಎಂಬ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

Read more about: oviya actress leak
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X