Gautami Tadimalla: ನೋವಿನಲ್ಲಿಯೇ 25 ವರ್ಷಗಳ ಬಿಜೆಪಿ ಜೊತೆಗಿನ ಸಂಬಂಧಕ್ಕೆ ಎಳ್ಳುನೀರು ಬಿಟ್ಟ ನಟಿ ಗೌತಮಿ! ಕಾರಣವೇನು?

ಸಿನಿಮಾ ಹಾಗೂ ರಾಜಕೀಯದಲ್ಲಿ ತಮ್ಮದೇ ಆದ ವ್ಯಕ್ತಿತ್ವದಿಂದ ಮಿಂಚುತ್ತಿರುವ ದಕ್ಷಿಣದ ನಟಿ ಗೌತಮಿ ತಡಿಮಲ್ಲ ಎರಡು ಕ್ಷೇತ್ರಗಳಲ್ಲಿ ಸಂಚಲನ ಮೂಡಿಸುವ ನಿರ್ಧಾರ ಕೈಗೊಂಡಿದ್ದಾರೆ. ಕಳೆದ 25 ವರ್ಷಗಳಿಂದ ಬಿಜೆಪಿಯಲ್ಲಿರುವ ಅವರು ಪಕ್ಷದ ಜೊತೆಗೆ ಎಲ್ಲಾ ಸಂಬಂದ ಕಡಿದುಕೊಂಡಿದ್ದಾರೆ.

ಗೌತಮಿ ಅವರ ಈ ನಿರ್ಧಾರ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ತಮಿಳುನಾಡು ರಾಜಕೀಯದಲ್ಲಿ ಅವರು ಬಿಜೆಪಿ ಪರ ಗಟ್ಟಿಯಾಗಿ ನಿಂತ ದಿಟ್ಟ ರಾಜಕಾರಣಿ ಅವರು. ಹೀಗಾಗಿಯೇ ಅವರು ಬಿಜೆಪಿಗೆ ರಾಜೀನಾಮೆ ನೀಡಿರುವುದು ತಮಿಳುನಾಡಿನಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ಗೌತಮಿ ಅವರ ರಾಜೀನಾಮೆಗೆ ಕಾರಣಗಳೇನು ಎಂಬುದನ್ನು ತಿಳಿಯೋಣ.

Actress, politician Gautami Tadimalla quits BJP After 25 Years

ನಟಿ ಗೌತಮಿ ರಾಜೀನಾಮೆಗೆ ಕಾರಣವೇನು?

ಗೌತಮಿ ರಾಜೀನಾಮೆಗೆ ಹಲವು ಕಾರಣಗಳಿದ್ದರೂ ಕೆಲ ವಿಚಾರಗಳಲ್ಲಿ ತನಗೆ ದ್ರೋಹ ಬಗೆದಿರುವ ವ್ಯಕ್ತಿಗೆ ಪಕ್ಷದ ಕೆಲವು ಮುಖಂಡರು ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಟಿ, ರಾಜಕಾರಣಿ ಗೌತಮಿ ತಡಿಮಲ್ಲ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಈ ಅನಿರೀಕ್ಷಿತ ನಿರ್ಧಾರ ಕೈಗೊಂಡಿದ್ದಾರೆ.

"ಇಂದು ನಾನು ನನ್ನ ಜೀವನದಲ್ಲಿ ಊಹಿಸಲಾಗದ ಬಿಕ್ಕಟ್ಟಿನ ಹಂತದಲ್ಲಿ ನಿಂತಿದ್ದೇನೆ. ನನಗೆ ಪಕ್ಷ ಮತ್ತು ನಾಯಕರಿಂದ ಯಾವುದೇ ಬೆಂಬಲವಿಲ್ಲ ಎಂದು ನನಗೆ ತಿಳಿದು ಬಂದಿದೆ. ಆದರೆ ಅವರಲ್ಲಿ ಹಲವರು ಸಕ್ರಿಯವಾಗಿ ಯಾರು ನನ್ನ ನಂಬಿಕೆಗೆ ದ್ರೋಹ ಬಗೆದಿದ್ದಾರೋ ಮತ್ತು ನನ್ನ ಜೀವನದ ಉಳಿತಾಯವನ್ನು ಕಬಳಿಸಿ ನನಗೆ ಮೋಸ ಮಾಡಿದ್ದಾರೋ ಆ ವ್ಯಕ್ತಿಗೆ ಸಹಾಯ ಮಾಡುತ್ತಿದ್ದಾರೆ ಮತ್ತು ಬೆಂಬಲಿಸುತ್ತಿದ್ದಾರೆ ಎಂಬುದು ಕೂಡ ನನ್ನ ಅರಿವಿಗೆ ಬಂದಿದೆ" ಎಂದು ಹಿರಿಯ ನಟಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

25 ವರ್ಷಗಳ ಒಡನಾಟ ಮುರಿದ ನಟಿ ಗೌತಮಿ

ನಟಿ ಗೌತಮಿ ತಡಿಮಲ್ಲ ಅವರು ಬಿಜೆಪಿಯೊಂದಿಗೆ ಬರೋಬ್ಬರಿ 25 ವರ್ಷಗಳ ಒಡನಾಟ ಹೊಂದಿದ್ದವರು. ಪಕ್ಷದ ಕೆಲವು ನಾಯಕರು "ತನ್ನ ಆಸ್ತಿ, ಹಣ ಮತ್ತು ದಾಖಲೆಗಳನ್ನು ವಂಚಿಸಿದ ಸಿ ಅಳಗಪ್ಪನ್ ಅವರಿಗೆ "ಸಕ್ರಿಯವಾಗಿ ಸಹಾಯ ಮತ್ತು ಬೆಂಬಲ" ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Actress, politician Gautami Tadimalla quits BJP After 25 Years

ನಟಿ ತಮ್ಮ ಫೋಸ್ಟ್‌ನಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪಕ್ಷದ ತಮಿಳುನಾಡು ಮುಖ್ಯಸ್ಥ ಕೆ ಅಣ್ಣಾಮಲೈ ಅವರನ್ನು ಟ್ಯಾಗ್ ಮಾಡಿದ್ದಾರೆ. ಜೊತೆಗೆ "ಅತ್ಯಂತ ನೋವು ಮತ್ತು ದುಃಖದಿಂದ, ಆದರೆ ಅತ್ಯಂತ ದೃಢ ಸಂಕಲ್ಪದಿಂದ ರಾಜೀನಾಮೆಯನ್ನು ಬರೆಯುತ್ತಿದ್ದೇನೆ" ಎಂದು ತಮ್ಮ ಮನದ ನೋವನ್ನು ಹೊರಹಾಕಿದ್ದಾರೆ.

"ಅಳಗಪ್ಪನ್ ಸುಮಾರು 20 ವರ್ಷಗಳ ಹಿಂದೆ ನನ್ನ ದುರ್ಬಲತೆ ಮತ್ತು ನಾನು ಬೇರೆಯಾಗಿ ಇರುವುದನ್ನು ನೋಡಿ ನನ್ನನ್ನು ಸಂಪರ್ಕಿಸಿದ್ದರು. ನಾನು ನನ್ನ ಹೆತ್ತವರಿಬ್ಬರನ್ನೂ ಕಳೆದುಕೊಂಡಿದ್ದ ಅನಾಥೆ ಮಾತ್ರವಲ್ಲ, ಮಗುವಿನೊಂದಿಗೆ ಇರುವ ಒಂಟಿ ತಾಯಿ ಕೂಡ ಆಗಿದ್ದೆ. ಕಾಳಜಿ ಮಾಡುವ ಹಿರಿಯ ವ್ಯಕ್ತಿಯ ಸೋಗಿನಲ್ಲಿ ತನ್ನನ್ನು ಮತ್ತು ಅವನ ಕುಟುಂಬವನ್ನು ಹತ್ತಿರವಾಗಿಸಿದರು. ಸುಮಾರು 20 ವರ್ಷಗಳ ಹಿಂದೆ ನಾನು ನನ್ನ ಹಲವಾರು ಜಮೀನುಗಳ ಮಾರಾಟ ಮತ್ತು ದಾಖಲೆಗಳನ್ನು ಅವರಿಗೆ ವಹಿಸಿಕೊಟ್ಟೆ. ಅವರು ನನಗೆ ಮೋಸ ಮಾಡಿದ್ದಾರೆಂದು ನಾನು ಇತ್ತೀಚೆಗೆ ಪತ್ತೆಹಚ್ಚಿದೆ. ನಾನು ನ್ಯಾಯಕ್ಕಾಗಿ ಹೋರಾಡುತ್ತಿರುವ ಒಂಟಿ ಮಹಿಳೆ ಮತ್ತು ಸಿಂಗಲ್ ಪೇರೆಂಟ್. 25 ವರ್ಷಗಳ ಪ್ರಯಾಣ ಇಂದು ಮುಕ್ತಾಯವಾಗಿದೆ" ಎಂದು ಬರೆದಿದ್ದಾರೆ.

More from Filmibeat

English summary
Actress Gautami Tadimalla quits BJP after 25 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X