For Quick Alerts
  ALLOW NOTIFICATIONS  
  For Daily Alerts

  ನಟಿ ಪ್ರಣೀತಾ ಭಾರೀ ಕಿರಿಕ್ಕು ಎಂಬ ಸುದ್ದಿ ನಿಜವೇ?

  |

  ತಮಿಳು ಚಿತ್ರ 'ಸಗುನಿ (ಕನ್ನಡದಲ್ಲಿ ಶಕುನಿ)'ಯಲ್ಲಿ ಯಶಸ್ವಿಯಾಗಿರುವ ಪ್ರಣೀತಾ ಅದೃಷ್ಟ ಖುಲಾಯಿಸಿದೆ. ಆದರೆ ಅದರ ಜೊತೆಯಲ್ಲೇ ಸಣ್ಣಪುಟ್ಟ ಹೀರೋಗಳಿಗೆ ದುರಾದೃಷ್ಟವೂ ಬಂದೆರಗಿದೆ ಎಂಬ ಸುದ್ದಿ ಎಲ್ಲಡೆ ಹರಿದಾಡುತ್ತಿದೆ. ಕನ್ನಡದ ಪೊರ್ಕಿ ಚಿತ್ರದಲ್ಲೂ ನಟಿಸಿರುವ ಪ್ರಣೀತಾ, ನಂತರ ಜರಾಸಂಧ ಚಿತ್ರದಲ್ಲಿ ದುನಿಯಾ ವಿಜಯ್ ಅವರಿಗೆ ಜೋಡಿಯಾಗಿದ್ದರು.

  ಜರಾಸಂಧ ನಂತರ ಕನ್ನಡದಲ್ಲಿ, ಐವರು ನಾಯಕರಿಗೆ ಒಬ್ಬರೇ ನಾಯಕಿಯಾಗಿ 'ಸ್ನೇಹಿತರು' ಚಿತ್ರದಲ್ಲಿ ಪ್ರಣೀತಾ ಸುಭಾಷ್‌ ನಟಿಸಿದ್ದಾರೆ. ಅವರಿಗೀಗ ಭಯಂಕರ ಎನ್ನುವಷ್ಟು ಡಿಮ್ಯಾಂಡ ಸೃಷ್ಟಿಯಾಗಿದೆ. ತಮಿಳು ಸ್ಟಾರ್ ಸೂರ್ಯ ತಮ್ಮ ಕಾರ್ತಿ ಜೊತೆ ನಟಿಸಿದ ಚಿತ್ರ ಸಗುನಿ ನಂತರ ಪ್ರಣೀತಾ, ಸೂರ್ಯ ಅವರ ಮುಂದಿನ 'ತುಪ್ಪರಿಯಂ ಆನಂದನ್' ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಕರಾರಿಗೆ ಸಹಿ ಹಾಕುವುದು ಮಾತ್ರ ಬಾಕಿ ಇದೆಯಂತೆ.

  ಆದರೆ ಅಷ್ಟರಲ್ಲೇ ಪ್ರಣೀತಾ ಕಿರಿಕ್ಕುಗಳು ಶುರುವಾಗಿದೆ ಎಂಬು ಸುದ್ದಿ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಹೊಸ ನಟರಿಗೆ ನಾಯಕಿಯಾಗಲು ಕಾಲ್ ಶೀಟ್ ಕೇಳಿದರೆ ಕಡ್ಡಿ ಮುರಿದಂತೆ 'ಆಗೊಲ್ಲ' ಎನ್ನುತ್ತಾರೆ ಎಂಬುದು ಸದ್ಯಕ್ಕೆ ಪ್ರಣೀತಾ ಮೇಲಿರುವ ದೂರು. ಹೊಸಬರು ಚಿಲ್ಲರೆ ಹೀರೋಗಳು ಎಂಬ ಮಾತನ್ನು ಪ್ರಣೀತಾ ಹೇಳುತ್ತಾರೆ ಎನ್ನಲಾಗಿದೆ.

  ಆದರೆ, ಈ ಎಲ್ಲಾ ವಿಷಯಗಳನ್ನು ಪ್ರಣೀತಾ ಅಲ್ಲಗಳೆದಿದ್ದಾರೆ. "ನನಗೆ ನಾಯಕರಾಗಿ ಯಾರು ನಟಿಸುತ್ತಾರೆ ಅನ್ನೋದು ಮುಖ್ಯವಲ್ಲ. ಕಥೆ ಹಾಗೂ ನನ್ನ ಪಾತ್ರವಷ್ಟೇ ಮುಖ್ಯ" ಎಂದಿದ್ದಾರೆ ಪ್ರಣೀತಾ. ಅಷ್ಟೇ ಅಲ್ಲ, "ನಾನೂ ಕೂಡ ಹೊಸಬಳೇ. ಈಗಲೂ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಹೀಗಿರುವಾಗ ಹೊಸಬರ ಜೊತೆ ಮಾಡುವುದಿಲ್ಲವೆಂದು ಹೇಳುವುದು ಹೇಗೆ?" ಎಂದು ಪ್ರಶ್ನಿಸಿದವರನ್ನೇ ತಿರುಗಿ ಪ್ರಶ್ನೆ ಕೇಳುತ್ತಾರೆ.

  ತಮಗೆ ಸಗುನಿಯಂತಹ ಸೂಪರ್ ಹಿಟ್ ಚಿತ್ರದಲ್ಲಿ ಅವಕಾಶ ಕೊಟ್ಟ ತಮಿಳು ಚಿತ್ರರಂಗದ ಬಗ್ಗೆ ಪ್ರಣೀತಾರಿಗೆ ಕೃತಜ್ಞತೆಯಿದೆ. ಜೊತೆಗೆ ತಮಿಳು ಚಿತ್ರದಲ್ಲಿ ನಟಿಸಿರುವ ಹೆಮ್ಮೆಯೂ ಇದೆ. ನಿರ್ದೇಶಕ ಶಂಕರ್ ದಯಾಳ್, ನಾಯಕ ಕಾರ್ತಿ ಮುಂತಾದವರನ್ನು ಹೋದಲ್ಲೆಲ್ಲಾ ಬಹಳಷ್ಟು ಹೊಗಳುವ ಈ ನಟಿ ತಮಗೆ ತಮಿಳು ಗೊತ್ತಿಲ್ಲದಿದ್ದರೂ ಚೆನ್ನಾಗಿ ನಡೆಸಿಕೊಂಡರು, ಯಾರೂ ತೊಂದರೆ ಕೊಡಲಿಲ್ಲ ಎಂದಿದ್ದಾರೆ.

  ಕನ್ನಡದಲ್ಲಿ ಈಗಷ್ಟೇ ಸ್ನೇಹಿತರು ಚಿತ್ರ ಮುಗಿಸಿರುವ ಪ್ರಣೀತಾ, ಮುಂದೆ ಕಿಚ್ಚ ಸುದೀಪ್ 'ಬಚ್ಚನ್' ಮತ್ತು ಗೋಲ್ಡನ್ ಸ್ಟಾರ್ ಗಣೇಶ್ 'ಮಿಸ್ಟರ್ 420'ಯಲ್ಲಿ ನಟಿಸಬೇಕಿದೆ. ಇನ್ನು ತಮಿಳಿನಲ್ಲಿ ಸೂರ್ಯ ನಾಯಕನಾಗಿರುವ 'ತುಪ್ಪರಿಯಂ ಆನಂದನ್' ಚಿತ್ರ ಪಕ್ಕಾ ಆಗಿ ಅದು ಯಾವಾಗ ಪ್ರಾರಂಭವಾಗಲಿದೆಯೋ, ಕಾದು ನೋಡಬೇಕು. ಆದರೆ ಯಾಕೆ ಪ್ರಣೀತಾ ಹೀಗೆಲ್ಲಾ ಸುದ್ದಿಯಾಗುತ್ತಿದ್ದಾರೆ? ಸುದ್ದಿ ನಿಜವೇ...! (ಒನ್ ಇಂಡಿಯಾ ಕನ್ನಡ)

  English summary
  Kannada Actress Pranitha acted in Tamil movie Saguni with actor Karthi. Now, There is news buzz that the actress is demanding more and rejecting the offers of upcoming Hero's movies. But the actress rejected this Rumor and told that she is also upcoming artist and waiting for good opportunities.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X