ನಟ ಸೂರ್ಯ ಚಿತ್ರದಲ್ಲಿ ಪ್ರಣೀತಾಗೆ ಭರ್ಜರಿ ಚಾನ್ಸ್
ಈಗಾಗಲೆ ಪ್ರಣೀತಾ ಅಭಿನಯದ ತಮಿಳು, ತೆಲುಗು ದ್ವಿಭಾಷಾ ಚಿತ್ರ 'ಸಗುನಿ' (ತೆಲುಗಿನಲ್ಲಿ 'ಶಕುನಿ') ಬಾಕ್ಸಾಫೀಸಲ್ಲಿ ಭಾರಿ ಸೌಂಡ್ ಮಾಡಿದೆ. ಚಿತ್ರದ ನಾಯಕ ನಟ ಕಾರ್ತಿ. ಈ ಕಾರ್ತಿ ಬೇರಾರು ಅಲ್ಲ ಸೂರ್ಯ ಸಹೋದರ. ತಮ್ಮನ ಜೊತೆಗೆ ಪರದೇ ಮೇಲೆ ರೊಮಾನ್ಸ್ ಮಾಡಿದ ಪ್ರಣೀತಾ ಈಗ ಅಣ್ಣನ ಜೊತೆ ಸರಸವಾಡಲಿದ್ದಾರೆ.
ಸೂರ್ಯ ಜೊತೆಗಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಗೌತಮ್ ಮೆನನ್. ಚಿತ್ರಕ್ಕೆ 'ತುಪ್ಪಾರಿಯಮ್ ಆನಂದಂ' ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಪ್ರಣೀತಾ ಅವರದು ಎರಡನೇ ನಾಯಕಿ ಪಾತ್ರ. ಇನ್ನೊಬ್ಬ ನಾಯಕಿಯ ಆಯ್ಕೆ ಇನ್ನೂ ಅಂತಿಮವಾಗಿಲ್ಲ.
ಆಕ್ಷನ್ ಕಟ್ ಹೇಳುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಗೌತನ್ ಮೆನನ್ ಹೊತ್ತಿದ್ದಾರೆ. ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಈ ಚಿತ್ರ ಸೆಟ್ಟೇರಬೇಕಾದರೆ 2013ರ ತನಕ ಕಾಯಬೇಕು.
ಆಕ್ಷನ್ ಪ್ರಧಾನವಾದ ಈ ಚಿತ್ರದ ಕಥಾವಸ್ತು ಸಮಕಾಲೀನ ಘಟನೆಗಳು. ಕನ್ನಡದಲ್ಲಿ ಪ್ರಣೀತಾ ಅಭಿನಯದ 'ಭೀಮಾ ತೀರದಲ್ಲಿ' ಚಿತ್ರ ನಾನಾ ಕಾರಣಗಳಿಗಾಗಿ ಸಕ್ಸಸ್ ಆಗಿದೆ. ಇದಕ್ಕೂ ಮುನ್ನ ಬಂದ 'ಜರಾಸಂಧ' ಹಾಡುಗಳಲ್ಲಿ ಗೆದ್ದಿತಾದರೂ ಬಾಕ್ಸಾಫೀಸಲ್ಲಿ ಪಲ್ಟಿಹೊಡೆಯಿತು.
ಪ್ರಣೀತಾ ಅಭಿನಯದ ಬಹುತಾರಾಗಣದ 'ಸ್ನೇಹಿತರು' ಚಿತ್ರೀಕರಣ ಕೊನೆ ಹಂತದಲ್ಲಿದೆ. ಏತನ್ಮಧ್ಯೆ ಪ್ರಣೀತಾ ಮೇಲೆ ಭಾರಿ ಆರೋಪವೊಂದು ಕೇಳಿಬಂದಿತ್ತು. ಅದು, ಭಾರೀ ಧಿಮಾಕಿನ ಹುಡುಗಿ ಎಂಬ ಆರೋಪ.
"ನೀವು ನಟಿಸಿರುವ ಕೆಲವು ಶಾಟ್ ಗಳ ಔಟ್‌ಪುಟ್ ಸರಿಯಾಗಿ ಬಂದಿಲ್ಲ, ಅದನ್ನು ರೀಶೂಟ್ ಮಾಡೋಣ ಅಂತ ನಿರ್ಧರಿಸಿದ್ದೀವಿ" ಅಂತ ಆ ಚಿತ್ರದ ತಮಿಳು ನಿರ್ದೇಶಕರು ಫೋನ್ ಮಾಡಿದ್ದಾರೆ. ಆದರೆ, "ನೋ.. ನೋ.. ನಂಗೆ ಟೈಮಿಲ್ಲ.. ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದೀನಿ... ಡಿಸ್ಟರ್ಬ್ ಮಾಡಬೇಡಿ.." ಎಂದು ಪ್ರಣೀತಾ ಫೋಟ್ ಕಟ್ ಮಾಡಿದ್ದಾರಂತೆ.
ಇದಕ್ಕೆ ಆಕೆಯ ಮೇಲೆ ಧಿಮಾಕಿನ ಹುಡುಗಿ ಎಂಬ ಮುದ್ರೆ ಬಿದ್ದಿತ್ತು. ಆದರೆ ಪ್ರಣೀತಾ ಈ ಮಾತುಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಶಕುನಿ ಚಿತ್ರದಲ್ಲಿ ನನ್ನ ಪಾತ್ರ ಪ್ಯಾಟೆ ಹುಡುಗಿಯದ್ದು. ಆದರೆ ತುಂಬಾ ಸರಳ ಹಾಗೂ ಮುಗ್ಧೆಯ ಪಾತ್ರ. ನಿಜ ಜೀವನಕ್ಕೂ ಪಾತ್ರಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. (ಏಜೆನ್ಸೀಸ್)


Click it and Unblock the Notifications












