For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಗೆ ಲಕ್ಕಿ ಗರ್ಲ್ ರಮ್ಯಾ ಚಿತ್ರ ರೀಮೇಕ್

  By ಶಂಕರ್, ಚೆನ್ನೈ
  |

  ಗೊಲ್ಡನ್ ಗರ್ಲ್ ರಮ್ಯಾ ಅಭಿನಯ ಚಿತ್ರ ಬಾಲಿವುಡ್ ಗೆ ರೀಮೇಕ್ ಆಗುತ್ತಿದೆ. ಅದ್ಯಾವುದಪ್ಪಾ ಆ ಚಿತ್ರ ಎಂದು ಅಚ್ಚರಿಯಾಗುತ್ತಿದೆಯೇ. ಸ್ಯಾಂಡಲ್ ವುಡ್ ನಲ್ಲಿ 'ನೀರ್ ದೋಸೆ' ಹೆಂಗೂ ಬೇಯಲಿಲ್ಲ. ರಮ್ಯಾ ಯಾವುದೇ ಹೊಸ ಚಿತ್ರಗಳಿಗೂ ಸಹಿಹಾಕುತ್ತಿಲ್ಲ. ಆದರೆ ಹಳೆ ಚಿತ್ರ ಈಗ ಬಾಲಿವುಡ್ ಗೆ ರೀಮೇಕ್ ಆಗುತ್ತಿದೆ.

  ತಮಿಳು ನಟ ಧನುಷ್ ಅಭಿನಯದ ಚಿತ್ರಗಳಲ್ಲಿ 'ಪೊಲ್ಲದವನ್' (ಕನಿಕರವಿಲ್ಲದ ಮನುಷ್ಯ) ಅತ್ಯಂತ ಸಕ್ಸಸ್ ಫುಲ್ ಚಿತ್ರ. ವೆಟ್ರಿಮಾರನ್ ನಿರ್ದೇಶನದ ಈ ಚಿತ್ರ ತಮಿಳಿನ ಕಮರ್ಷಿಯಲ್ ಚಿತ್ರಗಳಲ್ಲೇ ಅತ್ಯುತ್ತಮ ಚಿತ್ರ ಎಂಬ ಗೌರವಕ್ಕೆ ಪಾತ್ರವಾಗಿದೆ. 2007ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಗೋಲ್ಡನ್ ಗರ್ಲ್ ರಮ್ಯಾ ನಾಯಕಿ.

  ಈಗ ಈ ಚಿತ್ರವನ್ನು ಬಾಲಿವುಡ್ ನಲ್ಲಿ ರೀಮೇಕ್ ಮಾಡಲಾಗುತ್ತಿದೆ. ಶೇಖರ್ ಸೂರಿ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ 'ಗನ್ಸ್ ಆಫ್ ಬ್ಯಾನರೀಸ್' ಎಂದು ಹೆಸರಿಡಲಾಗಿದೆ. ಕರಣ್ ನಾಥ್ ಚಿತ್ರದ ನಾಯಕ ನಟ. ಈ ಚಿತ್ರದ ಮತ್ತೊಬ್ಬ ನಾಯಕ ಗಣೇಶ್ ವೆಂಕಟ ರಾಮನ್.

  ತಮಿಳಿನಲ್ಲಿ ಏಳು ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ್ದ ಪೊಲ್ಲದವನ್ ಚಿತ್ರ ಬಾಕ್ಸ್ ಆಫೀಸಲ್ಲಿ ರು. 34 ಕೋಟಿ ಬಾಚಿತ್ತು. ಈ ಚಿತ್ರದಲ್ಲಿ ಕಿಶೋರ್ ಸಹ ಅಭಿನಯಿಸಿದ್ದರು. ಮೂಲ ಚಿತ್ರಕ್ಕೆ ಸಂಗೀತ ನೀಡಿದ್ದ ಜಿ ವಿ ಪ್ರಕಾಶ್ ಕುಮಾರ್ ಬಾಲಿವುಡ್ ಚಿತ್ರಕ್ಕೂ ಹಿನ್ನೆಲೆ ಸಂಗೀತ ನೀಡಲಿದ್ದಾರೆ. (ಏಜೆನ್ಸೀಸ್)

  English summary
  Golden Girl Ramya's superhit Tamil film Polladhavan to be remade in Hindi as Guns of Benares directed by by Shekar Suri. The remake venture will have Karan Nath playing the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X